ಬಾಂಗ್ಲಾದ ಹಿಂದೂಗಳ ವಿರುದ್ಧದ ಕ್ರೌರ್ಯವನ್ನು ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ- ಕಹಳೆ ನ್ಯೂಸ್
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯಲ್ಲಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಿಂದ ಬಾಂಗ್ಲಾದೇಶದ ಮತಾಂಧರ ಅಟ್ಟಹಾಸಕ್ಕೆ ಬಲಿಯಾದ ಹಿಂದೂ ಬಾಂಧವರ ದಯನೀಯ ಸ್ಥಿತಿಗಾಗಿ ಅಶ್ರು ತರ್ಪಣ, ಮೌನ ಪ್ರಾರ್ಥನೆ ನಡೆಯಿತು. ಹಿಂದೂಗಳ ವಿರುದ್ಧದ ಅತ್ಯಾಚಾರ, ಅನಾಚಾರ, ಆಕ್ರಮಣ, ಅಮಾನವೀಯ ಹಿಂಸಾತ್ಮಕ ಚಟುವಟಿಕೆಗಳ ವಿರುದ್ಧವಾಗಿ ಪ್ರತಿಭಟನೆ ನಡೆಯಿತು. ಈ ಸಂದರ್ಬದಲ್ಲಿ ಹಿಂದೂ ವಿರೋಧಿ ದುಷ್ಟ ಶಕ್ತಿಗಳ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ನಮ್ಮ ದೇಶದ ಪ್ರಧಾನ ಮಂತ್ರಿಯವರಿಗೆ...