Saturday, February 8, 2025

ಸುದ್ದಿ

ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಸಂಸ್ಕಾರ ನೀಡಿ ಸದೃಡ ರಾಷ್ಟ್ರ ನಿರ್ಮಾಣದ ಜವನೆರೆ ತುಡರ್ ನ ಪ್ರಯತ್ನ ಶ್ಲಾಘನೀಯ: ಪ್ರಭಾಕರ ಪ್ರಭು. -ಕಹಳೆ ನ್ಯೂಸ್

ಬಂಟ್ವಾಳ : ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಸಂಸ್ಕಾರ ನೀಡಿ ಸದೃಡ ರಾಷ್ಟ್ರ ನಿರ್ಮಾಣದ ಜವನೆರೆ ತುಡರ್ ನ ಪ್ರಯತ್ನ ಶ್ಲಾಘನೀಯ ಎಂದು ಸಿಎ ಬ್ಯಾಂಕ್ ಸಿದ್ಧಕಟ್ಟೆಯ ಅಧ್ಯಕ್ಷ ಪ್ರಭಾಕರು ಪ್ರಭು ಹೇಳಿದರು. ಅವರು ಜವನೆರೆ ತುಡರ್ ಟ್ರಸ್ಟ್ (ರಿ) ಸಿದ್ಧಕಟ್ಟೆ ವಲಯ ಇದರ ಆಶ್ರಯದಲ್ಲಿ ಸಿದ್ಧಕಟ್ಟೆ ನೇತ್ರಾವತಿ ಸಭಾಭವನದಲ್ಲಿ ಜರಗಿದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರ ಹಾಗೂ ವೃತ್ತಿ ಮಾರ್ಗದರ್ಶನ ಮಂಥನ -2024...
ದಕ್ಷಿಣ ಕನ್ನಡಮಂಗಳೂರುಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ನಿರಂತರ ಭಾರೀ ಮಳೆ ; ಎಲ್ಲಾ ಶಾಲೆ, ಪ. ಪೂ. ಕಾಲೇಜುಗಳಿಗೆ ನಾಳೆ ( ಜು.16 ) ರಜೆ ಘೋಷಣೆ – ಕಹಳೆ ನ್ಯೂಸ್

ಮಂಗಳೂರು: ದಕ್ಷಿಣ ಕನ್ನಡದಲ್ಲಿ ರಂದು ರೆಡ್ ಅಲರ್ಟ್ ಘೋಷಣೆ ಮತ್ತು ನಿರಂತರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ನಾಳೆ (ಜು.16)ಎಲ್ಲಾ ಶಾಲೆಗಳು,ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ....
ಉಡುಪಿಕುಂದಾಪುರಸುದ್ದಿ

ಲಯನ್ಸ್ ಕ್ಲಬ್ ಕ್ರೌನ್‍ವತಿಯಿಂದ ಮೂರು ದಿನಗಳ ಕಾಲ ನಡೆದ ಹಲಸು ಮತ್ತು ಕೃಷಿ ಮೇಳ-ಕಹಳೆ ನ್ಯೂಸ್

 ಕುಂದಾಪುರ :ರೈತವ್ಯಾಪ್ತಿ ವರ್ಗದವರಿಗೆ, ಹಾಗೂ ಗ್ರಾಹಕರಿಗೆ ಅನುಕೂಲವಾಗುವಂತಹ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಕ್ರೌನ್ ಆಯೋಜಿಸಿರುವುದು ಅಭಿನಂದನೀಯ. ಮುಖ್ಯವಾಗಿ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಇಂಥಹ ಕಾರ್ಯಕ್ರಮಗಳು ಪೂರಕವಾಗಬೇಕು. ಈ ಮೂರು ದಿನಗಳಲ್ಲಿ ಸುಮಾರು 20,000 ಗಿಡಗಳ ವ್ಯಾಪಾರ ಮಾರಾಟವಾಗಿರುವುದು ಕೇಳಿ ಸಂತೋಷವಾಯಿತು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಕುಂದಾಪುರದ ನೆಹರು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಹಲಸು ಮತ್ತು ಕೃಷಿ ಮೇಳ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಹಸಿರು ವಾತಾವರಣ ನಮ್ಮದಾಗಬೇಕು:ಡಾ.ದೇವಿಪ್ರಸಾದ್. ಕೆ .ಎನ್ -ಕಹಳೆ ನ್ಯೂಸ್

