Tuesday, January 21, 2025

ಸುದ್ದಿ

ಜಿಲ್ಲೆಶಿವಮೊಗ್ಗಸುದ್ದಿ

ಜೀಪ್ ಮತ್ತು ಟಿಟಿ ನಡುವೆ ಮುಖಾಮುಖಿ ಡಿಕ್ಕಿ: 8 ಮಂದಿಗೆ ಗಾಯ-ಕಹಳೆ ನ್ಯೂಸ್

ಶಿವಮೊಗ್ಗ: ಹೊಸನಗರ ತಾಲೂಕಿನ ನಿಟ್ಟೂರು ಸಮೀಪ ಜೀಪ್ ಹಾಗೂ ಟಿಟಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 8 ಮಂದಿ ಗಾಯಗೊಂಡ ಘಟನೆ ನಡೆದಿದೆ. ಶಿವಮೊಗ್ಗ ಕಡೆಯಿಂದ ತೆರಳುತ್ತಿದ್ದ ಟಿಟಿ ವಾಹನ ಕೊಲ್ಲೂರಿನಿಂದ ಕೊಡಚಾದ್ರಿಗೆ ತೆರಳುತ್ತಿದ್ದ ಜೀಪ್‌ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಎರಡು ವಾಹನಗಳ ಮುಂಭಾಗ ಸಂಪೂರ್ಣ ಜಖಂಗೊAಡಿವೆ. ಪರಿಣಾಮ ಜೀಪ್‌ನಲ್ಲಿದ್ದ 8 ಜನಗಾಯಗೊಂಡಿದ್ದಾರೆ. ಇದರಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಡಿಯಲ್ಲಿದ್ದ ಕೆಲವರು ಕೇರಳದಿಂದ...
ಕಾಸರಗೋಡುಜಿಲ್ಲೆಸುದ್ದಿ

ಕಾಸರಗೋಡು:ಸೂಪರ್ ಮಾರ್ಕೆಟ್ ಒಳಗೆ ನುಗ್ಗಿದ ಕಾಡು ಹಂದಿ -ಕಹಳೆ ನ್ಯೂಸ್

ಕಾಸರಗೋಡು : ಕಾಸರಗೋಡಿನ ಕುಂಬಳೆಯಲ್ಲಿ ಡಿ.26 ರಂದು ಕಾಡು ಹಂದಿಯೊAದು ಸೂಪರ್ ಮಾರ್ಕೆಟ್ ಗೆ ನುಗ್ಗಿದ ಘಟನೆ ನಡೆದಿದೆ. ಕುಂಬಳೆ ಪೇಟೆಯಲ್ಲಿರುವ ಸೂಪರ್ ಪಾಯಿಂಟ್ ಹೈಪರ್ ಮಾರ್ಕೆಟ್ ನೊಳಗೆ ಕಾಡು ಹಂದಿ ನುಗ್ಗಿದೆ. ಈ ಸಂದರ್ಭದಲ್ಲಿ ಮಾರ್ಕೆಟ್ ಒಳಗೆ ನೌಕರರು, ಗ್ರಾಹಕರ ಸಹಿತ ಹತ್ತು ಮಂದಿ ಇದ್ದರು. ಅನಿರೀಕ್ಷಿತವಾಗಿ ಒಳಗೆ ಬಂದು ಗ್ರಾಹಕನನ್ನು ಕಂಡು ಗಲಿಬಿಲಿಗೊಂಡ ಸೂಪರ್ ಮಾರ್ಕೆಟ್ ಸಿಬ್ಬಂದಿ ಹಾಗೂ ಇತರರು ಬೊಬ್ಬೆ ಹಾಕುವಷ್ಟರಲ್ಲಿ ಹಂದಿ ಹೊರಕ್ಕೆ ಓಡಿ...
ರಾಜ್ಯಸುದ್ದಿ

ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ-ಕಹಳೆ ನ್ಯೂಸ್

ನವದೆಹಲಿ: ಭಾರತೀಯ ರೈಲ್ವೆಯ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಪ್ಲಾಟ್ ಫಾರಂ, ಐಆರ್ ಸಿಟಿಸಿ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡ ಪರಿಣಾಮ ಗುರುವಾರ (ಡಿ.26) ಪ್ರಯಾಣಿಕರು ವೆಬ್ ಸೈಟ್ ಹಾಗೂ ಮೊಬೈಲ್ ಅಪ್ಲಿಕೇಶನ್ ನಲ್ಲಿ ಟಿಕೆಟ್ ಬುಕ್ ಮಾಡಲು ಸಾಧ್ಯವಾಗದೇ ಪರದಾಡುವಂತಾಗಿದೆ. 'ನಿರ್ವಹಣಾ ಚಟುವಟಿಕೆಯ ಹಿನ್ನೆಲೆಯಲ್ಲಿ ಈ ತಾಂತ್ರಿಕ ಸಮಸ್ಯೆ ಎದುರಾಗಿರುವುದಾಗಿ ಐಆರ್ ಸಿಟಿಸಿ" ಪ್ರಕಟನೆ ತಿಳಿಸಿದೆ. ನಿರ್ವಹಣಾ ಚಟುವಟಿಕೆ ನಿಟ್ಟಿನಲ್ಲಿ ಇ-ಟಿಕೆಟಿಂಗ್ ಸೇವೆ ಬಳಕೆದಾರರಿಗೆ ಲಭ್ಯವಿರುವುದಿಲ್ಲ ಎಂಬ ಸಂದೇಶ ಐಆರ್...
ಕಾಸರಗೋಡುಜಿಲ್ಲೆಶುಭಾಶಯಸುದ್ದಿ

