Tuesday, January 21, 2025

ಸುದ್ದಿ

ದಕ್ಷಿಣ ಕನ್ನಡಸುದ್ದಿ

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ 6ನೇ ಆರೋಪಿ ಮುಂಬೈ ವಿಮಾನ ನಿಲ್ದಾಣದಲ್ಲಿ ವಶಕ್ಕೆ, ವಿದೇಶದಿಂದ ಬರುತ್ತಿದ್ದಾಗ ಸೆರೆಹಿಡಿದ ಎನ್ ಐಎ ಅಧಿಕಾರಿಗಳು-ಕಹಳೆ ನ್ಯೂಸ್

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿಯನ್ನು ಎನ್ ಐಎ ಅಧಿಕಾರಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬಂಧಿಸಿದ್ದಾರೆ. ಬಂಧಿತನನ್ನು  ಬಂಟ್ವಾಳದ ಕೊಡಾಜೆಯ ನಿವಾಸಿ ಮಹಮ್ಮದ್ ಶರೀಫ್ ಎಂದು ಗುರುತಿಸಲಾಗಿದೆ. ಈತ ಪ್ರಕರಣದ 6ನೇ ಆರೋಪಿಯಾಗಿದ್ದಾನೆ. ಈತ ವಿದೇಶದಿಂದ ಭಾರತಕ್ಕೆ ಆಗಮಿಸಿದ್ದಾಗ ಎನ್ ಐಎ ಬಲೆಗೆ ಬಿದ್ದಿದ್ದಾನೆಂದು ಪೊಲೀಸ್ ಮೂಲಗಳು ನ್ಯೂಸ್ ನಾಟೌಟ್ ಗೆ ತಿಳಿಸಿವೆ....
ದಕ್ಷಿಣ ಕನ್ನಡಮಂಗಳೂರುಸುದ್ದಿ

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಪಾದಾಚಾರಿ ಸಾವು-ಕಹಳೆ ನ್ಯೂಸ್

ಉಚ್ಚಿಲ: ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ಉಚ್ಚಿಲ ಪೇಟೆಯಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ಉಚ್ಚಿಲ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ಶಿವಪ್ಪ ಪೂಜಾರಿ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಉಡುಪಿ ಕಡೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಉಚ್ಚಿಲದ ಪೇಟೆಯಲ್ಲಿ ರಸ್ತೆ ದಾಟುತ್ತಿದ್ದ ಶಿವಪ್ಪ ಪೂಜಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, SDPI ಅಂಬ್ಯುಲೆನ್ಸ್’ನಲ್ಲಿ ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ಸಾಗಿಸಲಾಯಿತು.ಈ ವೇಳೆ ಗಾಯಗೊಂಡು...
ಉಡುಪಿಶಿಕ್ಷಣಸುದ್ದಿ

ಉಡುಪಿ: ಶ್ರೀಮತಿ ಗಿರಿಜಾ ಹೆಗ್ಡೆ ಅವರಿಗೆ ಶಿಕ್ಷಕ ರತ್ನಅವಾರ್ಡ್-ಕಹಳೆ ನ್ಯೂಸ್

ಉಡುಪಿ :ಶ್ರೀಮತಿ ಗಿರಿಜಾ ಹೆಗಡೆ.ಅರ್ಥಶಾಸ್ತ್ರ ಉಪನ್ಯಾಸಕರಾಗಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜ್ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ವೃತ್ತಿಯಲ್ಲಿ 25 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ. ವಿದ್ಯಾರ್ಹತೆ: ಎಂ.ಎ.(ಅರ್ಥಶಾಸ್ತ್ರ),ಎA.ಫಿಲ್(ಉತ್ತರಕನ್ನಡ ಕೈಗಾರಿಕೆಗಳ ಪ್ರಗತಿ),ಎಂ.ಬಿ.ಎ.(ಹೆಚ್ ಆರ್),ಬಿ.ಎಡ್.ಸ್ಲೆಟ್ ಪರೀಕ್ಷೆ ಪಾಸಾಗಿರುತ್ತಾರೆ.ನಿಮ್ಹಾನ್ಸ್ ಕೊಡಮಾಡುವ ಒಂದುವಾರದ ಜೀವನಕೌಶಲ್ಯ ತರಬೇತಿ ಪಡೆದಿದ್ದಾರೆ. ಹವ್ಯಾಸ-ಕಥೆ ಕವನ ರಚನೆ. ಇವರು ಪ್ರಕಟಿಸಿದ ಕೃತಿಗಳು 1. ಅನಾವರಣ ಕವನ ಸಂಕಲನ .ಕಾರ್ನಾಡ್ ಸದಾಶಿವರಾವ್ ಸ್ಮಾರಕ ಪ್ರಶಸ್ತಿ ಪಡೆದಿದೆ. 2.ಅಗಸೆಬಾಗಿಲು- ಕವನ ಸಂಕಲನ 3.ನತ್ತು- ಕಥಾ...
ಉಡುಪಿಸುದ್ದಿ

