ಪ್ರಮೋದ್ ಮಧ್ವರಾಜ್ ಬಿ.ಜೆ.ಪಿ. ಗೆ ……!?
ಬೆಂಗಳೂರು: ಸಚಿವ ಪ್ರಮೋದ್ ಮಧ್ವರಾಜ್ ಅವರು ಬಿಜೆಪಿಗೆ ಬಂದರೆ ಸ್ವಾಗತ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ 'ಮೋದಿ ಆಡಳಿತವನ್ನು ನೋಡಿ ಅನೇಕ ಮುಖಂಡರು ಬಿಜೆಪಿಯತ್ತ ಆಕರ್ಷಿತರಾಗಿದ್ದಾರೆ. ಪ್ರಮೋದ್ ಸೇರಿದಂತೆ ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ'ಎಂದರು. ಇದೇ ವೇಳೆ 'ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಂದರೂ ಪಕ್ಷ ಸ್ವಾಗತಿಸುತ್ತದೆ' ಎಂದು ಹಾಸ್ಯ ಚಟಾಕಿ ಹಾರಿಸಿದರು....