ವಿಶ್ರಾಂತ ಪ್ರಾಧ್ಯಾಪಕ ಡಾ.ವಿಷ್ಣು ಭಟ್ ಎರಡು ಕೃತಿಗಳು ಲೋಕಾರ್ಪಣೆ ಸಮಾಜಮುಖಿಯಾದ ಕಾರ್ಯಕ್ರಮವೇ ರೋಟರಿ ಉದ್ದೇಶ : ಡಾ. ರವಿಪ್ರಕಾಶ್-ಕಹಳೆ ನ್ಯೂಸ್
ಪುತ್ತೂರು: ಸಮಾಜಮುಖಿಯಾದ ಕಾರ್ಯಕ್ರಮಗಳು, ವಿಚಾರ ಮಂಡನೆಗಳು ರೋಟರಿಯ ಮುಖ್ಯ ಉದ್ದೇಶವಾಗಿದೆ. ಅಂತಹ ಕಾರ್ಯಗಳಲ್ಲಿ ಪುಸ್ತಕ ಬಿಡುಗಡೆಯೂ ಒಂದು. ಉಪನಿಷತ್ತುಗಳನ್ನು ವೇದಾಂತ ಎಂದು ಕರೆಯುತ್ತಾರೆ. ಹಿಂದು ಸನತಾನದ ಧರ್ಮದ ಅಧ್ಯಯನಕ್ಕೆ ಉಪನಿಷತ್ ಬಹಳ ಅತ್ಯಗತ್ಯ. ಈ ನೆಲೆಯಲ್ಲಿ ಡಾ.ವಿಷ್ಣು ಭಟ್ ಅವರ ಕೃತಿಗಳು ಮೌಲಿಕವಾದದ್ದು ಎಂದು ಡಾ.ರವಿಪ್ರಕಾಶ್ ಅವರು ಹೇಳಿದರು. ಕನ್ನಡಕ್ಕೆ ಅನುವಾದಗೊಂಡ ಡಾ.ಕೆ ವಿಷ್ಣುಭಟ್ ಅವರ ಮಾಂಡೂಕ್ಯೋಪನಿಷದ್ - ಗೌಡಪಾದಕಾರಿಕಾ ಪುಸ್ತಕ ಮತ್ತು ಅದ್ವೆöÊತ ಮತ್ತು ಇತರ ಹತ್ತು ಲೇಖನಗಳನ್ನೊಳಗೊಂಡ...