ಪುತ್ತೂರು: ಶುದ್ಧವಾದ ಗಾಳಿ,ಒಳ್ಳೆಯ ವಾತಾವರಣ ನಮಗೆ ದೊರಕಬೇಕೆಂದರೆ ಅಲ್ಲಿ ಸಸ್ಯಗಳ ಸಂಖ್ಯೆ ಹೆಚ್ಚಾಗಿರಬೇಕು.ಕಾಲೇಜು ಆವರಣ ಹಸಿರು ಸಸ್ಯಗಳಿಂದ ಕೂಡಿರಬೇಕು ಹಾಗೂ ಜ್ಞಾನದ ಜೊತೆಗೆ ಸಸ್ಯ ಸಂಪತ್ತನ್ನು ಬೆಳೆಸುವ ಜವಾಬ್ದಾರಿ ನಮ್ಮದಾಗಬೇಕು.ಹಸಿರಾದ ಪರಿಸರ ಕಣ್ಣಿಗೆ ಹೇಗೆ ಹಿತವೋ ಹಾಗೆಯೇ ಆರೋಗ್ಯಕ್ಕೂ ಒಳ್ಳೆಯದು , ಇದರಿಂದ ವಾಯುಮಾಲಿನ್ಯವನ್ನು ತಡೆಯಬಹುದು ಎಂದು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ದೇವಿಪ್ರಸಾದ್ ಕೆ.ಎನ್ ಹೇಳಿದರು. ಇವರು ಪುತ್ತೂರಿನ ವಿವೇಕಾನಂದ ಸಮೂಹ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ವಿವೇಕ ಸಂಜೀವಿನಿ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಿ.ಸಿ.ರೋಡು ಮಧ್ಯೆ ಸಂಚರಿಸುವ ಖಾಸಗಿ ಬಸ್ಸು ಗದ್ದೆಗೆ ಪಲ್ಟಿ-ಕಹಳೆ ನ್ಯೂಸ್

ಬಂಟ್ವಾಳ: ಅಜಿಲಮೊಗರು- ಸರಪಾಡಿ ರಸ್ತೆಯ ಮಣಿನಾಲ್ಕೂರು ಗ್ರಾಮದ ಕೊಟ್ಟುಂಜದಲ್ಲಿ ಸರಪಾಡಿ- ಬಿ.ಸಿ.ರೋಡು ಮಧ್ಯೆ ಸಂಚರಿಸುವ ಖಾಸಗಿ ಬಸ್ಸು ಪಲ್ಟಿಯಾದ ಘಟನೆ ಸೋಮವಾರ ನಡೆದಿದೆ. ಬಸ್ಸು ಸಂಪೂರ್ಣವಾಗಿ ಗದ್ದೆಗೆ ಪಲ್ಟಿಯಾಗಿದ್ದು, ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ವಿಪರೀತ ಮಳೆಯಿಂದಾಗಿ ಗದ್ದೆಯಲ್ಲಿ ನೀರು ತುಂಬಿದ್ದು, ಹೀಗಾಗಿ ಕೆಲವು ಪ್ರಯಾಣಿಕರು ಕೆಸರಿನಿಂದ ತುಂಬಿದ್ದರು ಎನ್ನಲಾಗಿದೆ....
ದಕ್ಷಿಣ ಕನ್ನಡಪುತ್ತೂರುಸುದ್ದಿ

ಭಯೋತ್ಪಾದಕರು ಯಾವ ಸಂತತಿಯವರು ಎಂದು ಎಲ್ಲರಿಗೂ ಗೊತ್ತಿದೆ’ ‘ಎಂ.ಎಸ್ ಮಹಮ್ಮದ್ ಶಾಸಕ ಡಾ.ಭರತ್ ಶೆಟ್ಟಿಯವರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸ್ಬೇಕು’ – ಸಾಜ ರಾಧಕೃಷ್ಣ ಆಳ್ವ-ಕಹಳೆ ನ್ಯೂಸ್

