ಅಕ್ಷಯ ಕಾಲೇಜಿನಲ್ಲಿ “ಸುಸ್ಥಿರತೆ – ಫ್ಯಾಷನ್ ನ ಭವಿಷ್ಯ” ಎಂಬ ಶೀರ್ಷಿಕೆಯಡಿ ಫ್ಯಾಷನ್ ಡಿಸೈನ್ ವಿಭಾಗದಿಂದ ಕಾರ್ಯಾಗಾರ-ಕಹಳೆ ನ್ಯೂಸ್
ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಫೆಸೇರ ಫ್ಯಾಷನ್ ಅಸೋಸಿಯೇಷನ್ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ, “ಸುಸ್ಥಿರತೆ - ಫ್ಯಾಷನ್ ನ ಭವಿಷ್ಯ” ಎಂಬ ಶೀರ್ಷಿಕೆಯಡಿ ಫ್ಯಾಷನ್ ಡಿಸೈನ್ ವಿಭಾಗದಿಂದ ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮ ದ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಪ್ರತಿಷ್ಠಿತ “Li'l ohana”ಸಂಸ್ಥೆಯ ಸ್ಥಾಪಕರು ಹಾಗೂ ಡಿಸೈನರ್ ಮತ್ತು ಸಹ ಪ್ರಾಧ್ಯಾಪಕಿ ಆದ ಶ್ರೀಮತಿ ಅಲ್ಕಾ ಮನೋಜ್...