ತಂತ್ರಕ್ಕೆ ಪ್ರತಿತಂತ್ರ: ಚೀನಾಗೆ ಸೆಡ್ಡು ಹೊಡೆಯಲು ಗಡಿಯಲ್ಲಿ ಸಬ್ ಸಾನಿಕ್ ‘ನಿರ್ಭಯಾ ಕ್ಷಿಪಣಿ’ ನಿಯೋಜಿಸಿದ ಭಾರತ-ಕಹಳೆ ನ್ಯೂಸ್
ನವದೆಹಲಿ: ಪೂರ್ವ ಲಡಾಕ್ ನಲ್ಲಿ ಸದ್ಯ ಅತ್ಯಂತ ಕಠಿಣ, ಅಹಿತಕರ ವಾತಾವರಣ ನಿರ್ಮಾಣವಾಗಿದ್ದು ಚೀನಾವನ್ನು ಎದುರಿಸಲು ಗಡಿಯಲ್ಲಿ 800 ಕಿ.ಮೀ ದೂರಕ್ಕೆ ಸಾಗಬಲ್ಲ ನಿರ್ಭಯಾ ಕ್ಷಿಪಣಿ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನೂ ಭಾರತ ನಿಯೋಜಿಸಿದೆ. ಟಿಬೆಟ್ ಹಾಗೂ ಕ್ಸಿನ್ ಝಿಯಾಂಗ್ ಪ್ರದೇಶದಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡರ್ ಸುಮಾರು 2 ಸಾವಿರ ಕಿಲೋಮೀಟರ್ ದೂರ ಸಾಗಿ ಶತ್ರು ಪಾಳಯದ ಗುರಿಯನ್ನು ಭೇದಿಸಬಲ್ಲ ಕ್ಷಿಪಣಿಗಳನ್ನು ನಿಯೋಜಿಸಿದ್ದು ಇದಕ್ಕೆ ಪ್ರತಿಯಾಗಿ ಭಾರತ...