ಜ.01 ರಂದು ಕಾಸರಗೋಡಿನ ಅಡ್ಕತ್ಬೈಲ್ ನಲ್ಲಿರುವ ಉಡುಪಿ ಗಾರ್ಡನ್ ರೆಸ್ಟೋರೆಂಟ್ ನಲ್ಲಿ ಕುಲ್ಫಿ ಆಂಡ್ ಮೋರ್ ಶುಭಾರಂಭ-ಕಹಳೆ ನ್ಯೂಸ್

ಕಾಸರಗೋಡು :ಕಾಸರಗೋಡಿನ ಅಡ್ಕತ್ಬೈಲ್ ನಲ್ಲಿರುವ ಉಡುಪಿ ಗಾರ್ಡನ್ ರೆಸ್ಟೋರೆಂಟ್ ನಲ್ಲಿ ಜ.01 ರಂದು ರಿಯಲ್ ಬಾಂಬೆ ಚೌಪಾಟಿ ಕುಲ್ಫಿಯಾದ ಕುಲ್ಫಿ ಆಂಡ್ ಮೋರ್ ಅದ್ಧೂರಿಯಾಗಿ ಶುಭಾರಂಭಗೊಳ್ಳಲಿದೆ. ಇನ್ನು ಉಡುಪಿ ಗಾರ್ಡನ್ ರೆಸ್ಟೋರೆಂಟ್ ನ ಹೊಸ ಉದ್ಯಮವಾಗಿರುವ ರಿಯಲ್ ಬಾಂಬೆ ಚೌಪಾಟಿ ಕುಲ್ಫಿ ಇದರ ಗ್ರ್ಯಾಂಡ್ ಓಪನಿಂಗ್ ಅನ್ನು ಕಾಸರಗೋಡು ಪುರಸಭೆಯ ಅಧ್ಯಕ್ಷರಾಗಿರುವ ಅಬ್ಬಾಸ್ ಬೇಗಂ ಅವರು ಉದ್ಘಾಟಿಸಲಿದ್ದು, ಇದು ಮುಂಬೈನಲ್ಲಿ ತಯಾರಿಸಲಾಗುವ ಹೊಸ ಮಾದರಿಯ ಕುಲ್ಫಿ ಆಂಡ್ ಮೋರ್ ರಿಯಲ್...
ದಕ್ಷಿಣ ಕನ್ನಡಶಿಕ್ಷಣಸುದ್ದಿಸುಳ್ಯ

ಕೆವಿಜಿ ಮಾತೃಸಂಸ್ಥೆ ಎನ್ನೆಂಸಿಯಲ್ಲಿ ಡಾ. ಕೆವಿಜಿ ಸಂಸ್ಮರಣೆ ಮತ್ತು ಪುಷ್ಪ ನಮನ-ಕಹಳೆ ನ್ಯೂಸ್

ಸುಳ್ಯ: ಆಧುನಿಕ ಸುಳ್ಯದ ನಿರ್ಮಾತೃ ಶಿಕ್ಷಣ ಬ್ರಹ್ಮ ಕೆವಿಜಿ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾದ ದಿ. ಕುರುಂಜಿ ವೆಂಕಟರಮಣ ಗೌಡರ 96 ನೇ ವರ್ಷದ ಜನ್ಮ ದಿನಾಚರಣೆ ಮತ್ತು ಪುಷ್ಪ ನಮನ ಕಾರ್ಯಕ್ರಮ ಡಿಸೆಂಬರ್ 26 ರಂದು ಕೆವಿಜಿ ಮಾತೃಸಂಸ್ಥೆ ಎನ್ನೆಂಸಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ ಎಂ ದೀಪ ಬೆಳಗಿ ಡಾ. ಕೆವಿಜಿ ಸಾಧನೆ ಹಾಗೂ ಅವರ ತತ್ವ ಆದರ್ಶಗಳ ಬಗ್ಗೆ ವಿವರಿಸಿದರು....
ದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ ಮತ್ತು ಸಮಾರೋಪ ಸಮಾರಂಭ-ಕಹಳೆ ನ್ಯೂಸ್

