Recent Posts

Monday, January 20, 2025

ಸುದ್ದಿ

ಸುದ್ದಿಸುಳ್ಯ

ಸುಳ್ಯ: ಕೃಷಿ ತೋಟಕ್ಕೆ ಲಗ್ಗೆ ಇಟ್ಟ ಮೂರು ಕಾಡಾನೆ;ಅಪಾರ ಕೃಷಿ ಹಾನಿ-ಕಹಳೆ ನ್ಯೂಸ್

ಸುಳ್ಯ: ಕೃಷಿ ತೋಟಕ್ಕೆ ಮೂರು ಕಾಡಾನೆಗಳು ಲಗ್ಗೆ ಇಟ್ಟ ಘಟನೆ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಮಾವಂಜಿಯಲ್ಲಿ ಗುರುವಾರ ನಡೆದಿದೆ. ಮಂಡೆಕೋಲು ಗ್ರಾಮದ ಮಾವಂಜಿ ನಾರಾಯಣ ಶಿಬರೂರು ಅವರ ತೋಟದಲ್ಲಿ ಸಂಜೆ ವೇಳೆ ಮೂರು ಕಾಡಾನೆಗಳು ಕಂಡುಬAದಿವೆ. ಕೆಲವು ದಿನಗಳ ಹಿಂದೆ ಈ ಭಾಗದ ಕೃಷಿ ತೋಟಕ್ಕೆ ಲಗ್ಗೆ ಇಟ್ಟಿದ್ದ ಕಾಡಾನೆ ಅಪಾರ ಕೃಷಿ ಹಾನಿ ಮಾಡಿತ್ತು....
ದಕ್ಷಿಣ ಕನ್ನಡಮೂಡಬಿದಿರೆಸುದ್ದಿ

ಮೂಡುಬಿದಿರೆ ಒಂಟಿಕಟ್ಟೆಯಲ್ಲಿ ನಡೆದ ಕಂಬಳ ಸಮಿತಿ ಸಭೆ : ಕಂಬಳದ ಗಂತಿನಲ್ಲಿ ಕೋಣಗಳನ್ನು ಬಿಡುವುದು ವಿಳಂಬವಾದರೆ ನಿಷೇಧಕ್ಕೆ ನಿರ್ಧಾರ – ಕಹಳೆ ನ್ಯೂಸ್

ಮೂಡುಬಿದಿರೆ : ಕಂಬಳದ ಗಂತಿನಲ್ಲಿ ಕೋಣಗಳನ್ನು ಬಿಡುವವರು ವಿಳಂಬ ಮಾಡಿದ್ದು ಸಾಬೀತಾದರೆ 2 ಕಂಬಳಗಳಿಗೆ ನಿಷೇಧ ಹೇರಲು ಜಿಲ್ಲಾ ಕಂಬಳ ಸಮಿತಿ ತೀರ್ಮಾನಿಸಿದೆ ಎಂದು ಒಂಟಿಕಟ್ಟೆಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಂಬಳಗಳು ವಿಳಂಬವಾಗುತ್ತಿರುವುದರ ಬಗ್ಗೆ ಕಂಬಳ ಅಭಿಮಾನಿಗಳು ಮತ್ತು ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಲಾಯಿತು. ಕೋಣಗಳಿಗೆ ಅನಗತ್ಯವಾಗಿ ಹೊಡೆಯುವುದನ್ನು...
ಉಡುಪಿಜಿಲ್ಲೆಶಿಕ್ಷಣಸುದ್ದಿ

ಮಣಿಪಾಲ ಜ್ಞಾನ ಸುಧಾ ಪ್ರತಿಭಾ ಕಾರಂಜಿಯಲ್ಲಿ ತನ್ಮಯಿ ಆರ್. ಆರಾಧ್ಯ ರಾಜ್ಯ ಮಟ್ಟಕ್ಕೆ ಆಯ್ಕೆ-ಕಹಳೆ ನ್ಯೂಸ್

ಮಣಿಪಾಲ:ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇತ್ರಾಭಿವೃದ್ಧಿ ಮತ್ತು ಶಾಲಾ 2ಕ್ಷಣ ಇಲಾಖೆಯ ವತಿಯಿಂದ ಜನವರಿ 2ರಂದು ದುರ್ಗಾ ಆಂಗ್ಲಮಾಧ್ಯಮ ಶಾಲೆ ಕೊಕ್ಕರ್ಣೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮಣಿಪಾಲ ಜ್ಞಾನ ಸುಧಾ ಪದವಿ ಪೂರ್ವ ಕಾಲೇಜು ವಿದ್ಯಾ ನಗರದ ಪ್ರಥಮ ಪಿ.ಯು.1. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ತನ್ಮಯಿ ಆರ್. ಆರಾಧ್ಯ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಕುಂದಾಪುರದ ಎಂ. ರಾಜಶೇಖರ ಹಾಗೂ ಕಲ್ಪನಾ ಆರ್ ದಂಪತಿಯ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ನಡೆದ ಗೊನೆ ಮುಹೂರ್ತ- ಕಹಳೆ ನ್ಯೂಸ್

ಪುತ್ತೂರು : ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಗೊನೆ ಮುಹೂರ್ತ ಜ.2ರಂದು ನಡೆಯಿತು. ಶ್ರೀ ದೇವರಿಗೆ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು, ಬಳಿಕ ಬ್ಯಾಂಡ್ ವಾದ್ಯ ಘೋಷದೊಂದಿಗೆ ಕೃಷ್ಣ ರೈ ಕುದ್ದಾಡಿಯವರ ತೋಟಕ್ಕೆ ತೆರಳಿ ಗೊನೆ ಮುಹೂರ್ತ ನಡೆಸಲಾಯಿತು. ಕ್ಷೇತ್ರದ ಸೇನವರಾದ ಉದಯ ಕುಮಾರ್ ಪಡುಮಲೆ ಗೊನೆ ಮುಹೂರ್ತ...
ದಕ್ಷಿಣ ಕನ್ನಡಮಂಗಳೂರುರಾಜಕೀಯಸುದ್ದಿ

ಡೆತ್ ನೋಟ್ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ ; ಸಚಿವ ಪ್ರಿಯಾಂಕ ಖರ್ಗೆಯನ್ನು ಸಂಪುಟದಿಂದ ಕಿತ್ತುಹಾಕಿ, ಸಿಬಿಐ ತನಿಖೆಗೆ ಒಪ್ಪಿಸಿ ; ಶಾಸಕ ವೇದವ್ಯಾಸ್ ಕಾಮತ್ ಆಗ್ರಹ – ಕಹಳೆ ನ್ಯೂಸ್

ಮಂಗಳೂರು, ಜ.1: ಬೀದರ್ ಜಿಲ್ಲೆಯ ಗುತ್ತಿಗೆದಾರ ಸಚಿನ್ ಪಾಂಚಾಳ ತನ್ನ ಸಾವಿಗೂ ಮುನ್ನ ಏಳು ಪುಟಗಳ ಡೆತ್ ನೋಟ್ ಬರೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತರ ದುಷ್ಟಕೂಟದ ಸದಸ್ಯರ ಕರಾಳತೆಯನ್ನು ತೆರೆದಿಟ್ಟಿದ್ದಾರೆ. ತನಗಾದ ಮೋಸ, ಚಿತ್ರಹಿಂಸೆ ಸೇರಿದಂತೆ ಶ್ರೀರಾಮ ಸೇನೆಯ ಆಂದೋಲ ಸ್ವಾಮೀಜಿ, ಬಿಜೆಪಿ ಮುಖಂಡ ಚಂದು ಪಾಟೀಲ, ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ ಸೇರಿದಂತೆ ಹಲವು ಹಿಂದೂ ನಾಯಕರನ್ನು ಸುಪಾರಿ ಕೊಟ್ಟು ಹತ್ಯೆ ಮಾಡುವ...
ಜಿಲ್ಲೆಮಂಡ್ಯಸುದ್ದಿ

2025ನೇ ಸಾಲಿನ ನೂತನ ವರ್ಷದ ಸಂಭ್ರಮಾಚಾರಣೆ ; ಭೂ ವರಹನಾಥ ದೇವಾಲಯ ಸೇರಿದಂತೆ ಕೆ.ಆರ್.ಪೇಟೆ ತಾಲೂಕಿನ ಧಾರ್ಮಿಕ ಕ್ಷೇತ್ರಗಳಿಗೆ ಹರಿದು ಬಂದ ಭಕ್ತ ಸಾಗರ.-ಕಹಳೆ ನ್ಯೂಸ್

