Saturday, January 25, 2025

ಸುದ್ದಿ

ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಎರಡನೇ ದಿನ ಪರಂಪರಾ ದರ್ಶನ-ಕಹಳೆ ನ್ಯೂಸ್

ಪುತ್ತೂರು, : ವಿದ್ಯಾರ್ಥಿಗಳು, ಯುವಕ-ಯುವತಿಯರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಡಲು ಸಿದ್ಧರಾಗಿರಬೇಕು. ದೇಶವನ್ನು ಆಕ್ರಮಿಸುವವರ ವಿರುದ್ಧ ಧ್ವನಿಯೆತ್ತಬೇಕು. ಮಾತ್ರವಲ್ಲದೆ, ದೇಶಕ್ಕೆ ವಂಚನೆಗೆಯ್ಯುವವರನ್ನು ವಿರೋಧಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಮಾಧ್ಯಮಗಳ ಮುಖಾಂತರ ಪ್ರಚಲಿತ ಘಟನೆಗಳನ್ನು ವಿದ್ಯಾರ್ಥಿಗಳು ಅರಿತುಕೊಂಡು ಮುಂದಿನ ನಡೆಗಳಿಗೆ ಸನ್ನದ್ಧರಾಗಬೇಕು ಎಂದು ರಾಷ್ಟ್ರಸೇವಿಕಾ ಸಮಿತಿಯ ಕರ್ನಾಟಕ ದಕ್ಷಿಣ, ಹೊಯ್ಸಳ ಪ್ರಾಂತ ಕಾರ್ಯಕಾರಿಣಿ ಸದಸ್ಯೆ ಡಾ| ಕಮಲಾ ಪ್ರಭಾಕರ್ ಭಟ್ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನ. 14ರಂದು ನಡೆದ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ-ಕಹಳೆ ನ್ಯೂಸ್

ಬಂಟ್ವಾಳ: ಸಜೀಪ ಮುನ್ನೂರು ಗ್ರಾಮದ ನಾಗವಳಚ್ಚಿಲ್‌ನ ವೃದ್ಧ ರೊಬ್ಬರು ನ. 5ರಂದು ಮನೆಯಿಂದ ಹೊರ ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದು, ಅದೇ ದಿನ ಉಳ್ಳಾಲದ ರೈಲು ಹಳಿಯಲ್ಲಿ ಮೃತದೇಹ ವೊಂದು ಪತ್ತೆಯಾಗಿದೆ. ನಾಗವಳಚ್ಚಿಲ್ ನಿವಾಸಿ ಉಗ್ಗಪ್ಪ ಪೂಜಾರಿ (70) ಮೃತಪಟ್ಟವರು ಎಂದು ತಿಳಿದು ಬಂದಿದೆ. ನ. 5ರಂದು ಪಾಣೆಮಂಗಳೂರಿನ ಬ್ಯಾಂಕ್ ಶಾಖೆಯೊಂದಕ್ಕೆ ಹೋಗಿ ತನ್ನ ವೃದ್ಧಾಪ್ಯ ವೇತನದ ಹಣವನ್ನು ಡ್ರಾ ಮಾಡಿಕೊಂಡು ಮನೆಗೆ ಬಂದಿದ್ದರು. ಬಳಿಕ ಸೊಸೆಗೆ ಕರೆ ಮಾಡಿ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ದಾಸಕೋಡಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ- ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ದಾಸಕೋಡಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪುಟಾಣಿ ದಿಶ್ಯಾಂತ್ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದು, ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಮಾಡಿ ಬಹುಮಾನ ವಿತರಿಸಲಾಯಿತು ಹಾಗೂ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಶ್ರೀ ರುಕ್ಮಯ ಪೂಜಾರಿ, ಪಂಚಾಯತ್ ಉಪಾಧ್ಯಕ್ಷೆ ರಂಜಿನಿ,ಸದಸ್ಯ ವಿಠಲ ನಾಯ್ಕ, ಬಂಟ್ವಾಳ ರಬ್ಬರ್ ಮತ್ತು ಜೇನು ವ್ಯವಸಾಯ ಸಂಘದ ಉಪಾಧ್ಯಕ್ಷ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ; ಭಾಷಾ ಬಾಂಧವ್ಯ ಬೆಳೆಯಲಿ: ಡಾ. ಜಿ ಎನ್ ಭಟ್-ಕಹಳೆ ನ್ಯೂಸ್

ಪುತ್ತೂರು. ನ,14;. ನಮ್ಮ ಭಾಷೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ತಾಂತ್ರಿಕ ಯುಗದಲ್ಲಿ ಭಾಷೆಯ ಕುರಿತಾಗಿ ಅಸ್ಥಿರತೆ ಬಂದು ಮಕ್ಕಳ ಮನಸ್ಥಿತಿ ಹದಗೆಟ್ಟಿದೆ. ಇದರಿಂದ ಭಾಷೆ ಮೂಲೆ ಗುಂಪಾಗುವ ಸಾಧ್ಯತೆ ಇದೆ. ನಮ್ಮ ಭಾಷೆಯ ಮೇಲೆ ಅಭಿಮಾನದ ಜೊತೆಗೆ ಭಾಷಾ ಬಾಂಧವ್ಯವೂ ಕೂಡಾ ಬೆಳೆಯಲಿ ಎಂದು ಮಂಗಳೂರಿನ ಕೆನರಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಶಿರಸಿಯ ಸಂಶೋಧನಾ ಇದರ ನಿರ್ದೇಶಕ ಡಾ. ಜಿ. ಎನ್‌ಭಟ್ ಹೇಳಿದರು. ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು...
ದಕ್ಷಿಣ ಕನ್ನಡಮಂಗಳೂರುಸುದ್ದಿ

ಶ್ರೀ ಶ್ರೀನಿವಾಸ ದೇವಸ್ಥಾನ, ವೈಕುಂಠ, ವಳಚಿಲ್, ಮಂಗಳೂರು – ಶ್ರೀನಿವಾಸ ಲಕ್ಷತುಳಸಿ ಅರ್ಚನೆ-ಕಹಳೆ ನ್ಯೂಸ್

ಮಂಗಳೂರು: ಶ್ರೀ ಶ್ರೀನಿವಾಸ ದೇವಸ್ಥಾನ, ವೈಕುಂಠ, ವಳಚಿಲ್ ಮಂಗಳೂರಿನಲ್ಲಿ 13 ನವೆಂಬರ್ 2024 ರಂದು ನಡೆದ ಶ್ರೀನಿವಾಸ ಲಕ್ಷತುಳಸಿ ಅರ್ಚನೆ ಕಾರ್ಯಕ್ರಮವು ಭಕ್ತಿಪೂರ್ವಕವಾಗಿ ಸಂಪನ್ನಗೊಂಡಿದೆ. ಬೆಳಗ್ಗೆ ತುಳಸಿ ಪೂಜೆ, ಗೋ ಪೂಜೆ, ಲಕ್ಷತುಳಸಿ ಅರ್ಚನೆಗಳನ್ನು ವೈದಿಕ ಆಚರಣೆಗಳೊಂದಿಗೆ ನಡೆಸಲಾಯಿತು. ಮಧ್ಯಾಹ್ನ ಮಹಾಪೂಜೆಯನ್ನು ಅರ್ಚಕರು ವೈಭವವಾಗಿ ನಡೆಸಿದರು. ನಂತರ ಭಕ್ತರಿಗೆ ಪ್ರಸಾದವನ್ನು ವಿತರಿಸಲಾಯಿತು. ಸಂಜೆ ಮೈಸೂರು ನಗಾರಿ, ಹುಲಿ ಕುಣಿತ, ಭಜನೆ ಮತ್ತು ಕುಣಿತ ಭಜನೆಯು ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿತು. ತದನಂತರ ದೀಪೋತ್ಸವ...
ಉಡುಪಿಕುಂದಾಪುರಸುದ್ದಿ

