Wednesday, February 5, 2025

ಸುದ್ದಿ

ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ಸಂಘದ ವತಿಯಿಂದ ಮಾಹಿತಿ ಕಾರ್ಯಾಗಾರ- ಕಹಳೆ ನ್ಯೂಸ್

ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ವಿಜ್ಞಾನ ಸಂಘದ ವತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಅನುಕೂಲವಾಗುವಂತಹ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಫುಲ್ಲಾ ಗಣೇಶ್‌, ಐ. ಆರ್‌. ಸಿ. ಎಂ. ಡಿ ಎಜುಕೇಷನಲ್‌ ಸೆಂಟರ್‌, ಪುತ್ತೂರು ಇವರು ಆಗಮಿಸಿ ವಿದ್ಯಾರ್ಥಿಗಳಿಗೆ “ಟ್ರಿಕ್ಸ್ ಇನ್‌ ಪ್ರೋಬ್ಲೆಮ್‌ ಸೋಲ್ವಿಂಗ್”‌ ವಿಷಯದ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದ ಉಪನ್ಯಾಸಕರು, ಉಪನ್ಯಾಸಕೇತರ ವೃಂದದವರು ಹಾಗೂ...
ದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಸಂಸ್ಕೃತ ದಿನಾಚರಣೆ : ಸಂಸ್ಕೃತ ಸಂಪೂರ್ಣ ಬೆಳವಣಿಗೆ ಹೊಂದಿದ ಭಾಷೆ: ಶಶಿಕಲಾ ವರ್ಕಾಡಿ – ಕಹಳೆ ನ್ಯೂಸ್

ಪುತ್ತೂರು: ಸಂಸ್ಕೃತ ಪರಿಪೂರ್ಣ ಭಾಷೆಯಾಗಿದ್ದು, ಸಾವಿರಾರು ವರ್ಷಗಳಿಂದ ಚಾಲ್ತಿಯಲ್ಲಿದೆ. ಇದು ಎಲ್ಲಾ ಭಾಷೆಗಳ ಮಾತೃಸ್ವರೂಪಿ ಭಾಷೆಯಾಗಿ ಗುರುತಿಸಿಕೊಂಡಿದೆ. ಸಂಸ್ಕೃತ ಪದಗಳು ವಿಶ್ವದ ಬಹುತೇಕ ಭಾಷೆಗಳಲ್ಲಿ ಬಳಕೆಯಾಗುತ್ತಿರುವುದೇ ಇದಕ್ಕೆ ಸ್ಪಷ್ಟ ಉದಾಹರಣೆ ಎಂದು ಅಂಬಿಕಾ ಮಹಾವಿದ್ಯಾಲಯ ಸಂಸ್ಕೃತ ವಿಭಾಗದ ಮುಖ್ಯಸ್ಥೆ ಶಶಿಕಲಾ ವರ್ಕಾಡಿ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗ ಹಮ್ಮಿಕೊಂಡಿದ್ದ ಸಂಸ್ಕೃತ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಸಂಸ್ಕೃತ...
ಮಂಗಳೂರುಸುದ್ದಿ

ಪಿಎಂ ಸೂರ್ಯಘರ್ ಯೋಜನೆ ಕುಟುಂಬಗಳನ್ನು ವಿದ್ಯುತ್ ಬಳಕೆ ಹಾಗೂ ಆರ್ಥಿಕವಾಗಿ ಸ್ವಾವಲಂಬಿಯಾಗಿಸುತ್ತದೆ: ಸಂಸದ ಕ್ಯಾ.ಚೌಟ- ಕಹಳೆ ನ್ಯೂಸ್

ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ‘ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ‘(ಪಿಎಂ ಸೂರ್ಯ ಗೃಹ - ಉಚಿತ ವಿದ್ಯುತ್) ಯೋಜನೆಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಅನುಷ್ಟಾನಗೊಂಡಿದ್ದು, ಈ ಯೋಜನೆಯ ಫಲಾನುಭವಿಗೆ ಮಂಗಳೂರಿನಲ್ಲಿ ಇಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಬ್ಸಿಡಿ ಪತ್ರವನ್ನು ವಿತರಿಸಿದರು. 'ಇನರ್ಜಿಯ ಸೋಲಾರ್ ಕಂಪನಿ'ಯ ಸಹಯೋಗದಲ್ಲಿ ಅನುಷ್ಟಾನಗೊಂಡಿರುವ 'ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ' ಯೋಜನೆಯ 100ನೇ ಫಲಾನುಭವಿಯಾದ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ- ಕಹಳೆ ನ್ಯೂಸ್

