Tuesday, January 21, 2025

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ದೇಶಾದ್ಯಂತ ವಾಹನಗಳಿಗೆ ಏಕರೂಪದ `ಪಿಯುಸಿ’ ಸರ್ಟಿಫಿಕೇಟ್ : ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ – ಕಹಳೆ ನ್ಯೂಸ್

ಹೊಸದಿಲ್ಲಿ: ದೇಶದ ಎಲ್ಲ ವ್ಯವಸ್ಥೆಗಳನ್ನು ತಂತ್ರಜ್ಞಾನದ ವ್ಯಾಪ್ತಿಗೆ ತರುತ್ತಿರುವ ಕೇಂದ್ರ ಸರಕಾರವು ಇನ್ನೊಂದು ಪ್ರಮುಖ ಹೆಜ್ಜೆ ಇರಿಸಿದೆ. ವಾಹನಗಳ ಹೊಗೆಯುಗುಳುವಿಕೆ ಮಟ್ಟದ ಪರೀಕ್ಷಾ ಪ್ರಮಾಣಪತ್ರ (ಪೊಲ್ಯೂಷನ್‌ ಅಂಡರ್‌ ಕಂಟ್ರೋಲ್‌-ಪಿಯುಸಿ)ವನ್ನು ದೇಶಾದ್ಯಂತ ಏಕರೂಪಗೊಳಿಸಲು ಚಿಂತನೆ ನಡೆಸಿದೆ. ಹಾಗೆಯೇ ಅದರಲ್ಲಿ ಕ್ಯುಆರ್‌ ಕೋಡ್‌ ಅಳವಡಿಸಲಾಗುತ್ತದೆ. ಅದನ್ನು ಸ್ಕ್ಯಾನ್‌ ಮಾಡಿದರೆ ವಾಹನದ ಮಾಲಕನ ವಿವರ, ಹೊಗೆ ಯುಗುಳುವಿಕೆ ಸ್ಥಿತಿಗತಿ ಮತ್ತಿತರ ಮಾಹಿತಿಗಳು ಸಿಗುತ್ತವೆ. ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಪ್ರಕಟನೆ ಹೊರಡಿಸಿ,...
ಹೆಚ್ಚಿನ ಸುದ್ದಿ

ಅಂಚೆ ಉಳಿತಾಯ ಖಾತೆಯಲ್ಲಿ 500 ರೂ. ಇರುವುದು ಕಡ್ಡಾಯ – ಕಹಳೆ ನ್ಯೂಸ್

ನವದೆಹಲಿ : ಹಲವು ಬ್ಯಾಂಕುಗಳ ಮಾದರಿಯಲ್ಲಿ ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿಯೂ ಇನ್ನು ಮುಂದೆ ಕನಿಷ್ಠ ಬ್ಯಾಲೆನ್ಸ್‌ ಇರಲೇಬೇಕು. ಭಾರತೀಯ ಅಂಚೆ ಇಲಾಖೆ ಈ ಕುರಿತು ಮಾಹಿತಿ ನೀಡಿದೆ. ಇನ್ನು ಮುಂದೆ ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿಯೂ 500 ರೂ. ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕು ಎಂದು ಅಂಚೆ ಇಲಾಖೆ ಟ್ವೀಟ್‌ನಲ್ಲಿ ತಿಳಿಸಿದೆ. ಕನಿಷ್ಠ ಮೊತ್ತವನ್ನು 500 ರೂ. ನಿಗದಿ ಮಾಡಲಾಗಿದೆ. ಅಂಚೆ ಇಲಾಖೆಯಲ್ಲಿ ಖಾತೆ ಹೊಂದಿರುವ ಎಲ್ಲಾ ಜನರು ಡಿಸೆಂಬರ್...
ಹೆಚ್ಚಿನ ಸುದ್ದಿ

ಬ್ರಿಟೀಷರ ಕಾಲದಲ್ಲಿ ಕಳ್ಳತನವಾಗಿದ್ದ ದೇವಿಯ ಪ್ರತಿಮೆ ಭಾರತಕ್ಕೆ ವಾಪಸ್ – ಕಹಳೆ ನ್ಯೂಸ್

ಹೊಸದಿಲ್ಲಿ: ಪ್ರಧಾನಿ ಮೋದಿ ರವಿವಾರ ನಡೆಸಿಕೊಟ್ಟ ಮನ್‌ ಕೀ ಬಾತ್‌ ನಲ್ಲಿ ಕೆನಡಾದಲ್ಲಿರುವ ಅನ್ನಪೂರ್ಣಾ ದೇವಿಯ ವಿಗ್ರಹ ಸದ್ಯದಲ್ಲೇ ವಾರಾಣಸಿಗೆ ಮರಳುವ ಸಿಹಿ ಸುದ್ದಿ ನೀಡಿದ್ದಾರೆ. ಶತಮಾನದಷ್ಟು ಹಿಂದೆ ಕಳವಾಗಿದ್ದ ಈ ವಿಗ್ರಹ ವಾಪಸ್‌ ಬರುತ್ತಿರುವುದು ಇಡೀ ದೇಶಕ್ಕೇ ಖುಷಿಯ ವಿಚಾರ ಎಂದಿದ್ದಾರೆ ಮೋದಿ. ಅಷ್ಟೇ ಅಲ್ಲ, ಕಳೆದ ಆರು ವರ್ಷಗಳಲ್ಲಿ ಇಂತಹ ಸುಮಾರು 40 ವಿಗ್ರಹಗಳನ್ನು ವಿದೇಶಗಳಿಂದ ತರಿಸಲಾಗಿದೆ. ಅಮೆರಿಕವೊಂದೇ ಭಾರತದ 200 ಪ್ರಾಚೀನ ವಸ್ತುಗಳನ್ನು ಮರಳಿಸಿದೆ. ಕಳವಾಗಿರುವ ವಿಗ್ರಹಗಳನ್ನು...
ಹೆಚ್ಚಿನ ಸುದ್ದಿ

ಇನ್ನು ಮುಂದೆ ರೈಲ್ವೆ ನಿಲ್ದಾಣದಲ್ಲಿ ಟೀ ಕುಡಿಯೋಕೆ ಸಿಗಲ್ಲ ಪ್ಲಾಸ್ಟಿಕ್​ ಕಪ್​; ಮಣ್ಣಿನ ಲೋಟದಲ್ಲೇ ಸವಿಯಿರಿ ಬಿಸಿಬಿಸಿ ಚಹಾ! – ಕಹಳೆ ನ್ಯೂಸ್

ನವದೆಹಲಿ: ದೇಶದ ಎಲ್ಲಾ ರೇಲ್ವೆ ನಿಲ್ದಾಣದಲ್ಲಿ ಚಹಾ ಕುಡಿಯಲು ಪ್ಲಾಸ್ಟಿಕ್ ಕಪ್‌ಗಳ ಬದಲಿಗೆ ಪರಿಸರ ಸ್ನೇಹಿ ಮಣ್ಣಿನ ಕಪ್ (ಕುಲ್ಹಾಡ್ಸ್)ಗಳನ್ನು ಮಾತ್ರ ಬಳಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಧಿಗವಾರ ರೇಲ್ವೆ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ದೇಶದ ಸುಮಾರು 400 ರೇಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕಪ್ ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ರೇಲ್ವೆ ನಿಲ್ದಾಣಗಳಲ್ಲಿಯೂ ಇದೇ...
ಹೆಚ್ಚಿನ ಸುದ್ದಿ

ಇಂದು ಸಂಭವಿಸಲಿದೆ ವರ್ಷದ ಕೊನೆಯ ಮತ್ತು 4ನೇ ಚಂದ್ರಗ್ರಹಣ; ಎಲ್ಲೆಲ್ಲಿ ಗ್ರಹಣ ಗೋಚರ? – ಕಹಳೆ ನ್ಯೂಸ್

ನವದೆಹಲಿ : ಇಂದು ಖಗೋಳ ಲೋಕದಲ್ಲಿ ಮಹತ್ವದ ದಿನವಾಗಿದೆ. ಯಾಕೆಂದರೆ ಈ ವರ್ಷದ ನಾಲ್ಕನೇ ಹಾಗೂ ಕೊನೆಯ ಚಂದ್ರಗ್ರಹಣ ಇಂದು ಸಂಭವಿಸಲಿದೆ. ಈ ಚಂದ್ರಗ್ರಹಣವು 2020ನೇ ವರ್ಷದ 4ನೇ ಚಂದ್ರಗ್ರಹಣವಾಗಿದೆ. ಈವರೆಗೆ ಈ ವರ್ಷದಲ್ಲಿ ಒಟ್ಟು ಮೂರು ಚಂದ್ರಗ್ರಹಣಗಳು ಸಂಭವಿಸಿವೆ. ವಿಶೇಷ ಎಂದರೆ ಈ ವರ್ಷದ ಕೊನೆಯ ಚಂದ್ರಗ್ರಹಣವು ಕಾರ್ತಿಕ ಪೂರ್ಣಿಮ ದಿನವಾದ ಇಂದು ಸಂಭವಿಸಲಿದ್ದು, ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಇದು ಪೆನಂಬ್ರಲ್ ಚಂದ್ರಗ್ರಹಣವಾಗಿದೆ. ಅಂದರೆ ಭೂಮಿಯು ಸೂರ್ಯ ಹಾಗೂ...
ಹೆಚ್ಚಿನ ಸುದ್ದಿ

