Wednesday, February 5, 2025

ಸುದ್ದಿ

ಕ್ರೈಮ್ಬೆಂಗಳೂರುಸಿನಿಮಾಸುದ್ದಿ

ರೇಣುಕಾಸ್ವಾಮಿ ಕೊಲೆ ಕೇಸ್‌ : ಜಾಮೀನಿಗೆ ಅರ್ಜಿ ಸಲ್ಲಿಸಿದ A1 ಆರೋಪಿ ಪವಿತ್ರಾಗೌಡ – ಕಹಳೆ ನ್ಯೂಸ್

– ಜೈಲು ಸೇರಿ 72 ದಿನಗಳ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದೇಕೆ? ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಪರ ವಕೀಲರು ಜಾಮೀನಿಗಾಗಿ  ಸೋಮವಾರ (ಆ.19) ಅರ್ಜಿ ಸಲ್ಲಿಸಿದ್ದಾರೆ. ಆಗಸ್ಟ್‌ 22ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಪರ ಹಿರಿಯ ವಕೀಲ ರೇನಿ ಸೆಬಾಸ್ಟಿಯನ್ ಸಿಸಿಎಚ್ 57ರ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಪವಿತ್ರಾಗೌಡ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ರಾಜೀವ್ ಯುವಜನ ಸೇವಾ ಟ್ರಸ್ಟ್ (ರಿ )ಬಾಯಿಲ ಇದರ ನೂತನ ಅಧ್ಯಕ್ಷರಾಗಿ ಸತೀಶ್ ಪೂಜಾರಿ ಬಾಯಿಲ ಆಯ್ಕೆ-ಕಹಳೆ ನ್ಯೂಸ್

ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ರಾಜೀವ್ ಯುವಜನ ಸೇವಾ ಟ್ರಸ್ಟ್ (ರಿ )ಬಾಯಿಲ ಇದರ ಮಹಾಸಭೆಯು ಸುಧಾಕರ ಶೆಟ್ಟಿ ಶಂಭುಗ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು . ಅದರಂತೆ ಗೌರವ ಅಧ್ಯಕ್ಸರಾಗಿ ಎ ನೊಣಯ ಪೂಜಾರಿ, ಅಧ್ಯಕ್ಷರಾಗಿ ಸತೀಶ್ ಪೂಜಾರಿ ಬಾಯಿಲ, ಉಪಾಧ್ಯಕ್ಷರಾಗಿ ಯೋಗೀಶ್ ನಾಯ್ಕ ಕಾಜರ್ಲೆಕೋಡಿ, ಕಾರ್ಯಧರ್ಶಿ ಪ್ರಶಾದ್ ಬಾಯಿಲ, ಜೊತೆ ಕಾರ್ಯದರ್ಶಿ ಜಯಂತ ಬಾಯಿಲ, ಕೋಶಾಧಿಕಾರಿ ಹರೀಶ್ ಗೊಳಿಮಾರ್,...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಅಪಘಾತದಲ್ಲಿ ಸಾವನ್ನಪ್ಪಿದ್ದ ವ್ಯಕ್ತಿಯ ಮೃತದೇಹವನ್ನು ತನ್ನದೆ ಕಾರಿನಲ್ಲಿ ಸಾಗಿಸಿ ಮಾನವೀಯತೆ ಮೆರೆದ ಇಬ್ಬರು ಯುವಕರು- ಕಹಳೆ ನ್ಯೂಸ್

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾವು ಸಮೀಪ ಬೈಕ್ ಮತ್ತು ಪಿಕಪ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಅಮ್ಚಿನಡ್ಕದ ಕ್ಷೌರಿಕರೊಬ್ಬರು ಮೃತಪಟ್ಟ ಘಟನೆ ಆ.18ರಂದು ಬೆಳಗ್ಗೆ ನಡೆದಿತ್ತು. ಅಮ್ಚಿನಡ್ಕದಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿರುವ ಮಾಡ್ನೂರು ಗ್ರಾಮದ ಕಾವು ಬಜಕುಡೇಲು ದಿ. ರಾಮ ಭಂಡಾರಿ ಎಂಬವರ ಪುತ್ರ ಅವಿವಾಹಿತ ಸುರೇಶ್ ಭಂಡಾರಿ(45 ವ)ರವರು ಸ್ಥಳದಲ್ಲೆ ಮೃತಪಟ್ಟಿದ್ದರು. ಸುಮಾರು ಹೊತ್ತು ಮೃತದೇಹ ಅಪಾಘತವಾದ ಸ್ಥಳದಲ್ಲೆ ಇತ್ತು, ಯಾರೂ ಕೂಡಾ ಅದನ್ನು...
ಮಂಗಳೂರುಸುದ್ದಿ

