ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಶ್ರಮದಾನ ಹಾಗೂ ಮಾಸಿಕ ಸಭೆ -ಕಹಳೆ ನ್ಯೂಸ್
ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗದ ಸದಸ್ಯರು ಬಂಟ್ವಾಳ ತಾಲೂಕಿನ ವಗ್ಗದ ದೊಂಪದ ಪಲಿಕೆಯಿಂದ ಕಾಡಬೆಟ್ಟು ಅಂತರಂಗಡಿ ತನಕ ಸುಮಾರು ಒಂದುವರೆ ಕಿಲೋಮೀಟರ್ ರಸ್ತೆ ಬದಿ ಬೆಲೆದ ಬಲ್ಲೆ, ಹುಲ್ಲು, ಗಿಡ ಗಂಟೆಗಳನ್ನು ಕಡಿದು ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಮಾಡಿದರು. ಈ ಶ್ರಮದಾನ ಕಾರ್ಯಕ್ರಮಕ್ಕೆಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ, ಪಂಚಾಯತ್ ಮಾಜಿ ಅಧ್ಯಕ್ಷರಾದ ಹಾಗೂ...