ಈ ಬಾರಿ ದೀಪಾವಳಿಯನ್ನು ಚೀನಾ ಗಡಿಯಲ್ಲಿ ಯೋಧರೊಂದಿಗೆ ಆಚರಿಸಲಿರುವ ಪ್ರಧಾನಿ ಮೋದಿ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅ.20 ರಂದು ಉತ್ತರಾಖಂಡ್ ನಲ್ಲಿರುವ ಕೇದಾರನಾಥ್ ಮಂದಿರಕ್ಕೆ ಭೇಟಿ ನೀಡಲಿದ್ದು, ಚೀನಾ ಗಡಿಯಲ್ಲಿರುವ ಐಟಿಬಿಪಿ ಯೋಧರು, ಸೇನೆಯೊಂದಿಗೆ ದೀಪಾವಳಿ ಆಚರಣೆ ಮಾಡಲಿದ್ದಾರೆ. ಸರ್ಕಾರದ ಮಾಹಿತಿ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಆಚರಣೆಯ ನಂತರ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ದೇವಾಲಯವನ್ನು 2013 ರ ಮಾದರಿಯ ಜಲಪ್ರಳಯದಿಂದ ರಕ್ಷಿಸಲು ಈಗಾಗಲೇ ನಿರ್ಮಿಸಲಾಗಿರುವ ದೇವಾಲಯ ರಕ್ಷಣಾ ಗೋಡೆ ಹಾಗೂ ಇನ್ನಿತರ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಿ ನರೇಂದ್ರ...