ಮಂಗಳೂರು: ಮೀನುಗಾರರಿಂದ ಸಮುದ್ರ ಪೂಜೆ : ಸಮೃದ್ಧ ಮೀನುಗಾರಿಕೆಗೆ ಹಾರೈಸಿದ ಸಂಸದ ಕ್ಯಾ| ಬ್ರಿಜೇಶ್ ಚೌಟ-ಕಹಳೆ ನ್ಯೂಸ್

ಮಂಗಳೂರು: ಮೀನುಗಾರರ ಶ್ರೇಯೋಭಿವೃದ್ದಿಗಾಗಿ ತಣ್ಣೀರುಬಾವಿ ಮೊಗವೀರ ಮಹಾಸಭಾ (ರಿ) ಇದರ ವತಿಯಿಂದ ಚಿತ್ರಾಪುರ ಕಡಲ ಕಿನಾರೆಯಲ್ಲಿ ಆ. 19ರಂದು ಸಮುದ್ರ ಪೂಜೆ ನಡೆಯಿತು. ಸಮುದ್ರರಾಜನಿಗೆ ಹಾಲು, ಫಲ ಅರ್ಪಿಸಿ, ಸಮುದ್ರ ಪೂಜೆಯಲ್ಲಿ ಭಾಗಿಯಾಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ದ.ಕ. ಸಂಸದ ಕ್ಯಾ| ಬ್ರಿಜೇಶ್ ಚೌಟ " ಕರಾವಳಿಯಲ್ಲಿ ನೂಲ ಹುಣ್ಣಿಮೆಯಂದು ಸಮುದ್ರರಾಜನಿಗೆ ಪೂಜೆ ಸಲ್ಲಿಸುವುದು ಸಾಮಾನ್ಯ ಪ್ರತೀತಿ. ಹೊಸಋತುವಿನ ಮೀನುಗಾರಿಕೆಗೆ ತೆರಳುವ ಪ್ರತಿ ಮೀನುಗಾರರನ್ನು ಯಾವುದೇ ಪ್ರಾಣಾಪಾಯ ಇಲ್ಲದಂತೆ...
ಕ್ರೀಡೆದಕ್ಷಿಣ ಕನ್ನಡಪುತ್ತೂರುಸುದ್ದಿ

ಬೆಂಗಳೂರಿನ ಜೈಗೋಪಾಲ್ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆದ ವಿದ್ಯಾಭಾರತಿ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿನಿ ಕು|ಸಿಯಾ – ಕಹಳೆ ನ್ಯೂಸ್

ಪುತ್ತೂರು: ಬೆಂಗಳೂರಿನ ರಾಮಮೂರ್ತಿ ನಗರದಲ್ಲಿರುವ ಜೈಗೋಪಾಲ್ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಇದೇ ಆಗಸ್ಟ್ 17ನೇ ಶನಿವಾರದಂದು ನಡೆದ ವಿದ್ಯಾ ಭಾರತಿ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ 9ನೇ ತರಗತಿ ವಿದ್ಯಾರ್ಥಿನಿಯಾದ ಕು|ಸಿಯಾ ಭಾವಿನ್ ಸವ್ಜಾನಿ ಇವರು, 200 ಮೀಟರ್ ಫ್ರೀ ಸ್ಟೈಲ್ ಮತ್ತು 100 ಮೀಟರ್ ಫ್ರೀ ಸ್ಟೈಲ್ ನಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂತೆಯೇ, 100ಮೀಟರ್ ಬ್ಯಾಕ್ ಸ್ಟ್ರೋಕ್, 4×100 ರಿಲೇ, 4×100...
ಉಡುಪಿಸುದ್ದಿ

ಛಾಯಾಗ್ರಹಣ ಸ್ಪರ್ಧೆ ಸಮ್ಮರ್ ಫೋಟೋ ಅವಾರ್ಡ್ಸ್ ನಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರ ಎರೆಡು ಚಿತ್ರಗಳಿಗೆ ರಜತ ಮತ್ತು ಕಂಚು ಪ್ರಶಸ್ತಿ- ಕಹಳೆ ನ್ಯೂಸ್

ಉಡುಪಿ : ಉತ್ತರ ಮೆಸೆದೋಣಿಯಾ ಫೋಟೋ ಆರ್ಟ್ ಗ್ರೂಪ್ ಆಯೋಜಿಸಿದ್ದ ಅಂತಾರಾಷ್ಟ್ರೀಯಮಟ್ಟದ ಛಾಯಾಗ್ರಹಣ ಸ್ಪರ್ಧೆ ಸಮ್ಮರ್ ಫೋಟೋ ಅವಾರ್ಡ್ಸ್ ನಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರ ಎರೆಡು ಚಿತ್ರಗಳಿಗೆ ರಜತ ಮತ್ತು ಕಂಚು ಪ್ರಶಸ್ತಿ ಪ್ರಾಪ್ತವಾಗಿದೆ. ಲೈಫ್ ವಿಭಾಗದಲ್ಲಿ ಸ್ಟಿಲ್ ಹ್ಯಾಪಿ ಚಿತ್ರಕ್ಕೆ ಐಎಎಪಿ ರಜತ ಹಾಗೂ ಚೈಲ್ಡ್ ವಿಭಾಗದಲ್ಲಿ ಬಿಫೋರ್ ಸ್ಕೂಲ್ ಸ್ಟಾರ್ಟ್ಸ್ ಚಿತ್ರಕ್ಕೆ ಕಂಚು ಪದಕ ಲಭಿಸಿದೆ.ಇದರೊಂದಿಗೆ ಇವರ 8 ಚಿತ್ರಗಳು ಅಕ್ಸೆಪ್ಟೆನ್ಸ್ ಪ್ರಶಸ್ತಿ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಡುಮಲೆ ಸಾರಥ್ಯದಲ್ಲಿ ನಡೆದ ಪ್ರಥಮ ವರ್ಷದ ಕೆಸರ್‌ಡ್ ಒಂಜಿದಿನ- ಕಹಳೆ ನ್ಯೂಸ್

ಪಡುಮಲೆ:ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಡುಮಲೆ ಇದರ ಆಶ್ರಯದಲ್ಲಿ ಪ್ರಥಮ ವರ್ಷದ ಕೆಸರ್‌ಡ್ ಒಂಜಿದಿನ ಕಾರ್ಯಕ್ರಮ ಆದಿತ್ಯವಾರ ಶ್ರೀ ಕೂವೆ ವಿಷ್ಣು ಮೂರ್ತಿ ದೇವಸ್ಥಾನ ವಠಾರದ ಡಾ. ರಮಾ ಕೆ ಟಿ ಭಂಡಾರಿ ಪೇರಾಲು ವೇದಿಕೆ ಮುಂಭಾಗದಲ್ಲಿನ ಗದ್ದೆಯಲ್ಲಿ ಸಂಭ್ರಮದಿAದ ನಡೆದಿದೆ.   ಕಾರ್ಯಕ್ರಮದ ಉದ್ಘಾಟನೆಯನ್ನು ತುಳುನಾಡಿನ ಸಂಪ್ರಾದಾಯದAತೆ ಮಾಡಲಾಗಿದ್ದು ಕಂಬಳ ಕೋಣವನ್ನು ಗದ್ದೆಗೆ ಇಳಿಸುವುದರ ಮುಖಾಂತರ ಅದ್ಧೂರಿ ಚಾಲನೆಯನ್ನು ನೀಡಲಾಗಿದೆ....
ದಕ್ಷಿಣ ಕನ್ನಡಸುದ್ದಿ

ಮಾಹೆಯಿಂದ ದೇಶವಿಭಜನೆಯ ಕರಾಳತೆಯ ಸ್ಮೃತಿ ದಿನಾಚರಣೆ-ಕಹಳೆ ನ್ಯೂಸ್

ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ವಿದ್ಯಾರ್ಥಿ ವ್ಯವಹಾರ ವಿಭಾಗ ವು ಇತ್ತೀಚೆಗೆ ದೇಶವಿಭಜನೆಯ ಕರಾಳತೆಯನ್ನು ನೆನಪಿಸುವ ದಿನವನ್ನು ಆಚರಿಸಿತು. ಮಾಹೆಯ ಸಹಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ದೇಶವಿಭಜನೆಯ ಸಂದರ್ಭದಲ್ಲಾದ ದುರಂತ ಘಟನೆಗಳನ್ನು ನೆನಪಿಸಿಕೊಳ್ಳಬೇಕಾದ ಔಚಿತ್ಯದ ಕುರಿತು ಮಾತನಾಡಿದರು. ಮಾಹೆಯ ಉಪಕುಲಪತಿಗಳಾದ ಲೆ. ಜ. ಎಂ. ಡಿ. ವೆಂಕಟೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ಅವರು ತಮ್ಮ ಭಾಷಣದಲ್ಲಿ...
1 192 193 194 195 196 2,768
Page 194 of 2768