ಕಾಫಿನಾಡಿನಲ್ಲಿ ಗಾಳಿ – ಮಳೆ ಅಬ್ಬರ. ಧರೆಗುರುಳಿದ ಮರ ;ರಸ್ತೆ ಬಂದ್-ಕಹಳೆ ನ್ಯೂಸ್
ಚಿಕ್ಕಮಗಳೂರು: ಮಲೆನಾಡಿನಲ್ಲಿ ಗಾಳಿ ಮಳೆಯ ಅಬ್ಬರ ಜೋರಾಗಿದ್ದು ಪರಿಣಾಮ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದು ರಸ್ತೆ ಸಂಚಾರ ತಾತ್ಕಾಲಿಕ ಬಂದ್ ಆಗಿದೆ. ಕಳಸ ಸುತ್ತಮುತ್ತ ಬೆಳ್ಳಂಬೆಳಗ್ಗೆಯೇ ಭಾರೀ ಗಾಳಿ-ಮಳೆಯಿಂದಾಗಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಕಳಸದಿಂದ ಮೂಡಿಗೆರೆ ಹೋಗುವ ಮಾರ್ಗ ತಾತ್ಕಾಲಿಕ ಬಂದ್ ಆಗಿದ್ದು ಕೂಡಲೇ ಸ್ಥಳೀಯರು ಮರ ತೆರವುಗೊಳಿಸುವ ಕಾರ್ಯ ನಡೆಸುತ್ತಿದ್ದಾರೆ. ಕಳಸ ತಾಲೂಕಿನ ಹಿರೇಬೈಲ್-ಮರಸಣಿಗೆ ಬಳಿ ಘಟನೆ ನಡೆದಿದ್ದು ಇಲ್ಲಿನ...