ಅಬಕಾರಿ ಹಗರಣದ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿನ ಗ್ಯಾರಂಟಿ ಮನೆ ಮನೆಗೆ ಬಾರ್ ಭಾಗ್ಯವೇ? : ಕಿಶೋರ್ ಕುಮಾರ್ ಕುಂದಾಪುರ -ಕಹಳೆ ನ್ಯೂಸ್

ಕುಂದಾಪು: ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಜನಪರ ಆಡಳಿತದ ಮೂಲಕ ದೇಶವನ್ನು ವಿಶ್ವದ ಮುಂಚೂಣಿ ಸ್ಥಾನಕ್ಕೇರಿಸಲು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರೆತ್ತಲೂ ನೈತಿಕತೆ ಇಲ್ಲದ ಕಳಂಕಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿನ ಗ್ಯಾರಂಟಿ 'ಮನೆ ಮನೆಗೆ ಬಾರ್ ಭಾಗ್ಯವೇ' ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪ್ರಶ್ನಿಸಿದ್ದಾರೆ. ಹಗರಣಗಳ ಸರಮಾಲೆಯನ್ನೇ ಧರಿಸಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ 700 ಕೋಟಿ ರೂಪಾಯಿ ಮೌಲ್ಯದ ಅಬಕಾರಿ...
ಉಡುಪಿಶಿಕ್ಷಣಸುದ್ದಿ

ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಮೂಲಕ ನರೇಂದ್ರ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ : ಯಶ್ ಪಾಲ್ ಸುವರ್ಣ-ಕಹಳೆ ನ್ಯೂಸ್

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಕರಾವಳಿ ಜನತೆಗೆ ಹೆಮ್ಮೆಯ ಪಾಲಿಗೆ ಸದಾ ಹೆಮ್ಮೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ವಿಕಸಿತ ಭಾರತ ನಿರ್ಮಾಣಕ್ಕಾಗಿ ದೇಶದ ಭವಿಷ್ಯ ರೂಪಿಸುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಿಶೇಷ ಪ್ರೋತ್ಸಾಹ ನೀಡುವ ಮೂಲಕ ವಿಶ್ವಗುರು ಭಾರತದ ಕನಸು ನನಸಾಗಿಸುವ ಸಂಕಲ್ಪ ನಾವೆಲ್ಲರೂ ಮಾಡೋಣ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು. ಮಕ್ಕಳ ದಿನಾಚರಣೆ ಅಂಗವಾಗಿ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿಟಿಯು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ಪದಕದ ಸಾಧನೆ-ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿAಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯಮಟ್ಟದಅಂತರ್ಕಾಲೇಜು ಭಾರ ಎತ್ತುವ ಸ್ಪರ್ಧೆಯಲ್ಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳೀಯ ಪದಕವನ್ನು ಗಳಿಸಿಕೊಂಡಿದ್ದಾರೆ. ಮೂಡಬಿದ್ರೆಯ ಆಳ್ವಾಸ್ ಇಂಜಿನಿಯರಿAಗ್ ಕಾಲೇಜಿನ ಆಶ್ರಯದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಕಾಲೇಜಿನ ದ್ವಿತೀಯ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗದ ವಿದ್ಯಾರ್ಥಿ ಭುವನ್‌ರಾಮ್ ಜಗದೀಶ್ ಭಂಡಾರಿ 73 ಕೆಜಿ ವಿಭಾಗದಲ್ಲಿ ಒಟ್ಟು 190 ಕೆಜಿ ಭಾರ ಎತ್ತುವುದರ ಮೂಲಕ...
1 78 79 80 81 82 2,752
Page 80 of 2752