ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ- ಕಹಳೆ ನ್ಯೂಸ್
ಪುತ್ತೂರು: ಒಬ್ಬೊಬ್ಬನ ಕೆಲಸ ಕಾರ್ಯಗಳ ಹಿಂದೆಯೂ ಅವನದೇ ಆದ ಆಲೋಚನೆಗಳಿರುತ್ತವೆ ಹಾಗೂ ಆಲೋಚನೆಗಳಿಗೆ ತಕ್ಕಂತೆ ಕೆಲಸಗಳು ರೂಪುಗೊಳ್ಳುತ್ತವೆ. ಆದ ಕಾರಣ ನಮ್ಮ ಆಲೋಚನೆಗಳನ್ನು ಅತ್ಯಂತ ಜಾಗ್ರತೆಯಿಂದ ಬಹಳ ಉನ್ನತ ಮಟ್ಟದಲ್ಲಿ ಅದ್ವಿತೀಯವಾಗಿ ರೂಪಿಸಿಕೊಳ್ಳಬೇಕು. ಜತೆಗೆ ಸಮಯ, ಆಲೋಚನೆ ಮತ್ತು ಮನಸ್ಸಿನ ಮೇಲೆ ಸ್ವನಿಯಂತ್ರಣ ಸಾಧಿಸಿದಾಗ ಅದ್ಭುತ ಯಶಸ್ಸು ನಮ್ಮದಾಗುತ್ತದೆ ಎಂದು ಬದಿಯಡ್ಕದ ಶ್ರೀ ಭಾರತಿ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ...