ಆಸ್ಪತ್ರೆಯಲ್ಲಿದ್ದ ಸೋಂಕಿತ ಮುತ್ತುಕುಮಾರ್ಗೆ ಕದ್ದು ಮುಚ್ಚಿ ಎಣ್ಣೆ ತಂದುಕೊಟ್ಟ 38 ವರ್ಷದ ಮಹಿಳೆ – ಕಹಳೆ ನ್ಯೂಸ್
ಚೆನ್ನೈ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ಪತಿಗೆ 38 ವರ್ಷದ ಮಹಿಳೆಯೊಬ್ಬರು ಮದ್ಯ ತಂದುಕೊಟ್ಟು ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ತಮಿಳುನಾಡಿನ ಕುದ್ದಲೂರಿನ ಚಿದಂಬರಂನ ರಾಜಾ ಮುತ್ತಯ್ಯ ವೈದ್ಯಕೀಯ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಪತಿಗೆ ಮದ್ಯ ತಂದುಕೊಟ್ಟಿದ್ದಕ್ಕೆ ಮಹಿಳೆಯನ್ನು ಬಂಧಿಸಲಾಗಿದೆ. ಕುಡಿದ ಮತ್ತಿನಲ್ಲಿ ಮಹಿಳೆಯ ಪತಿ ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಟಿ.ಮುತ್ತುಕುಮಾರ್(48) ಅವರಿಗೆ ವಾರದ ಹಿಂದೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತು....