Tuesday, January 21, 2025

ಸಿನಿಮಾ

ಸಿನಿಮಾ

ಇನ್‍ಸ್ಟಾಗ್ರಾಂಗೆ ಎಂಟ್ರಿ ಕೊಟ್ಟ ರಾಮ್‍ಚರಣ್ ತೇಜ್; ಫಸ್ರ್ಟ್ ಪೋಸ್ಟ್‍ಗೆ ಲೈಕ್ಸ್ ಎಷ್ಟು ಗೊತ್ತಾ..? – ಕಹಳೆ ನ್ಯೂಸ್

ಕೆಲವು ದಿನಗಳ ಹಿಂದೆಯಷ್ಟೇ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅವರು ಇನ್ಸ್ಟಾಗ್ರಾಂನಲ್ಲಿ ಪದಾರ್ಪಣೆ ಮಾಡಿದ್ದು ಗೊತ್ತೇ ಇದೆ. ಈ ವಿಷಯ ತಿಳಿಯುತ್ತಿದ್ದಂತೆ ಮಿಲಿಯನ್ ಗಟ್ಟಲೆ ಅಭಿಮಾನಿಗಳು ಫೊಲೊ ಮಾಡಿದ್ದಾರೆ. ಈಗ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಸಹ ಇನ್‍ಸ್ಟಾಗ್ರಾಂಗೆ ಸೇರಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ರಾಮ್ ಚರಣ್ ಪದಾರ್ಪಣೆ ಮಾಡಿರುವುದರಿಂದ ಅಭಿಮಾನಿಗಳು ತುಂಬಾ ಸಂತೋಷಗೊಂಡಿದ್ದಾರೆ. ಮಾತ್ರವಲ್ಲ ರಾಮ್ ಚರಣ್ ಅವರು ತಮ್ಮ ಇನ್‍ಸ್ಟಾಗ್ರಾಂ ಚಿತ್ರವನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಎಸ್‍ಎಸ್ ರಾಜಮೌಳಿ ಅವರೊಂದಿಗೆ...
ಸಿನಿಮಾ

ಶರಣ್ ಜೊತೆ ಹೊಸ ಅವತಾರವೆತ್ತಲಿದ್ದಾರೆ ಶ್ರೀನಗರ ಕಿಟ್ಟಿ– ಕಹಳೆ ನ್ಯೂಸ್

ಶರಣ್ ನಾಯಕರಾಗಿರುವ ‘ಅವತಾರ್ ಪುರುಷ’ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆಯೇ ‘ಅವತಾರ್ ಪುರುಷ’ ಸಿನಿಮಾ ಕುರಿತಾದ ಸುದ್ದಿಯೊಂದು ಹೊರಬಂದಿದೆ. ಅದು ಚಿತ್ರದಲ್ಲಿ ಸ್ಯಾಂಡಲ್‍ವುಡ್‍ನ ನಟರೊಬ್ಬರು ಗೆಸ್ಟ್ ಅಪಿಯರೆನ್ಸ್ ಮಾಡಿರುವುದು. ‘ಅವತಾರ್ ಪುರುಷ’ ಚಿತ್ರದಲ್ಲಿ ಡೈಮಂಡ್ ಸ್ಟಾರ್ ಬಿರುದಾಂಕಿತ ಶ್ರೀನಗರ ಕಿಟ್ಟಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದು, ಈಗಾಗಲೇ ಅವರ ಭಾಗದ ಚಿತ್ರೀಕರಣ ನಡೆಸಲಾಗಿದೆ. ಕಿಟ್ಟಿ ಈ ಹಿಂದೆ ಸುನಿ ನಿರ್ದೇಶನದ ‘ಬಹುಪರಾಕ್’ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದರು. ನಿರ್ದೇಶಕ ಸುನಿ...
ಸಿನಿಮಾ

ಮುಗ್ಗರಿಸುತ್ತಾ ಮುನಿರತ್ನನ `ಕುರುಕ್ಷೇತ್ರ’ – ಬಿಗ್ಗೆಸ್ಟ್ ಪ್ಲಾಪ್ ಪಟ್ಟಿಗೆ ಸೇರುತ್ತಾ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ..? – ಕಹಳೆ ನ್ಯೂಸ್

