ಅಯೋಧ್ಯೆ ಜಿಲ್ಲೆಯಲ್ಲಿ ಟೋಸ್ಟ್ ನೀಡುವುದಾಗಿ ಕರೆದು ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – ವಿಡಿಯೊ ಮಾಡಿ ಸಂತ್ರಸ್ತೆಯ ಬ್ಲ್ಯಾಕ್‌ಮೇಲ್ ; ಮೋಯಿದ್ ಖಾನ್, ರಾಜ ಖಾನ್ ಬಂಧನ – ಕಹಳೆ ನ್ಯೂಸ್
ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಸಮಾಜವಾದಿ ಪಕ್ಷದ ಮುಖಂಡ ಮೊಯೀದ್ ಖಾನ್ ಮತ್ತು ಆತನ ಸೇವಕ ರಾಜು ಖಾನ್ ಕೆಲವು ತಿಂಗಳ ಹಿಂದೆ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೇ ಅಪ್ರಾಪ್ತ ಸಂತ್ರಸ್ತೆಯನ್ನು ಬ್ಲ್ಯಾಕ್‌ಮೇಲ್ ಮಾಡಲು ಅವರು ಆ ಘೋರ ಅಪರಾಧವನ್ನು ವಿಡಿಯೊ ಮಾಡಿ ಆ ಅಶ್ಲೀಲ ವಿಡಿಯೊವನ್ನು...