ಎಸ್ಐ ಆಗಿ ಅಧಿಕಾರ ಸ್ವೀಕರಿಸಿದ ಭಾರತದ ಮೊದಲ ಮಂಗಳಮುಖಿ ಪ್ರೀತಿಕಾ !
ಚೆನ್ನೈ: ಭಾರತದ ಮೊದಲ ಮಂಗಳಮುಖಿ ಪೊಲೀಸ್ ಅಧಿಕಾರಿ ಕೆ. ಪ್ರೀತಿಕಾ ಯಾಶಿನಿ, ಇಂದು ಚೂಲೈಮೇಡು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಆಗಿ ಚಾರ್ಜ್ ತೆಗೆದುಕೊಂಡಿದ್ದಾರೆ. ಪ್ರೀತಿಕಾ ವಿಶೇಷವಾಗಿ ಮಂಗಳಮುಖಿಯರನ್ನ ನಿಭಾಯಿಸುವಲ್ಲಿ ತುಂಬಾ ಸಹಾಯಕರಾಗಿದ್ದಾರೆ. ಚೂಲೈಮೇಡು ಪೊಲೀಸ್ ಠಾಣೆಯಲ್ಲಿ ಎಲ್ಲರನ್ನೂ ಸಮಾನವಾಗಿ ಪರಿಗಣಿಸಲಾಗುವುದು ಮತ್ತು ನಮ್ಮಲ್ಲಿ ಯಾವುದೇ ತಾರತಮ್ಯವಿಲ್ಲ ಎಂದು ಠಾಣೆ ಇನ್ಸ್ ಪೆಕ್ಟರ್ ಜೆ.ಶಿವಕುಮಾರ್ ಹೇಳಿದ್ದಾರೆ. ಪ್ರೀತಿಕಾ ಪೊಲೀಸ್ ಸರ್ವೀಸ್ ಗೆ ಸೇರುವುದಕ್ಕೂ ಮೊದಲು ಅನೇಕ ಸಮಸ್ಯೆಗಳನ್ನ ಫೇಸ್...