2025ನೇ ಸಾಲಿನ ನೂತನ ವರ್ಷದ ಸಂಭ್ರಮಾಚರಣೆ ಅಂಗವಾಗಿ ಇಂದು ಭೂ ವೈಕುಂಠವೆಂದೇ ಪ್ರಸಿದ್ಧವಾಗಿರುವ ಶ್ರೀ ಲಕ್ಷ್ಮೀ ಸಮೇತ ಭೂವರಹನಾಥ ಕಲ್ಲಹಳ್ಳಿ, ಕಾಪನಹಳ್ಳಿ ಗವಿ ಮಠ ಹಾಗೂ ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರಗಳಿಗೆ ಭಕ್ತ ಸಾಗರವೇ ಹರಿದು ಬಂದಿತ್ತು. ಕೆ.ಆರ್.ಪೇಟೆ ತಾಲೂಕಿನ ಕಲ್ಲಹಳ್ಳಿಯ ಭೂದೇವಿ ಸಮೇತ ಶ್ರೀಲಕ್ಷ್ಮೀ ವರಹನಾಥ ದೇವಾಲಯಕ್ಕೆ ಪ್ರವಾಹೋಪಾಧಿಯಲ್ಲಿ ಭಕ್ತರು ಆಗಮಿಸಿ ಸರತಿಯ ಸಾಲಿನಲ್ಲಿ ನಿಂತು ದೇಶದಲ್ಲಿಯೇ ಅಪರೂಪದ್ದಾಗಿರುವ 17 ಅಡಿ ಎತ್ತರದ ಭೂವರಹನಾಥ ಸ್ವಾಮಿಯ ಸಾಲಿಗ್ರಾಮ ಶ್ರೀ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ನೂತನ ನಿರ್ದೇಶಕರಿಗೆ ಬಿಜೆಪಿ ಯಿಂದ ಅಭಿನಂದನೆ-ಕಹಳೆ ನ್ಯೂಸ್

ಪುತ್ತೂರು :ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಮಂದಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಭೂತಪೂರ್ವ ಗೆಲವು ಸಾಧಿಸಿದ 12 ಮಂದಿ ನಿರ್ದೇಶಕರನ್ನು ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲದ ವತಿಯಿಂದ ಅಭಿನಂದಿಸಲಾಯಿತ್ತು. ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ 12 ಸ್ಥಾನಗಳನ್ನು ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಜಯ ಪಡೆದಿದ್ದಾರೆ. ನಿರ್ದೇಶಕರಾಗಿ ಆಯ್ಕೆಗೊಂಡವರು ಪ್ರಕಾಶ್ಚAದ್ರ ರೈ ಕೈಕಾರ...
ದಕ್ಷಿಣ ಕನ್ನಡಪುತ್ತೂರುಬೆಂಗಳೂರುಸುದ್ದಿ

ಬೆಂಗಳೂರು ಅರಮನೆ ಮೈದಾನದಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಸೌಮ್ಯ ಪೆರ್ನಾಜೆಯವರಿಗೆ “ಹವ್ಯಕ ಕೃಷಿ ರತ್ನ” ಪ್ರಶಸ್ತಿ ಪ್ರಧಾನ–ಕಹಳೆ ನ್ಯೂಸ್ 

ಪೆರ್ನಾಜೆ: ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 81 ಕೃಷಿಕರಿಗೆ "ಹವ್ಯಕ ಕೃಷಿ ರತ್ನ" ಪ್ರಶಸ್ತಿ ಪ್ರಧಾನ ಮಾಡಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು ವಾಗ್ಮಿ ಚಿಂತಕ ಚಕ್ರವರ್ತಿ ಸೂಲಿಬೆಲೆಯವರು ದಿಕ್ಸೂಚಿ ಭಾಷಣವನ್ನು ನೀಡಿದರು ಗೌರವಾಧ್ಯಕ್ಷರು ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದರು, ಅಧ್ಯಕ್ಷರಾದ ಅಖಿಲ ಹವ್ಯಕ ಮಹಾಸಭಾದ ಗಿರಿಧರಕಜೆ...
1 20 21 22 23 24 2,746
Page 22 of 2746