ಹೌದು ಈ ಒಂದು ಪ್ರಶ್ನೆ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳನ್ನು ಕಾಡದೇ ಇರದು. ಕಾರಣ ಬಹುನಿರೀಕ್ಷೆಯಿಂದ ಅಭಿಮಾನಿಗಳು ಕಾಯುತ್ತಿದ್ದ ಮುನಿರತ್ನ ನಿರ್ದೇಶನದ `ಕುರುಕ್ಷೇತ್ರ’ದ ಟ್ರೈಲರ್ ರಿಲೀಸ್ ನಿನ್ನೆ ಆಗಿದೆ. ಆದರೆ ಟ್ರೈಲರ್ ನೋಡಿದವರು, ದರ್ಶನ್ ಅಭಿಮಾನಿಗಳು ಚಿತ್ರದ ಮೇಲೆ ತೀವ್ರ ನಿರಾಸೆಗೊಳಗಾಗಿದ್ದಾರೆ. ಈ ಹಿಂದೆಯೇ ಚಿತ್ರದ ಮೂರು ಟೀಸರ್‍ ಗಳನನ್ನು ಬಿಟ್ಟಿದ್ದ ಚಿತ್ರತಂಡ, ಟೀಸರ್‍ ಗಳಿಗೆ ಒಳ್ಳೆಯ ಅಭಿಪ್ರಾಯಗಳು ಬಂದಿರಲಿಲ್ಲ. ಇದಕ್ಕೆ ಕಾರಣ ಕಳಪೆ ಗುಣಮಟ್ಟದ ಗ್ರಾಫಿಕ್ಸ್, ತೀರಾ...
ಸಿನಿಮಾ

‘ಕುರುಕ್ಷೇತ್ರ’ ಚಿತ್ರದ ಟ್ರೇಲರ್​ ಕುರಿತು ಅಭಿಮಾನಿಗಳು ಆಕ್ರೋಶ

ಬೆಂಗಳೂರು: ನಿನ್ನೆ(ಭಾನುವಾರ) ರಾತ್ರಿಯಷ್ಟೇ ಬಿಡುಗಡೆಯಾದ ಸ್ಯಾಂಡಲ್​​ವುಡ್​ನ ಬಹುತಾರಾಗಣದ ಹಾಗೂ  ಬಹುನಿರೀಕ್ಷಿತ ‘ಕುರುಕ್ಷೇತ್ರ’ ಚಿತ್ರದ ಟ್ರೇಲರ್​ ಕುರಿತು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಮೂಲಕ ಅಸಮಾಧಾನ ಹೊರಹಾಕಿರುವ ಅಭಿಮಾನಿಗಳು, ಈ ಹಿಂದಿನ ಟೀಸರ್​ಗಳನ್ನೇ ಜೋಡಿಸಿ ನಿರ್ಮಾಪಕ ಮುನಿರತ್ನ ಅವರು ಟ್ರೈಲರ್ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ದುರ್ಯೋಧನ ಪಾತ್ರದಲ್ಲಿ ನಟಿಸಿರುವ ದರ್ಶನ್​ ಹಾಗೂ ಅಭಿಮನ್ಯು ಪಾತ್ರದಲ್ಲಿ ಮಿಂಚಿರುವ ನಿಖಿಲ್​ ಕುಮಾರಸ್ವಾಮಿಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಟೀಸರ್​ಗಳನ್ನು ಈ ಹಿಂದೆ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿದ್ದ...
ಸಿನಿಮಾ

ಜಯಣ್ಣನೊಂದಿಗೆ ರುದ್ರ ಯಾಗಕ್ಕಿಳಿದ ರಿಷಭ್ ಶೆಟ್ಟಿ – ಕಹಳೆ ನ್ಯೂಸ್

ಕನ್ನಡ ಚಿತ್ರರಂಗ ಈಗ ಮೊದಲಿನಂತಿಲ್ಲ, ಹೊಸ ಹೊಸ ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಕನ್ನಡ ಚಿತ್ರರಂಗವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರೆ. ಅಂತಹ ನಿರ್ದೇಶಕರಲ್ಲಿ ರಿಷಭ್ ಶೆಟ್ಟಿ ಕೂಡಾ ಒಬ್ಬರು. ಇಂದು ರಿಷಭ್ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮದ ಜೊತೆಗೆ ತಮ್ಮ ಮುಂದಿನ ಚಿತ್ರ ‘ರುದ್ರ ಪ್ರಯಾಗ’ದ ಟೈಟಲ್ ಪೋಸ್ಟರನ್ನು ಕೂಡ ರಿಷಭ್ ರಿಲೀಸ್ ಮಾಡಿದ್ದಾರೆ. ಪೋಸ್ಟರ್ ಗಮನಿಸುತ್ತಿದ್ದಂತೆ ಇದೊಂದು ವಿಭಿನ್ನ ಕಥಾಹಂದರದ ಚಿತ್ರ ಎಂದು ಮನದಟ್ಟಾಗುತ್ತದೆ. ಕಾರಣ ಚಿತ್ರದ ಟೈಟಲ್...
ಸಿನಿಮಾಸುದ್ದಿ