ಪುತ್ತೂರು: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಹಬ್ಬದ ಆಚರಣೆಯ ಹಿನ್ನೆಲೆ ಹಾಗೂ ಮಹತ್ವವನ್ನು ಸಾರುವ ಸಲುವಾಗಿ, ಭಕ್ತಿ ಸಿಂಚನ ಕಾರ್ಯಕ್ರಮ ನಡೆಯಿತು. ಭಗವಧ್ಗೀತೆಯ ಪ್ರಥಮ ಅಧ್ಯಾಯದ ಪಠಣ, ಭಜನೆ ಹಾಡು, ಕುಣಿತ ಭಜನೆಗಳು ನಡೆದವು. ಮುದ್ದು ಕೃಷ್ಣ, ಮುದ್ದು ರಾಧೆಯರಿಗೆ ಆರತಿ ಬೆಳಗಿ, ತಿಲಕವಿಟ್ಟು ಹರಸಲಾಯಿತು. ಕಾರ್ಯಕ್ರಮದ ಅಂಗವಾಗಿ ಶ್ರೀಕೃಷ್ಣನ ಚಿತ್ರಕ್ಕೆ ಬಣ್ಣ ಹಚ್ಚುವ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ,...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಶ್ರೀ ಕೃಷ್ಣ ಜಯಂತಿ ಆಚರಣೆ- ಕಹಳೆ ನ್ಯೂಸ್

ಶ್ರೀ ಕೃಷ್ಣನದು ಜಗತ್ತೇ ವಂದಿಸುವ0ತಹ ವ್ಯಕ್ತಿತ್ವ. ಮಗುವಾಗಿ, ಸ್ನೇಹಿತನಾಗಿ, ಭಗವದ್ಗೀತೆಯ ಬೋಧಕನಾಗಿ ಅವನು ನಮ್ಮೆಲ್ಲರಿಗೂ ಮಾರ್ಗದರ್ಶಕನಾಗಿದ್ದಾನೆ ಎಂದು ಕೇಂದ್ರ ಸ್ಥಾನಿಯ ಉಪತಹಶೀಲ್ದಾರರಾದ ನರೇಂದ್ರನಾಥ ಮಿತ್ತೂರು ಹೇಳಿದರು. ಸೋಮವಾರ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಚರಿಸಲ್ಪಟ್ಟ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಧಾನ ಭಾಷಣಕಾರರಾಗಿ ಆಗಮಿಸಿದ ಬಂಟ್ವಾಳ ತಾಲೂಕು ಯಾದವ ಸಂಘದ ಅಧ್ಯಕ್ಷರಾದ ಅಶೋಕ್ ಕುಮಾರ್ ರವರು ಅವತಾರ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಗ್ಗ ಶೌರ್ಯ ವೀಪತು ನಿರ್ವಹಣಾ ಘಟಕ ವತಿಯಿಂದ ಸ್ವಚ್ಛತಾ ಕಾರ್ಯ- ಕಹಳೆ ನ್ಯೂಸ್

ಬಂಟ್ವಾಳ : ಕೆಳಗಿನ ವಗ್ಗದಿಂದ ಮಾಂಗಜೆವರೆಗೆ ರಸ್ತೆಯ ಇಕ್ಕಡೆಗಳಲ್ಲಿ ಗಿಡ ಗಂಟೆಗಳು ಬೆಳೆದು ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆವಾಗುದನ್ನು ಮನಗಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಗ್ಗ ವಲಯದ ಶೌರ್ಯ ವೀಪತು ನಿರ್ವಹಣಾ ಘಟಕ ವಗ್ಗ ವತಿಯಿಂದ ಸ್ವಚ್ಛತಾ ಶ್ರಮದಾನದ ಮೂಲಕ ಬೆಳೆದಂತ ಗಿಡ ಬಲ್ಲೆಗಳನ್ನು ಕಡಿದು ವಾಹನಗಳ ಸುಗಮ ಸಂಚಾರಕ್ಕೆ ಸಹಕರಿಸಿದರು. ಈ ಕಾರ್ಯಕ್ರಮದಲ್ಲಿ ಕಾವಳಪಡುರು ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಶರ್ಮ, ಶೌರ್ಯ ವೀಪತು ನಿರ್ವಹಣಾ ಘಟಕ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿಶ್ವಹಿಂದೂಪರಿಷದ್ 60ನೇ ಷಷ್ಠಿ ಸಂಭ್ರಮದ ಪ್ರಯುಕ್ತ ಸತ್ಸಂಗ ಕಾರ್ಯಕ್ರಮ-ಕಹಳೆ ನ್ಯೂಸ್

