ರೂಪೇಶ್ ಶೆಟ್ರ ” ಗಿರಿಗಿಟ್ “ಗೆ ಒಂದು ಕೋಟಿ – ಶ್ಯಾಮ ಸುದರ್ಶನ ಹೊಸಮೂಲೆ ( ಸಂಪಾದಕೀಯ ) – ಕಹಳೆ ನ್ಯೂಸ್
ತುಳುಚಲನಚಿತ್ರ ರಂಗ ಬಡವಾಗಿದೆಯೇ..? ಎಂಬ ಪ್ರಶ್ನೆಯನ್ನು ಪ್ರಶ್ನಿಸುತ್ತಿದೆ ತುಳು ಚಲನಚಿತ್ರಗಳ ನಾಗಾಲೋಟ ಹೌದು, ಹತ್ತು ಹಲವಾರು ಚಲನಚಿತ್ರಗಳು ತುಳುನಾಡಿನಲ್ಲಿ ಸದ್ದು ಮಾಡಿದೆ, ದೇಶ ವಿದೇಶದಲ್ಲೂ ಬಿಡುಗಡೆಯಾಗಿದೆ. ಆದರೆ, ಯಾವತ್ತೂ ಒಂದು ಪರೀದಿಯನ್ನು ಮೀರಿ ಮುಂದೆ ಹೋಗಿರಲಿಲ್ಲ ಎಂಬುದು ಇತಿಹಾಸ. ಇಂದು ಈ ಇತಿಹಾಸವನ್ನು ಆಳಿಸಿ, ತುಳುಚಿತ್ರರಂಗದ ಬಾಕ್ಸ್ ಆಫೀಸ್‌ನ್ನು ಕೊಳ್ಳೆಹೊಡೆದು, ತೆರೆಕಂಡ ಒಂದೇವಾರದಲ್ಲಿ ತುಳುನಾಡಿನ ಎಲ್ಲಾ ಚಿತ್ರಮಂದಿರಗಳಲ್ಲೂ " ಹೌಸ್ ಫುಲ್ ಶೋ "....! ವಿದೇಶದಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ....