Saturday, February 8, 2025

ಸುದ್ದಿ

ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕುಳ: ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆ: ಕುಸಿದು ಬಿದ್ದ ಕೋಳಿ ಸಾಕಾಣೆ ಶೆಡ್ : ಸಾವಿರಾರು ಕೋಳಿಗಳು ಸಾವು -ಕಹಳೆ ನ್ಯೂಸ್

ವಿಟ್ಲ: ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಯಿಂದಾಗಿ ಕೋಳಿ ಸಾಕಾಣೆ ಮಾಡುವ ಶೆಡ್ ಒಂದು ನೆಲಕ್ಕುರುಳಿ ಸುಮಾರು ಒಂದೂವರೆ ಸಾವಿರ ಕೋಳಿಗಳು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಕುಳ ಗ್ರಾಮದ ಸೇಕೆಹಿತ್ಲು ಎಂಬಲ್ಲಿ  ತಡರಾತ್ರಿ ನಡೆದಿದೆ. ಬಂಟ್ವಾಳ ತಾಲೂಕು ಕುಳ ಗ್ರಾಮದ ಸೇಕೆಹಿತ್ಲು ನಿವಾಸಿ ರಾಘವರವರ ಮಾಲಕತ್ವದ ಶೆಡ್ ಇದಾಗಿದ್ದು, ಅದರಲ್ಲಿ ಸುಮಾರು 2200 ಕೋಳಿಗಳನ್ನು ಅವರು ಸಾಕಾಣೆ ಮಾಡುತ್ತಿದ್ದರು. ಕೋಳಿಗಳು ದೊಡ್ಡದಾಗಿರುವ ಹಿನ್ನೆಲೆಯಲ್ಲಿ ಸುಮಾರು 700 ಕೋಳಿಗಳು ಮಾರಾಟವಾಗಿದ್ದವು....
ದಕ್ಷಿಣ ಕನ್ನಡಬೆಂಗಳೂರುಮಂಗಳೂರುಸುದ್ದಿ

ಗುಡ್ಡ ಕುಸಿತದಿಂದ ಮಂಗಳೂರು-ಬೆಂಗಳೂರು ನಡುವೆ ರಸ್ತೆ ಸಂಪರ್ಕ ಕಡಿತ, ತುರ್ತಾಗಿ ಹೆಚ್ಚುವರಿ ರೈಲು ಸೇವೆ ಒದಗಿಸುವಂತೆ ಪತ್ರ ಬರೆದ ಕ್ಯಾಪ್ಟನ್ ಬ್ರಿಜೇಶ್ ಚೌಟ-ಕಹಳೆ ನ್ಯೂಸ್

ವ್ಯಾಪಕ ಮಳೆಯಿಂದಾಗಿ ಮಂಗಳೂರು ಮತ್ತು ಬೆಂಗಳೂರನ್ನು ಸಂಪರ್ಕಿಸುವ ಮುಖ್ಯ ಎರಡೂ ರಾಷ್ಟೀಯ ಹೆದ್ದಾರಿಗಳಲ್ಲಿ ಗುಡ್ಡ ಕುಸಿತದಿಂದ ವಾಹನ ಸಂಪರ್ಕ ಕಡಿತವಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಮತ್ತು ಮೈಸೂರು ಡಿಆರ್‌ಎಮ್ ಅವರಿಗೆ ಮಂಗಳೂರು- ಬೆಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆಯನ್ನು ತುರ್ತಾಗಿ ಪ್ರಾರಂಭಿಸುವಂತೆ ಪತ್ರ ಬರೆದು ವಿನಂತಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರು ಮಂಗಳೂರು- ಬೆಂಗಳೂರು ನಗರಗಳ ನಡುವೆ ನಿತ್ಯ...
ಕುಂದಾಪುರಸುದ್ದಿ

ಕುಂದಾಪುರ:ಕಂಡ್ಲೂರು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಛಾಯಾಗ್ರಾಹಕನ ಮೃತದೇಹ ಕುಂದಾಪುರ ಆನಗಳ್ಳಿ ನದಿ ತೀರದಲ್ಲಿ ಪತ್ತೆ -ಕಹಳೆ ನ್ಯೂಸ್

ಕುಂದಾಪುರ: ಗಂಡ ಹೆಂಡತಿ ನಡುವೆ ನಡೆದ ಗಲಾಟೆ ಪೊಲೀಸ್ ಮೆಟ್ಟಿಲೇರಿದ ಪರಿಣಾಮ ಮನನೊಂದು ಪತಿ ಮನೆಯವರ ಎದುರೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಂಡ್ಲೂರು ಎಂಬಲ್ಲಿ ನಡೆದಿದೆ. ನದಿಗೆ ಹಾರಿ ನಾಪತ್ತೆಯಾಗಿರುವವರನ್ನು ಕಾಳಾವರ ಜನತಾ ಕಾಲನಿ ನಿವಾಸಿ ಹರೀಶ್ (44) ಎಂದು ಗುರುತಿಸಲಾಗಿದ್ದು, ಇವರು ವೃತ್ತಿಯಲ್ಲಿ ಪೋಟೋಗ್ರಾಫರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಹರೀಶ್ ಸುಮಾರು 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಇತ್ತಿಚಿನ ದಿನಗಳಲ್ಲಿ ಗಂಡ ಹೆಂಡತಿ ನಡುವೆ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ರಿ. ಬಂಟ್ವಾಳ ಘಟಕದ ಆಶ್ರಯದಲ್ಲಿ ಶ್ರವಣ್ ಅಗ್ರಬೈಲ್ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 3 ಕಾರ್ಯಕ್ರಮ- ಕಹಳೆ ನ್ಯೂಸ್

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ರಿ. ಬಂಟ್ವಾಳ ಘಟಕದ ಆಶ್ರಯದಲ್ಲಿ ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನದ ಅಂಗವಾಗಿ ಪ್ರಚಾರ ನಿರ್ದೇಶಕ ಶ್ರವಣ್ ಅಗ್ರಬೈಲ್ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 3 ಕಾರ್ಯಕ್ರಮದಲ್ಲಿ ಗುರುಸಂದೇಶ ನೀಡಿ ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಸ್ಥಾಪಕ ಅಧ್ಯಕ್ಷ ಕೀರ್ತಿಶೇಷ ಚಂದಪ್ಪ ಪೂಜಾರಿಯವರ ಸಮಾಜ ಸೇವೆ ಅವರ ಆದರ್ಶಗಳು ಯುವ ಸಮುದಾಯಕ್ಕೆ ಪ್ರೇರಣೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ, ಉಪಾಧ್ಯಕ್ಷ...
ದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯ

ಗುತ್ತಿಗಾರು: ಕಾಜಿಮಡ್ಕ ಬಳಿ ಕಾರು – ಜೀಪು ಡಿಕ್ಕಿ, ಅಲ್ಪಗಾಯ- ಕಹಳೆ ನ್ಯೂಸ್

ಗುತ್ತಿಗಾರು ಬಳಿಯ ಕಾಜಿಮಡ್ಕ ಎಂಬಲ್ಲಿ ಕಾರು ಮತ್ತು ಜೀಪು ಪರಸ್ಪರ ಡಿಕ್ಕಿಯಾಗಿ ಕಾರಿನಲ್ಲಿದ್ದವರಿಗೆ ಅಲ್ಪ ಗಾಯವಾದ ಘಟನೆ ಜು.18 ರ ಸಂಜೆ ನಡೆದಿದೆ. ಗುತ್ತಿಗಾರಿನಿಂದ ಪ್ರಸಾದ್ ಎಂಬವರು ತನ್ನ ಕಾರಿನಲ್ಲಿ ಸುಳ್ಯದಿಂದ ಗುತ್ತಿಗಾರು ಕಡೆ ಬರುತಿದ್ದು, ಅರಂತೋಡಿನವರ ವರೊಬ್ಬರ ಜೀಪು ಗುತ್ತಿಗಾರಿನಿಂದ ಸುಳ್ಯ ಕಡೆ ಹೋಗುತಿತ್ತೆನ್ನಲಾಗಿದೆ. ಕಾಜಿಮಡ್ಕ ಎಂಬಲ್ಲಿ ಪರಸ್ಪರ ಡಿಕ್ಕಿ ಹೊಡೆದು ಕಾರಿನಲ್ಲಿದ್ದವರಿಗೆ ಸ್ವಲ್ಪ ಗಾಯವಾಗಿರುವುದಾಗಿದ್ದು, ಕಾರು, ಜೀಪ್ ಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ....
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕೇಪು: ಸಿಡಿಲು ಬಡಿದು ಮನೆಗೆ ಹಾನಿ – ಕಹಳೆ ನ್ಯೂಸ್

ವಿಟ್ಲ : ಕೇಪು ಗ್ರಾಮದ ಚೆಲ್ಲಡ್ಕ ಎಂಬಲ್ಲಿನ ಮನೆಯೊಂದಕ್ಕೆ ಸಿಡಿಲು ಬಡಿದು ಹಾನಿಯಾದ ಘಟನೆ ನಡೆದಿದೆ. ಚೆಲ್ಲಡ್ಕ ಶಶಿಶೇಖರ ಭಂಡಾರಿ ಎಂಬವರ ಮನೆಗೆ ತಡರಾತ್ರಿ ಸಿಡಿಲು ಬಡಿದ ದುರ್ಘಟನೆ ಸಂಭವಿಸಿದೆ‌. ಘಟನೆಯಿಂದಾಗಿ ಮನೆಯೊಳಗಿದ್ದ ಫ್ರಿಡ್ಜ್, ಡ್ರೈಂಡ‌ರ್, ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿಯಾಗಿದೆ‌. ಸಿಡಿಲಿನ ಆಘಾತಕ್ಕೆ ಎಲೆಕ್ಟ್ರೋನಿಕ್ಸ್ ಉಪಕರಣಗಳಲ್ಲಿ ಬೆಂಕಿ ಉಂಟಾದ ಹಿನ್ನೆಲೆಯಲ್ಲಿ ಮನೆಯ ಒಂದು ಭಾಗ ಬೆಂಕಿಗಾಹುತಿಯಾಗಿದೆ‌. ಸ್ಥಳೀಯ ಯುವಕರು ಬೆಂಕಿ ನಂದಿಸಲು ಪ್ರಯತ್ನಿಸಿದ್ದರಾದ ಬೆಂಕಿ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಅಗ್ನಿಶಾಮಕದಳದವರಿಗೆ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪುಂಜಾಲಕಟ್ಟೆ ಮಂದಿರದ ಬಳಿಯ ತಿರುವಿನಲ್ಲಿ ಶಾಮಿಯಾನ ಅಂಗಡಿಗೆ ಸೇರಿದ ಲಾರಿ ಪಲ್ಟಿ : ಒರ್ವ ಮೃತ್ಯು,ಇಬ್ಬರ ಸ್ಥಿತಿ ಗಂಭೀರ – ಕಹಳೆ ನ್ಯೂಸ್

ಬಂಟ್ವಾಳ: ಲಾರಿಯೊಂದು ಪಲ್ಟಿಯಾಗಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟರೆ ಇನ್ನು ಇಬ್ಬರು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಪುಂಜಾಲಕಟ್ಟೆ ಎಂಬಲ್ಲಿ ಇದೀಗ ನಡೆದಿದೆ. ಫರಂಗಿಪೇಟೆ ನಿವಾಸಿ ಕಾರ್ತಿಕ್ ಎಂಬಾತ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಇನ್ನುಳಿದಂತೆ ಗಾಯಗೊಂಡವರ ಹೆಸರು ಮಾಹಿತಿ ಲಭ್ಯವಾಗಿಲ್ಲ. ವಗ್ಗ ಸಮೀಪದ ಮದ್ವ ಎಂಬಲ್ಲಿನ ಶಾಮಿಯಾನ ಅಂಗಡಿಗೆ ಸೇರಿದ ಲಾರಿ ಇದಾಗಿದ್ದು, ಐಶರ್ ಲಾರಿಯಲ್ಲಿ ಸಾಮಿಯಾನದ ಸಾಮಾಗ್ರಿಗಳನ್ನು ಬೆಳ್ತಂಗಡಿ ಕಡೆಗೆ ಕೊಂಡುಹೋಗುತ್ತಿದ್ದ ವೇಳೆ ಪುಂಜಾಲಕಟ್ಟೆ ಮಂದಿರದ ಬಳಿ ತಿರುವಿನಲ್ಲಿ ಲಾರಿ...
ಕಾಪುಕೃಷಿಸುದ್ದಿ

ರೋಟರಿ ಕ್ಲಬ್ ಶಂಕರಪುರ ವತಿಯಿಂದ ಉಸಿರಿಗಾಗಿ ಹಸಿರು ಗಿಡ ನೆಡುವ ಕಾರ್ಯಕ್ರಮ- ಕಹಳೆ ನ್ಯೂಸ್

ರೋಟರಿ ಕ್ಲಬ್ ಶಂಕರಪುರ ವತಿಯಿಂದ ಉಸಿರಿಗಾಗಿ ಹಸಿರು ಗಿಡ ನೆಡುವ ಕಾರ್ಯಕ್ರಮವನ್ನು ಶಂಕರಪುರ ಫ್ರಾನ್ಸಿಸ್ ಡೆಸಾ ಮತ್ತು ಗಿರೀಶ್ ಆಚಾರ್ಯ ಇವರ ಮನೆಯ ಪರಿಸರದಲ್ಲಿ ಇಂದು ಕಾಪು ತಾಲೂಕು ತಹಸೀಲ್ದಾರರು ಆದ ಡಾ ಪ್ರತಿಭಾ ಆರ್ ಇವರು ಗಿಡ ನೆಡುವುದರ, ಮತ್ತು ಕೊಡುವ ಮೂಲಕ ಉದ್ಘಾಟನೆ ಮಾಡಿ, ಪರಿಸರ ಜಾಗೃತಿಯ ಬಗ್ಗೆ ಮಾತನಾಡಿದರು. ನಂತರ ರೋಟರಿ ಶಂಕರಪುರ ವತಿಯಿಂದ ಮಾನ್ಯ ತಹಸೀಲ್ದಾರ್ ರವರಿಗೆ ಮತ್ತು ಈ ಕಾರ್ಯಕ್ರಮಕ್ಕೆ ಗಿಡ ನೀಡಿ...
1 226 227 228 229 230 2,770
Page 228 of 2770