ಅಂಬಿಕಾ ಮಹಾವಿದ್ಯಾಲಯದಲ್ಲಿ ‘ಸಾಹಿತ್ಯ ಮತ್ತು ಪತ್ರಿಕೋದ್ಯಮ’ ವಿಷಯದ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮ : ಪತ್ರಿಕಾ ಬರವಣಿಗೆಯೂ ಸಾಹಿತ್ಯದ ಒಂದು ಪ್ರಕಾರ : ರಾಕೇಶ ಕುಮಾರ್ ಕಮ್ಮಜೆ – ಕಹಳೆ ನ್ಯೂಸ್
ಪುತ್ತೂರು: ಸಾಹಿತ್ಯ ಮತ್ತು ಪತ್ರಿಕೋದ್ಯಮ ಭಿನ್ನ ಸಂಗತಿಗಳಲ್ಲ. ಸಾಹಿತ್ಯದಲ್ಲಿನ ವಿವಿಧ ಪ್ರಕಾರಗಳಂತೆ ಪತ್ರಿಕಾ ಸಾಹಿತ್ಯವೂ ಒಂದು ಪ್ರಕಾರ. ಆದರೆ ಪತ್ರಿಕಾ ಸಾಹಿತ್ಯ ಇತರ ಸಾಹಿತ್ಯಕ್ಕಿಂತ ವೇಗವಾಗಿ ಸೃಷ್ಟಿಯಾಗುವುದರಿಂದ ಅವಸರದ ಸಾಹಿತ್ಯ ಎಂದೂ ಕರೆಯುತ್ತಾರೆ. ಸಾಹಿತ್ಯದ ಆಸಕ್ತಿ ಇಲ್ಲದ ವ್ಯಕ್ತಿ ಪತ್ರಕರ್ತನಾಗಿ ಯಶಸ್ಸು ಪಡೆಯುವುದಕ್ಕೆ ಸಾಧ್ಯವಿಲ್ಲ ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಹೇಳಿದರು. ಅವರು ಕಾಲೇಜಿನ ಕನ್ನಡ ವಿಭಾಗದ...