ಪುತ್ತೂರು ದೇಶದಲ್ಲಿ ಮಾತ್ರವಲ್ಲದೇ ಜಗತ್ತಿನಲ್ಲಿ ಭಯೋತ್ಪಾದನೆ ಮಾಡುವ ಭಯೋತ್ಪಾದಕರು ಎಲ್ಲರೂ ಯಾವ ಸಂತತಿಯವರು ಎಂಬುದು ಜಗಜ್ಜಾಹೀರಾಗಿರುವಾಗ ಮಂಗಳೂರು ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿಯವರನ್ನು ಭಯೋತ್ಪಾದಕ ಎಂದು ಕರೆದಿರುವ ಕಾಂಗ್ರೆಸ್ ಮುಖಂಡ ಎಂ.ಎನ್ ಮಹಮ್ಮದ್ ಹೇಳಿರುವುದು ಖಂಡನೀಯ ಹಾಗೆಯೇ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಗಕೃಷ್ಣ ಅಳ್ಳ ಆಗ್ರಹಿಸಿದ್ದಾರೆ....
ದಕ್ಷಿಣ ಕನ್ನಡಪುತ್ತೂರುಸುದ್ದಿ

ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯಲ್ಲಿ ಪೋಕ್ಸೋ ಕಾಯ್ದೆ ಅರಿವು ಕಾರ್ಯಕ್ರಮ-ಕಹಳೆ ನ್ಯೂಸ್

ಪುತ್ತೂರು : ಬಲ್ನಾಡಿನ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಪೋಕ್ಸೋ. ಕಾಯ್ದೆ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಜಂಬೂರಾಜ್ ಮಹಾಜನ್ ರವರು ಶಾಲಾ ಮಕ್ಕಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನಾಗೇಶ್ ದಡ್ಡಿಕರ  ಬಲ್ನಾಡು ಬೀಟ್ ಪೊಲೀಸ್, ಶಾಲಾ ಮುಕೋಪಾಧ್ಯಾಯರು, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು....
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಚಾಲಕನ ನಿಯಂತ್ರಣ ತಪ್ಪಿ ಪ್ರಪಾತದಲ್ಲಿ ತುಂಬಿದ್ದ ನೀರಿಗೆ ಬಿದ್ದ ಮಾರುತಿ ಸ್ವಿಫ್ಟ್ ಕಾರು -ಕಹಳೆ ನ್ಯೂಸ್

ಬಂಟ್ವಾಳ: ಪಾಣೆಮಂಗಳೂರು ಪೇಟೆ ಸಂಪರ್ಕ ರಸ್ತೆಯಿಂದ ಮಾರುತಿ ಸ್ವಿಫ್ಟ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತದಲ್ಲಿ ತುಂಬಿದ್ದ ನೀರಿಗೆ ಬಿದ್ದ ಘಟನೆ ಸೋಮವಾರ ನಡೆದಿದೆ. ನಂದಾವರ ಮೂಲದ ವ್ಯಕ್ತಿಯೊಬ್ಬರು ಕಾರು ಎನ್ನಲಾಗಿದ್ದು, ಘಟನೆ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎನ್ನಲಾಗಿದೆ. ಬಂಟ್ವಾಳ: ಪಾಣೆಮಂಗಳೂರು ಪೇಟೆ ಸಂಪರ್ಕ ರಸ್ತೆಯಿಂದ ಮಾರುತಿ ಸ್ವಿಫ್ಟ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತದಲ್ಲಿ ತುಂಬಿದ್ದ ನೀರಿಗೆ ಬಿದ್ದ ಘಟನೆ ಸೋಮವಾರ ನಡೆದಿದೆ. ನಂದಾವರ ಮೂಲದ ವ್ಯಕ್ತಿಯೊಬ್ಬರು...
1 231 232 233 234 235 2,770
Page 233 of 2770