ಸಸ್ಪೆನ್ಸ್ ಥ್ರಿಲ್ಲರ್ ಚೇಜ಼್ನಲ್ಲಿ ಅರವಿಂದ್ ಬೋಳಾರ್ ಕಾಮಿಡಿ-ಕಹಳೆ ನ್ಯೂಸ್
ಸಿನಿಮಾಡೆಸ್ಕ್: ರಾಧಿಕಾ ನಾರಾಯಣ್ ಮತ್ತು ಅರವಿಂದ್ ನರಸಿಂಹರಾಜು ನಾಯಕ ನಾಯಕಿಯರಾಗಿ ನಟಿಸಿರುವ ಚಿತ್ರ ಚೇಜ್. ಶೀರ್ಷಿಕೆಯಂಥಾದ್ದೇ ಆವೇಗದ ಕಥೆಯನ್ನೊಳಗೊಂಡಿರೋ ಈ ಸಿನಿಮಾ ಖದರ್ ಎಂಥಾದ್ದೆಂಬುದು ಇತ್ತೀಚೆಗಷ್ಟೇ ಲಾಂಚ್ ಆಗಿರುವ ಟೀಸರ್ ಮೂಲಕವೇ ಜಾಹೀರಾಗಿದೆ. ಅದು ಮೂಡಿ ಬಂದಿರೋ ರೀತಿ, ಅದರಲ್ಲಿ ಮಿರುಗುವ ತಾಜಾತನ ಮತ್ತು ಹೊಸತನದ ಅನುಭೂತಿಗಳೇ ಪ್ರೇಕ್ಷಕರನ್ನೆಲ್ಲ ಮೋಡಿಗೀಡು ಮಾಡಿವೆ. ಈ ಸಸ್ಪೆನ್ಸ್ ಥ್ರಿಲ್ಲರ್ ಕಥಾನಕವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವಂಥಾ ಪಾತ್ರದಲ್ಲಿ ತುಳು ಚಿತ್ರರಂಗದ ಸ್ಟಾರ್ ಹಾಸ್ಯ ನಟ ಅರವಿಂದ...