ಬಂಟ್ವಾಳ: ವಿಶ್ವಹಿಂದೂಪರಿಷದ್ 60ನೇ ಷಷ್ಠಿ ಸಂಭ್ರಮದ ಪ್ರಯುಕ್ತ ಸತ್ಸಂಗ ಕಾರ್ಯಕ್ರಮ ವಿಶ್ವಹಿಂದೂಪರಿಷದ್ ಭಜರಂಗದಳ ಜೈ ಹನುಮಾನ್ ಶಾಖೆ ಪೋಡಿಕಲ ಕಂಬ್ಲ ಘಟಕದ ವತಿಯಿಂದ ಹನುಮಾನ್ ಭಜನಾ ಮಂದಿರ ಪೊಡಿಕಲ ಕಂಬ್ಲ ದಲ್ಲಿ ನಡೆಯಿತು. ವಜ್ರಕಾಯ ಶಾಖೆ ಪಳ್ಳಿಪಾಡಿ ಘಟಕದ ಸದಸ್ಯರು ಸತ್ಸಂಗ ನೆರವೇರಿಸಿದರು ಬಂಟ್ವಾಳ ಪ್ರಖಂಡದ ಅಧ್ಯಕ್ಷರಾದ ಪ್ರಸಾದ್ ಕುಮಾರ್ ರೈ ಬೌದ್ದಿಕ್ ನೆರವೇರಿಸಿದರು. ವಿಶ್ವಹಿಂದೂಪರಿಷದ್ ಪುತ್ತೂರು ಜಿಲ್ಲಾ ಉಪಾಧ್ಯಕ್ಷರಾದ ಗುರುರಾಜ್ ಬಂಟ್ವಾಳ ಉಪಸ್ಥಿತರಿದ್ದರು. ಬಂಟ್ವಾಳ ಪ್ರಖಂಡ ಸಹಸಂಚಾಲಕರಾದ ಕಿರಣ್...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಓಂಕಾರ ಫ್ರೆಂಡ್ಸ್ ವೀರಕಂಭ ವತಿಯಿಂದ ನಡೆದ 3 ನೇ ವರ್ಷ್ ದ ಕೆಸರುದ್ದ ಕಂಡೋಡು ಕುಸಲ್ದ ಗೊಬ್ಬು -2024 ಕಾರ್ಯಕ್ರಮ-ಕಹಳೆ ನ್ಯೂಸ್

ಕಲ್ಲಡ್ಕ : ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಓಂಕಾರ ಫ್ರೆಂಡ್ಸ್ ವೀರಕಂಭ ವತಿಯಿಂದ 3 ನೇ ವರ್ಷ್ ದ ಕೆಸರುದ್ದ ಕಂಡೋಡು ಕುಸಲ್ದ ಗೊಬ್ಬು -2024 ಕಾರ್ಯಕ್ರಮ ವೀರಕಂಭ ಗ್ರಾಮದ ಕುಮೇರು ದಿವಂಗತ ಬಾಬು ಪೂಜಾರಿಯವರ ಗದ್ದೆಯಲ್ಲಿ ಜರಗಿತು. ವೀರಕಂಭ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ರಾಮಚಂದ್ರ ಪ್ರಭು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಉಪಾಧ್ಯಕ ಜನಾರ್ಧನ ಪೂಜಾರಿ ಕ್ರೀಡಾ ಕೂಟದ ಗದ್ದೆಗೆ ಹಾಲು ಏರೆದು...
1 183 184 185 186 187 2,767
Page 185 of 2767