ಬಂಟ್ವಾಳ: ಫರಂಗಿಪೇಟೆ ಸುಜೀರು ಸರಕಾರಿ ಪ್ರೌಢಶಾಲೆಯಲ್ಲಿ 16ವರ್ಷಗಳಿಂದ ಮುಖ್ಯಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದ ಶಶಿಮಂಗಳ ವೈ ಅವರಿಗೆ ಬೀಳ್ಕೊಡುಗೆ ಸಮಾರಂಭ – ಕಹಳೆ ನ್ಯೂಸ್
ಬಂಟ್ವಾಳ: ಫರಂಗಿಪೇಟೆ ಸಮೀಪದ ಸುಜೀರು ಸರಕಾರಿ ಪ್ರೌಢಶಾಲೆಯಲ್ಲಿ 16 ವರ್ಷಗಳ ಕಾಲ ಮುಖ್ಯಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಶಶಿಮಂಗಳ ವೈ. ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ, ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ ಮಾತನಾಡಿ, ಶಿಕ್ಷಕಿ ಹೇಗಿರಬೇಕು ಎಂಬುದನ್ನು ಶಶಿಮಂಗಳ ಮೇಡಂ ತೋರಿಸಿಕೊಟ್ಟಿದ್ದು, ಶಾಲೆಯ ವಾತಾವರಣ ಚೆನ್ನಾಗಿದ್ದಾಗ ಶಿಕ್ಷಕರಿಂದ ಉತ್ತಮ ಕಾರ್ಯವೈಖರಿಯನ್ನು ನಿರೀಕ್ಷೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಶಶಿಮಂಗಳ ಅವರ ಸೇವೆಯನ್ನು ಇಡೀ ಶಾಲೆ ಸ್ಮರಿಸಲಿದೆ ಎಂದರು....