ವ್ಯವಸ್ಥಿತ ಒಳಚರಂಡಿ ಬೇಕು ; ಸೋರುತ್ತಿರುವ ವೆಟ್ವೆಲ್ಗಳಿಂದ ಮಾಲಿನ್ಯ-ಕಹಳೆ ನ್ಯೂಸ್
ಸುರತ್ಕಲ್: ಮಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ಸುರತ್ಕಲ್ ಮೂಲಸೌಕರ್ಯದಲ್ಲಿ ಮಾತ್ರ ತುಂಬಾ ಹಿಂದೆ ಬಿದ್ದಿದೆ. ಅದರಲ್ಲೂ ಬೆಳೆಯುವ ನಗರಕ್ಕೆ ಅತ್ಯಂತ ಅಗತ್ಯವಾಗಿ ರುವ ಒಳಚರಂಡಿ ಯೋಜನೆ ಇಲ್ಲಿ ಅವ್ಯವಸ್ಥಿತವಾಗಿದೆ. ಏಳೆಂಟು ವರ್ಷಗಳ ಹಿಂದೆ ಎಡಿಬಿ ಯೋಜನೆಯಡಿ ನಗರದಲ್ಲಿ ನಿರ್ಮಾಣ ವಾದ ಒಳಚರಂಡಿ ಕಾಮಗಾರಿಗೆ ಬರೋಬ್ಬರಿ 218 ಕೋಟಿ ರೂ. ವಿನಿಯೋಗಿಸಲಾಗಿದೆ. ಆದರೆ, ಅದೆಲ್ಲವೂ ಅರೆಬರೆಯಾಗಿದ್ದು, ಕಳಪೆ ಕಾಮಗಾರಿಯಿಂದ ಸಮಸ್ಯೆ ಇನ್ನಷ್ಟು ಉಲ್ಬಣಿಸಿದೆ. ಸುರತ್ಕಲ್ನಲ್ಲಿ ವಾಣಿಜ್ಯ ಸಂಕೀರ್ಣಗಳು, ವಸತಿ ಸಂಕೀರ್ಣಗಳು, ಬೃಹತ್ ಶಾಪಿಂಗ್...