ಕುವೈತ್‌ನಲ್ಲಿರುವ ಭಾರತೀಯ ಕಾರ್ಮಿಕರನ್ನು ಭೇಟಿಯಾಗಿ ಕಷ್ಟಸುಖ ವಿಚಾರಿಸಿದ ಪ್ರಧಾನಿ ಮೋದಿ- ಕಹಳೆ ನ್ಯೂಸ್
ಪ್ರಧಾನಿ ಮೋದಿ ಕುವೈತ್‌ನ ಗಲ್ಫ್ ಲೇಬರ್ ಕ್ಯಾಂಪ್‌ನಲ್ಲಿ ಭಾರತೀಯ ವಲಸೆ ಕಾರ್ಮಿಕರನ್ನು ಭೇಟಿಯಾಗಿ ಅವರ ಕಷ್ಟಸುಖ ವಿಚಾರಿಸಿದರು. ಕಾರ್ಮಿಕರ ಕೆಲಸ ಮತ್ತು ಸಮಸ್ಯೆಗಳ ಬಗ್ಗೆಯೂ ಮಾತನಾಡಿದರು, ಇದರಿಂದ ಅಲ್ಲಿನ ಭಾರತೀಯರು ಭಾವುಕರಾದರು. ಪಿಎಂ ಮೋದಿ ತಮ್ಮ ಎರಡು ದಿನಗಳ ಕುವೈತ್ ಪ್ರವಾಸದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ಮೊದಲ ದಿನ ಗಲ್ಫ್ ಸ್ಪಿಕ್ ಲೇಬರ್ ಕ್ಯಾಂಪ್‌ಗೆ ಭೇಟಿ ನೀಡಿದರು. ಈ ಕ್ಯಾಂಪ್‌ನಲ್ಲಿರುವ ಶೇ.90ರಷ್ಟು ಜನ ಭಾರತೀಯರಾಗಿದ್ದಾರೆ. ಕುವೈತ್‌ನಂತಹ ಗಲ್ಫ್...