“ಶ್ರೀ ಮಂಗಳಾದೇವಿ ದೇವಸ್ಥಾನ ರಸ್ತೆ” ನಾಮಫಲಕ ಅನಾವರಣ-ಕಹಳೆ ನ್ಯೂಸ್
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆರ್.ಟಿ.ಓ ಕಚೇರಿ ಬಳಿ "ಶ್ರೀ ಮಂಗಳಾದೇವಿ ದೇವಸ್ಥಾನ ರಸ್ತೆ" ಎಂಬ ನಾಮಫಲಕವನ್ನು ಹಲವು ಗಣ್ಯರ ಉಪಸ್ಥಿತಿಯಲ್ಲಿ ಶಾಸಕ ವೇದವ್ಯಾಸ ಕಾಮತ್ ರವರು ಅನಾವರಣಗೊಳಿಸಿದರು. ನಂತರ ಮಾತನಾಡಿದ ಶಾಸಕರು ಮಂಗಳಾದೇವಿ ದೇವಸ್ಥಾನ ಎಂಬುದು ಈ ಊರಿಗೆ ಮಾತ್ರವಲ್ಲ, ಪರವೂರು ಸೇರಿದಂತೆ ನಾಡಿನ ಪ್ರಸಿದ್ಧ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲೊಂದಾಗಿದೆ. ಇಂತಹ ಪುಣ್ಯಕ್ಷೇತ್ರದ ಹೆಸರಿನಲ್ಲಿ ಇನ್ನು ಮುಂದೆ ಈ ರಸ್ತೆ ಕರೆಯಲ್ಪಡುವುದು ಹರ್ಷ ತಂದಿದೆ ಎಂದರು. ಶ್ರೀ ಮಂಗಳಾದೇವಿ...