ನ್ಯಾಯಾಂಗದ ಮುಂದೆ ಶರಣಾಗಲು ಸೂಚನೆ ನೀಡದೆ,ನಕ್ಸಲರಿಗೆ ಪ್ಯಾಕೇಜ್ ಆಮಿಷ ಒಡ್ಡಿರುವುದು ಸರಕಾರದ ತಪ್ಪು ನಡೆ: ಡಾ.ಭರತ್ ಶೆಟ್ಟಿ ವೈ-ಕಹಳೆ ನ್ಯೂಸ್
ಸುರತ್ಕಲ್ : ಮಾವೋವಾದಿ ಎಡಚಿಂತನೆ ಮೈಗೂಡಿಸಿ ಕೊಂಡು ಬಡವರಿಗೆ ನ್ಯಾಯ ಕೊಡುವ ನೆಪ ಹೇಳಿಕೊಂಡು ಕಾನೂನು ದಿಕ್ಕರಿಸಿ ಕಾಡಿನಲ್ಲಿ ಉಳಿದು ಗೆರಿಲ್ಲಾ ಯುದ್ದ ನಡೆಸುವ ನಕ್ಸಲರಿಗೆ ತಪ್ಪಿನ ಅರಿವಾಗಿದ್ದರೆ ನ್ಯಾಯಾಂಗದ ಮುಂದೆ ಶರಣಾಗಲು ಸರಕಾರ ಸೂಚಿಸಬೇಕೆ ಹೊರತು ಹಣದ ಆಮಿಷ ಒಡ್ಡಿರುವುದು ತಪ್ಪು ನಿರ್ಧಾರ. ಪೊಲೀಸರು ಸಂಪೂರ್ಣ ನಿರ್ಮೂಲನೆಯತ್ತಾ ಹೆಜ್ಜೆ ಇಡುವಾಗಲೇ ಕಾಂಗ್ರೆಸ್ ಸರಕಾರ ಯಾರದೋ ಒತ್ತಡಕ್ಕೆ ಮಣಿದು ನಕ್ಸಲರಿಗೆ ರಾಜಮರ್ಯಾದೆ ನೀಡಲು ಮುಂದಾಗಿದೆ. ಸರಕಾರದ ನಿರ್ಧಾರ ತಪ್ಪು ಸಂದೇಶ...