ಕೊನೆಗೂ ನನಸಾಯ್ತು ಚಿರಂಜೀವಿ ಸರ್ಜಾ ಕನಸು : ಸೆ.02ರಂದು ತೆರೆ ಮೇಲೆ ಬರಲಿದೆ ರಾಜ ಮಾರ್ತಾಂಡ – ಕಹಳೆ ನ್ಯೂಸ್
ಬೆಂಗಳೂರು: ಸ್ಯಾಂಡಲ್ ವುಡ್ ನ ಸ್ಮೈಲ್ ಕಿಂಗ್ ಚಿರಂಜೀವಿ ಸರ್ಜಾ ಇನ್ನಿಲ್ಲವಾಗಿದ್ದರೂ ಚಂದನವನದಲ್ಲಿ ಚಿರು ಮೇಲೆ ಅಭಿಮಾನಿಗಳಿಗಿರೋ ಪ್ರೀತಿ ಕಡಿಮೆ ಯಾಗಿಲ್ಲ. ಹೀಗಾಗಿ ಇಂದಿಗೂ ಅಭಿಮಾನಿಗಳು ಚಿರುವನ್ನು ಕಣ್ತುಂಬಿಕೊಳ್ಳಲು ಕಾಯುತ್ತಲೇ ಇದ್ದಾರೆ. ಈಗ ಚಿರು ಅಭಿಮಾನಿಗಳ ಕಾಯುವಿಕೆಗೆ ಫಲ ಸಿಕ್ಕಿದ್ದು ಇದೇ ಸಪ್ಟೆಂಬರ್ 2 ರಂದು ಚಿರು ಅಭಿನಯದ ಕೊನೆಯ ಚಿತ್ರ ರಾಜ ಮಾರ್ತಾಂಡ ತೆರೆಗೆ ಬರಲು ಸಿದ್ಧವಾಗಿದೆ. ಚಿರಂಜೀವಿ ಸರ್ಜಾ ತುಂಬ ಪ್ರೀತಿಯಿಂದ ಹಾಗೂ ಅಷ್ಟೇ ಇಷ್ಟಪಟ್ಟು ನಟಿಸಿದ್ದ...