ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಓಣಂ ಆಚರಣೆ – ಕಹಳೆ ನ್ಯೂಸ್
ಪುತ್ತೂರು : “ಓಣಂ ಹಬ್ಬವನ್ನು ಕೇರಳ ಮತ್ತು ಅದರ ಅದ್ಭುತ ಸಂಸ್ಕøತಿ ಮತ್ತು ಸಂಪ್ರದಾಯಗಳ ವಿಜೃಂಭಣೆಯ ಮತ್ತು ಸಂತೋಷದಾಯಕ ಆಚರಣೆ ಎಂದು ಹೇಳಬಹುದು. ಕೇರಳದ ಸಂಸ್ಕøತಿ ಮತ್ತು ಸಾಂಪ್ರದಾಯಿಕ ಆಚರಣೆ ಈ ಓಣಂ. ಬಲಿ ರಾಜನು ಓಣಂ ಹಬ್ಬದ ದಿನದಂದು ತನ್ನ ಪ್ರಜೆಗಳನ್ನು ಭೇಟಿ ಮಾಡಲು ಮತ್ತು ಅವರ ಎಲ್ಲಾ ತೊಂದರೆಗಳನ್ನು ತೆಗೆದು ಹಾಕಲು ಬರುತ್ತಾನೆ ಎಂಬ ನಂಬಿಕೆಯಿದೆ. ಉತ್ತಮ ಫಸಲು ಮತ್ತು ಇಳುವರಿಗಾಗಿ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ವರ್ಷದ...