ಪುತ್ತೂರು: ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆಗಳು ಅತ್ಯಗತ್ಯ. ವಿವಿಧ ಕ್ರೀಡೆಗಳನ್ನು ಆಡುವುದರಿಂದ ಅವರು ತಂಡದ ಕೆಲಸ, ನಾಯಕತ್ವ, ಹೊಣೆಗಾರಿಕೆ, ತಾಳ್ಮೆ ಮತ್ತು ಆತ್ಮ ವಿಶ್ವಾಸದಂತಹ ಜೀವನ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಲು ಸಹಾಯವಾಗುತ್ತದೆ. ಮತ್ತು ಜೀವನದ ಸವಾಲುಗಳನ್ನು ಎದುರಿಸಲು ಅವರನ್ನು ಸಿದ್ಧಪಡಿಸುತ್ತದೆ. ಕ್ರೀಡೆಗಳು ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ಬಲವಾದ ಮಾನಸಿಕ ಮತ್ತು ದೈಹಿಕ ಅಡಿಪಾಯವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.ಇಂತಹ ಕ್ರೀಡಾಕೂಟಗಳು ವ್ಯಕ್ತಿಯ ವ್ಯಕ್ತಿತ್ವದ ರಚನೆಗೆ ಕಾರಣವಾಗುತ್ತದೆ ಮತ್ತು ಅವರ ಸಮಗ್ರ ಬೆಳವಣಿಗೆಗೆ ಕೊಡುಗೆ ನೀಡುತ್ತದೆ....
ಉತ್ತರ ಪ್ರದೇಶಶುಭಾಶಯಸುದ್ದಿ

ತೃತೀಯ ವಿಶ್ವ ಹವ್ಯಕ ಸಮ್ಮೇಳನ – ೨೩೦೦ ಕಿ.ಮೀ ದೂರದ ಅಹಿಚ್ಛತ್ರದಿಂದ ಜ್ಯೋತಿಗೆ ಚಾಲನೆ -ಕಹಳೆ ನ್ಯೂಸ್

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಅಹಿಚ್ಛತ್ರದಿಂದ ವಿಶ್ವ ಹವ್ಯಕ ಸಮ್ಮೇಳನಕ್ಕೆ ಜ್ಯೋತಿಯನ್ನು ತರಲಾಗುತ್ತಿದ್ದು, ೨೩೦೦ ಕಿ.ಮೀ ದೂರದಿಂದ ತಂದಿರುವ ಜ್ಯೋತಿಯಿಂದ ದೀಪಬೆಳಗುವ ಮೂಲಕ ಡಿ.೨೭ ರಂದು ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಉದ್ಘಾಟನೆ ವಿಧ್ಯುಕ್ತವಾಗಿ ನಡೆಯಲಿದೆ. ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಪ್ರಾಚೀನ ಅಹಿಚ್ಛತ್ರದ ಗ್ರಾಮದಲ್ಲಿರುವ ರಾಮದೇವಾಲಯದಿಂದ 'ಅಹಿಚ್ಛತ್ರ ಜ್ಯೋತಿ'ಗೆ ಚಾಲನೆ ನೀಡಲಾಗಿದ್ದು, ಈ ದೇವಾಲಯದಲ್ಲಿ ಕಳೆದ ೫೦ ವರ್ಷದಿಂದ ಅಖಂಡ ಜ್ಯೋತಿಯು ಬೆಳಗುತ್ತಿದ್ದು, ಅಖಂಡ ಜ್ಯೋತಿಯಿಂದ ಶ್ರೀರಾಮದೇವರ ಸನ್ನಿಧಿಯಲ್ಲಿ...
ಜಿಲ್ಲೆಸಂತಾಪಸುದ್ದಿ

ಕಾರುಗಳ ನಡುವೆ ಭೀಕರ ಅಪಘಾತ ; ಒಂದೇ ಕುಟುಂಬದ ನಾಲ್ವರ ಧಾರುಣ ಸಾವು-ಕಹಳೆ ನ್ಯೂಸ್

ಹಾವೇರಿ: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬುಧವಾರ ಮಧ್ಯಾಹ್ನ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಬಾಲಕ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿರುವ ಧಾರುಣ ಘಟನೆ ಶಿಗ್ಗಾಂವಿ ಬಳಿಯ ತಡಸ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಎಸ್‌ಯುವಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕವನ್ನು ಹಾರಿ ಹುಬ್ಬಳ್ಳಿಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ತಿಮ್ಮಾಪುರ ಬಳಿಯಲ್ಲಿ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಒಂದು...
1 32 33 34 35 36 2,747
Page 34 of 2747