ಮೂಡುಬಿದಿರೆ ತಾ.ಪಂ.ಸಾಮಾನ್ಯ ಸಭೆ ; ಡೆಂಗ್ಯೂ ಬಗ್ಗೆ ಎಚ್ಚರ, ಮಳೆಹಾನಿಗೆ ಮುಂಜಾಗೃತ ಕ್ರಮ ವಹಿಸಿಸಲು ಸೂಚನೆ –ಕಹಳೆ ನ್ಯೂಸ್
ಮೂಡುಬಿದಿರೆ: ಮಳೆಗಾಲದಲ್ಲಿ ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಮಲೇರಿಯಾ ಜಾಗೃತೆ ವಹಿಸುವಂತೆ ಜನರಿಗೆ ಮಾಹಿತಿ ನೀಡಿ, ಪ್ರಾಕೃತಿಕ ವಿಕೋಪದಿಂದ ಹಾನಿಗಳಾಗುವ ಮೊದಲೇ ಪರಿಹಾರ ಕಂಡುಕೊಳ್ಳಲು ಮುತುವರ್ಜಿ ವಹಿಸಿ ಹಾಗೂ ಜೀವಹಾನಿಯಾಗದಂತೆ ತಡೆಯುವಲ್ಲಿ ಎಲ್ಲಾ ಇಲಾಖೆಗಳು ಪರಸ್ಪರ ಕೈ ಜೋಡಿಸುವಂತೆ ತಾಪಂ ಆಡಳಿತಾಧಿಕಾರಿ, ಮಂಗಳೂರು ಪಶು ಸಂಗೋಪನೆ ಮತ್ತು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಕರೆ ನೀಡಿದರು. ಅವರು ಮೂಡುಬಿದಿರೆ ತಾಲೂಕು ಪಂಚಾಯತ್ ವತಿಯಿಂದ ಮಂಗಳವಾರ ಸಮಾಜ ಮಂದಿರದಲ್ಲಿ...