ದೇಶದ ವಿವಿಧ ರಾಜ್ಯಗಳಲ್ಲಿ ವಿಸ್ತಾರಗೊಳ್ಳುತ್ತಿರುವ ಪಟ್ಲ ಫೌಂಡೇಶನ್ !
ಮಂಗಳೂರು : ಕರಾವಳಿಯ ಗಂಡುಕಲೆಯಾಗಿರುವ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದರು (ತೆಂಕು,ಬಡಗು ಮತ್ತು ಬಡಾಬಡಗು) ಅಶಕ್ತತೆಗೆ ಒಳಗಾದಾಗ ಅವರ ಬಾಳಿಗೆ ಬೆಳಕಾಗಿ ಬಂದ ಟ್ರಸ್ಟೇ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಟ್ರಸ್ಟ್ ಸ್ಥಾಪನೆಯಾದಾಗಿನಿಂದ ಈವರೆಗಿನ ಸೇವಾ- ಕಾರ್ಯಚಟುವಟಿಕೆಗಳ ವಿವರಗಳು ಹಾಗೂ ಮುಂದೆ ಹಮ್ಮಿಕೊಂಡಿರುವ ಕಾರ್ಯಯೋಜನೆಗಳು ಈಗಾಗಲೇ ಸಾರ್ವಜನಿಕವಾಗಿ ಜನಜನಿತವಾಗಿದೆ. ಪ್ರಾರಂಭದಲ್ಲಿ ಟ್ರಸ್ಟ್ ಕರಾವಳಿಯ ಕೇಂದ್ರ ಬಿಂಧುವಾಗಿ ಮಂಗಳೂರಿನಲ್ಲಿ ಉದಯಿಸಿ, ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಒಳಗೊಂಡಂತೆ...