ಮತ್ತೆ ಗದೆ ಹಿಡಿಯಲಿದ್ದಾರಾ ನಾಟ್ಯ ಸಾರ್ವಭೌಮ!? – ಕಹಳೆ ನ್ಯೂಸ್
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ವೃತ್ತಿ ಜೀವನದ ದಿ ಬೆಸ್ಟ್ ಚಿತ್ರಗಳಲ್ಲಿ ಒಂದು ಹರ್ಷ ನಿರ್ದೇಶನದ ‘ಭಜರಂಗಿ’. ಉತ್ತಮ ಕಥೆ, ಪಾತ್ರ, ಛಾಯಾಗ್ರಹಣ ಮತ್ತು ಸಂಗೀತದಿಂದಾಗಿ ‘ಭಜರಂಗಿ’ ಬ್ಲಾಕ್‍ಬಸ್ಟರ್ ಹಿಟ್ ಆಗಿತ್ತು. ಅದಾದ ಮೇಲೆ ಶಿವಣ್ಣ-ಹರ್ಷ ಕಾಂಬಿನೇಷನ್‍ನಲ್ಲಿ ಮೂಡಿ ಬಂದ ಚಿತ್ರ ‘ವಜ್ರಕಾಯ’ ಹೇಳಿಕೊಳ್ಳುವ ಯಶಸನ್ನು ತಂದುಕೊಟ್ಟಿರಲಿಲ್ಲ. ಆದರೆ ಇದೀಗ ಶಿವಣ್ಣ-ಹರ್ಷ ಕಾಂಬಿನೇಷನ್‍ನಲ್ಲಿ ಮೂರನೇ ಬಾರಿಗೆ ಚಿತ್ರವೊಂದು ಮೂಡಿ ಬರಲಿದ್ದು, ಚಿತ್ರಕ್ಕೆ ‘ಭಜರಂಗಿ 2’ ಎಂದು ಶೀರ್ಷಿಕೆಯನ್ನು ಅಂತಿಮಗೊಳಿಸಲಾಗಿದೆ. ಈ...