ಪುಂಜಾಲಕಟ್ಟೆಯಲ್ಲಿ ದೈವಗಳ ಕಾರಣಿಕದಿಂದ ತಪ್ಪಿದ ಅನಾಹುತ, ಉಳಿಯಿತು ನೂರಾರು ಜನರ ಪ್ರಾಣ ; ಕೆಸರು ಗದ್ದೆ ಕೂಟದ ಗದ್ದೆಗೆ ಬಿದ್ದ ವಿದ್ಯುತ್ಕಂಬ – ಕಹಳೆ ನ್ಯೂಸ್
ಪುಂಜಾಲಕಟ್ಟೆ, ಜು 24 : ದೈವಗಳ ಕಾರಣಿಕದಿಂದ ಸಂಭವಿಸಬಹುದಾದ ಬಹು ದೊಡ್ಡ ಅಪಾಯ ತಪ್ಪಿದ ಘಟನೆ ಸಿದ್ದಕಟ್ಟೆ ಸಮೀಪದ ಕೊನೆರಬೆಟ್ಟುನಲ್ಲಿ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿದ್ದಕಟ್ಟೆ ಬಂಟರ ಸಂಘದ ವತಿಯಿಂದ ಕೆಸರುಗದ್ದೆ ಕ್ರೀಡಾ ಕೂಟ ಆಯೋಜಿಸುತ್ತಿದ್ದು , ಪ್ರತೀ ವರ್ಷ ದಂತೆ ಕೆಸರು ಗದ್ದೆ ಕೂಟದ ಮೊದಲು ಕೊನೆರಬೆಟ್ಟು ಸ್ಥಳ ದೈವಗಳಿಗೆ ಪರ್ವ ನಡೆಸಿ ಪ್ರಾರ್ಥನೆ ಮಾಡುವುದು ವಾಡಿಕೆ. ಈ ಬಾರಿಯೂ ರವಿವಾರ ಕೆಸರು ಗದ್ದೆ ಕೂಟದ ಮೊದಲು...