ಸ್ವಾತಂತ್ರ್ಯ ದಿನಕ್ಕೆ ನಾವು ನೋಡಬಹುದು ಭಾರತದ ಪ್ರಥಮ ಮಂಗಳಯಾನ – ಕಹಳೆ ನ್ಯೂಸ್

ಭಾರತದ ಮಂಗಳಯಾನದ ಸತ್ಯ ಕಥೆಯಾಧಾರಿತ ‘ಮಿಷನ್ ಮಂಗಲ್’ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ ಎಂದು ಅಕ್ಷಯ್ ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ನಟಿಸಿರುವ ಎಲ್ಲ ಕಲಾವಿದರ ಫೋಟೋಗಳಿದ್ದು, ಕೆಳಗಡೆ ಮಂಗಳ ಗ್ರಹದ ಕ್ಷಕೆಯ ಸುತ್ತ ಗ್ರಹಗಳು ಸುತ್ತುತ್ತಿರುವಂತೆ ಕಾಣುತ್ತಿದೆ. ನೆಲದಿಂದ ಚಿಮ್ಮುತ್ತಿರುವ ಉಡಾವಣಾ ವಾಹಕ ಅಕ್ಷಯ್ ಕುಮಾರ್ ಹಾಗೂ ಇತರ ಕಲಾವಿದರನ್ನು ವಿಂಗಡಿಸಿದಂತೆ ಕಾಣುತ್ತಿದ್ದು, ಪೋಸ್ಟರ್‌ನ ಎರಡು ಕಡೆಗಳಲ್ಲಿ ನೀಲಿ ಬಣ್ಣ...
ಸಿನಿಮಾಸುದ್ದಿ

ಅತೀ ಶೀಘ್ರದಲ್ಲಿ ತರೆಗಪ್ಪಳಿಸಲಿದೆ ಬಹುನಿರೀಕ್ಷಿತ ‘ಇಂಗ್ಲೀಷ್’ – ಕಹಳೆ ನ್ಯೂಸ್

ಈ ಬಾರಿ ಕೋಸ್ಟಲ್‍ವುಡ್‍ನಲ್ಲಿ ‘ಕಟಪಾಡಿ ಕಟ್ಟಪ್ಪ’ ಚಿತ್ರ ಹಿಟ್ ಎನಿಸಿಕೊಂಡರೆ, ಮತ್ಯಾವ ಚಿತ್ರವೂ ಬಿಡುಗಡೆಗೆ ಮುನ್ನ ಮಾಡಿದ್ದ ಸದ್ದನ್ನು, ಬಿಡುಗಡೆಯ ನಂತರ ಮಾಡಲೇ ಇಲ್ಲ. ಕೊನೆಯದಾಗಿ ಬಿಡುಗಡೆಗೊಂಡ ತುಳು ಚಿತ್ರ ‘ಆಯೆ ಏರ್’. ಇದಾದ ಮೇಲೆ ‘ಅಪ್ಪೆ ಟೀಚರ್’ ಮತ್ತು ‘ಚಾಲಿಪೋಲಿಲು’ ಮರು ಬಿಡುಗಡೆಯಾದದ್ದನ್ನು ಬಿಟ್ರೆ, ಯಾವೊಂದು ತುಳು ಚಿತ್ರವೂ ಥಿಯೇಟರಿನತ್ತ ಸುಳಿಯಲಿಲ್ಲ. ಆದರೆ ಆಗಸ್ಟ್ ತಿಂಗಳಿನಲ್ಲಿ ಸಾಲು ಸಾಲು ತುಳು ಚಿತ್ರಗಳು ರಿಲೀಸ್‍ಗೆ ರೆಡಿಯಾಗುತ್ತಿವೆ ಅಂತಹವುಗಳಲ್ಲಿ ಮುಂಚೂಣಿಯ ಸ್ಥಾನದಲ್ಲಿರುವ...
ಸಿನಿಮಾ

ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ‘ಭರಾಟೆ’ ಬಿಡುಗಡೆ ದಿನಾಂಕ ಬಹಿರಂಗ – ಕಹಳೆ ನ್ಯೂಸ್

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ 'ಭರಾಟೆ' ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಸೆಪ್ಟೆಂಬರ್ 27ರಂದು ಭರಾಟೆ ಚಿತ್ರವು ದೇಶದಾದ್ಯಂತ ಬಿಡುಗಡೆಯಾಗಲಿದೆ ಎಂಬ ಅಧಿಕೃತ ಮಾಹಿತಿ, ಅನಧಿಕೃತವಾಗಿ ಚಿತ್ರತಂಡದಿಂದ ಹೊರಬಿದ್ದಿದೆ. 2017ರಲ್ಲಿ ಬಿಡುಗಡೆಯಾಗಿದ್ದ 'ಮಫ್ತಿ' ಚಿತ್ರದ ಬಳಿಕ ಶ್ರೀಮುರಳಿ ಅಭಿನಯದ ಯಾವುದೇ ಚಿತ್ರವು ತೆರೆಗೆ ಬಂದಿಲ್ಲ. ಈ ಕಾರಣಕ್ಕೆ ಮುರಳಿ ಅಭಿಮಾನಿಗಳು ಭರಾಟೆ ಚಿತ್ರವನ್ನು ಕುತೂಹಲದಿಂದ ಕಾಯುತ್ತಿದ್ದಾರೆ. ರೋರಿಂಗ್ ಸ್ಟಾರ್ ಕೈನಲ್ಲಿ ಬಹಳಷ್ಟು ಚಿತ್ರಗಳಿವೆ. ಭರಾಟೆ ಸೇರಿದಂತೆ ‘ನಂದೇ’, ‘ಮದಗಜ’,...
1 52 53 54 55 56 81
Page 54 of 81