ಉಡುಪಿ: ಕಥೊಲಿಕ್ ಧರ್ಮಪ್ರಾಂತ್ಯ: ಸೌಹಾರ್ದ ಕ್ರಿಸ್ಮಸ್ ಆಚರಣೆ-ಕಹಳೆ ನ್ಯೂಸ್

ಉಡುಪಿ: ಮಾನವ ಹಾಗೂ ದೇವರೊಂದಿಗೆ ಹೇಗೆ ಬದುಕಬೇಕು ಎನ್ನುವುದನ್ನು ತೋರಿಸಿಕೊಡುವುದೇ ನಿಜವಾದ ಕ್ರಿಸ್ಮಸ್ ಆಗಿದೆ ಎಂದು ಸಿಎಸ್ ಐ ಕರ್ನಾಟಕ ದಕ್ಷಿಣ ಪ್ರಾಂತ ಧರ್ಮಾಧ್ಯಕ್ಷರಾದ ಅತಿ ವಂ|ಹೇಮಚಂದ್ರ ಕುಮಾರ್ ಹೇಳಿದರು. ಅವರು ಇಂದು ಶೋಕಮಾತಾ ಚರ್ಚ್ ಸಭಾಂಗಣ ದಲ್ಲಿ ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ವತಿಯಿಂದ ಮಾಧ್ಯಮ ಮಿತ್ರರಿಗೆ ಆಯೋಜಸಿದ್ದ ಸೌಹಾರ್ದ ಕ್ರಿಸ್ಮಸ್ ಆಚರಣೆಯ ಅಧ್ಯಕ್ಷತೆ ವಹಿಸಿದ ಮಾತನಾಡಿದರು. ಯೇಸು ಸಮುದಾಯದ ಮಧ್ಯೆ ಮನುಷ್ಯತ್ವದ ಕಾರ್ಯವುಳ್ಳ ವ್ಯಕ್ತಿಯಾಗಿ ಬದುಕುವುದರ ಮೂಲಕ ಮಾದರಿಯಾದರು....
ಉಡುಪಿಸುದ್ದಿ

ಜಿಲ್ಲೆಯಲ್ಲಿ ಪ್ರತೀ ವರ್ಷ 250 ಮಂದಿ ಅಪಘಾತದಲ್ಲಿ ಸಾವು ; ಅಪರಾಧ ತಡೆ ಮಾಸಾಚರಣೆ ಉದ್ಘಾಟಿಸಿ ಎಸ್ಪಿ ಅರುಣ್ ಕುಮಾರ್ ಹೇಳಿಕೆ-ಕಹಳೆ ನ್ಯೂಸ್

ಉಡುಪಿ ಪ್ರತಿ ವರ್ಷ ಉಡುಪಿ ಜಿಲ್ಲೆಯಲ್ಲಿ 250 ಮಂದಿ ಅಪಘಾತದಲ್ಲಿ ಮರಣ ಹೊಂದುತ್ತಿದ್ದಾರೆ ಎಂದು ಜಿಲ್ಲಾ ಎಸ್ ಪಿ ಅರುಣ್ ಕುಮಾರ್ ಹೇಳಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ಇದರ ವತಿಯಿಂದ ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ಹಮ್ಮಿಕೊಂಡ ಅಪರಾಧ ತಡೆ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದರು. ಕಳ್ಳತನ ಹಾಗೂ ಆನ್ಲೈನ್ ಮೂಲಕ ನಡೆಯುತ್ತಿರುವ ವಂಚನೆ ಕುರಿತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅವರು ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ತುಳು ಚಿತ್ರನಟ, ಹಾಸ್ಯ...
ಉಡುಪಿಸುದ್ದಿ

ಮಾನಸಿಕ ಅಸ್ವಸ್ಥರಿಗೆ ಮನೆಗೆ ತೆರಳಿ ಆಧಾರ್ ಕಾರ್ಡ್ ಮಾಡಿಸಿದ ತಹಶಿಲ್ದಾರ್; ಜನರಿಂದ ವ್ಯಾಪಕ ಮೆಚ್ಚುಗೆ-ಕಹಳೆ ನ್ಯೂಸ್

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಎರ್ಮಾಳ್ ಬಡಾ ಗ್ರಾಮದ ಕಿರಣ ಕುಮಾರಿ (52 ವರ್ಷ) ಪ್ರಮೋದ (69ವರ್ಷ) ಈ ಇಬ್ಬರು ಮಹಿಳೆಯರಿಗೆ ತಹಶಿಲ್ದಾರ್ ಡಾ.ಪ್ರತಿಭಾ ಆರ್ ಮನೆಗೆ ತೆರಳಿ ಆಧಾರ್ ಕಾರ್ಡ್ ಮಾಡಿಸಿದ್ದಾರೆ. ಇದುವರೆಗೂ ಇವರಿಬ್ಬರಿಗೂ ಆಧಾರ್ ಕಾರ್ಡ್ ಇರಲಿಲ್ಲ. ಅವರು ಮಾನಸಿಕ ಅಸ್ವಸ್ಥರಾಗಿರುವ ಕಾರಣ ಅವರ ಪೋಷಕರಿಗೆ ಆಧಾರ್ ಕೇಂದ್ರಕ್ಕೆ ಕರೆತರಲು ಸಾಧ್ಯವಾಗಿರಲಿಲ್ಲ. ಆಧಾರ್ ಕಾರ್ಡ್ ಇಲ್ಲದ ಕಾರಣ ಸರಕಾರದ ಯಾವುದೇ ಯೋಜನೆಗಳು, ಪಿಂಚಣಿ ಯಾವುದೇ ಸೌಲಭ್ಯಗಳನ್ನು ಪಡೆಯಲು...
ದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಬಹುಮಾನ ವಿಜೇತ ವಿದ್ಯಾರ್ಥಿನಿಯರಿಗೆ ಹಾಗೂ ತರಬೇತುದಾರರಿಗೆ ಸನ್ಮಾನ-ಕಹಳೆ ನ್ಯೂಸ್

ಪುತ್ತೂರು: 2024-25ನೇ ಸಾಲಿನ ಪದವಿ ಪೂರ್ವ ವಿದ್ಯಾಲಯಗಳ ರಾಜ್ಯ ಮಟ್ಟದ ಬಾಲಕಿಯರ ತ್ರೊಬಾಲ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿದ ದಕ್ಷಿಣ ಕನ್ನಡದ ಬಾಲಕಿಯರ ತಂಡದ ಸದಸ್ಯರಾಗಿದ್ದ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿನಿಯರನ್ನು ಸಂಸ್ಥೆಯಲ್ಲಿ ಗುರುವಾರ ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಅವನಿ ರೈ, ವೈಶಾಲಿ ಕೆ. ಹಾಗೂ ಪ್ರಥಮ ಪಿ.ಯು.ಸಿ.ಯ ಮತ್ತು ರಿಯ ಜೆ. ರೈ ದಕ್ಷಿಣ ಕನ್ನಡವನ್ನು ಪ್ರತಿನಿಧಿಸಿದ ತ್ರೋಬಾಲ್ ತಂಡದ ಸದಸ್ಯರಾಗಿದ್ದರು. ದಕ್ಷಿಣ ಕನ್ನಡದ ತಂಡದಲ್ಲಿ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀಮತಿ ಡಾ. ಹೇಮಾವತಿ ಹೆಗಡೆ ಧರ್ಮಸ್ಥಳ ರವರಿಗೆ ರಾಜ್ಯ ಮಟ್ಟದ, “ಗಿರಿಜಾ ರತ್ನ ಪ್ರಶಸ್ತಿ”ಪ್ರದಾನ -ಕಹಳೆ ನ್ಯೂಸ್

ಬಂಟ್ವಾಳ ತಾಲೂಕಿನ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಬಾಳ್ತಿಲ ವತಿಯಿಂದ ನೀಡುವ ರಾಜ್ಯ ಮಟ್ಟದ, "ಗಿರಿಜಾ ರತ್ನ ಪ್ರಶಸ್ತಿ" ಗೆ ಶ್ರೀಮತಿ ಡಾ. ಹೇಮಾವತಿ ಹೆಗಡೆ ಧರ್ಮಸ್ಥಳ ಯವರನ್ನು ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ ಯನ್ನು ಸಮಿತಿಯ ಸದಸ್ಯರು ಶ್ರೀಮತಿ ಡಾ. ಹೇಮಾವತಿ ಹೆಗಡೆ ಯವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಗುರುವಾರ ಭೇಟಿಮಾಡಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು...
1 40 41 42 43 44 2,749
Page 42 of 2749