ಶವಾಗಾರದಲ್ಲಿ ಹೆಣ ಇಡುವಾಗಲೇ ಎದ್ದುಕುಳಿತ ಯುವಕ! ಕಿರುಚಿಕೊಂಡ ವೈದ್ಯರು -ಕಹಳೆ ನ್ಯೂಸ್

ಕೆಲವೊಮ್ಮೆ ಯಾರ ಊಹೆಗೂ ನಿಲುಕದ್ದ ಸಂಗತಿಗಳು ನಡೆದುಬಿಡುತ್ತವೆ. ಅಂಥದ್ದೇ ಒಂದು ವಿಚಿತ್ರ ಹಾಗೂ ಅಷ್ಟೇ ಕುತೂಹಲ ಎನ್ನುವ ಘಟನೆ ನೈರೋಬಿಯಲ್ಲಿ ನಡೆದಿದ್ದು, ವೈದ್ಯರ ತಂಡವನ್ನೇ ಬೆಚ್ಚಿಬೀಳಿಸಿದೆ. ಸತ್ತಿದ್ದವ ಬದುಕಿ ಬಂದು ವೈದ್ಯರನ್ನೇ ಕಿರುಚುವಂತೆ ಮಾಡಿದ ಘಟನೆ ಇದು. ಪೀಟರ್​ ಕೀಗೆನ್​ ಎಂಬ 32 ವರ್ಷದ ಯುವಕನೇ ಈ ರೀತಿ ವೈದ್ಯರಿಗೆ ಗಾಬರಿಹುಟ್ಟಿಸಿದವ. ಅಷ್ಟಕ್ಕೂ ಆಗಿದ್ದೇನೆಂದರೆ ಪೀಟರ್ ತೀವ್ರವಾಗಿ ಹೊಟ್ಟೆ ನೋವಿನಿಂದ ನರಳುತ್ತಿದ್ದ. ನಿನ್ನೆ ಏಕಾಏಕಿ ಮನೆಯಲ್ಲಿ ಕುಸಿದು ಬಿದ್ದುಬಿಟ್ಟಿದ್ದಾನೆ. ಕೂಡಲೇ...
ಹೆಚ್ಚಿನ ಸುದ್ದಿ

ಹೆಲ್ಮೆಟ್​ ಹಾಕಿದ್ರೂ ಇನ್ಮುಂದೆ ಕಟ್ಟಬೇಕಾಗಬಹುದು ದಂಡ! ಏಕೆ ಗೊತ್ತಾ? -ಕಹಳೆ ನ್ಯೂಸ್

ನವದೆಹಲಿ: ದ್ವಿಚಕ್ರ ವಾಹನ ಸವಾರರ ಪ್ರಾಣರಕ್ಷಣೆಯ ಹಿನ್ನೆಲೆಯಲ್ಲಿ ಹೆಲ್ಮೆಟ್​ ಕಡ್ಡಾಯ ಮಾಡಿರುವುದು ತೀರಾ ಹಳೆಯ ಸಂಗತಿ. ಅದಾದ ಮೇಲೆ ಹಿಂಬದಿ ಸವಾರರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟುತ್ತಿರುವುದನ್ನು ಕಂಡ ಸರ್ಕಾರ, ಹಿಂಬದಿ ಸವಾರರಿಗೂ ಹೆಲ್ಮೆಟ್​ ಕಡ್ಡಾಯ ಮಾಡಿದೆ. ಹೆಲ್ಮೆಟ್​ ಇಲ್ಲದ ದಿನಗಳಿಗೆ ಹೋಲಿಸಿದರೆ, ಹೆಲ್ಮೆಟ್​ ಕಡ್ಡಾಯ ಮಾಡಿದ ಮೇಲೆ ಅಪಘಾತದಲ್ಲಿ ಮೃತಪಡುವವರ ಸಂಖ್ಯೆ ಇಳಿಮುಖವಾಗಿದ್ದರೂ, ಈಗ ಹೆಚ್ಚಿನವರು ದಂಡವನ್ನು ತಪ್ಪಿಸಿಕೊಳ್ಳಲು ನಾಮ್​ಕೇವಾಸ್ತೆ ಹೆಲ್ಮೆಟ್​ ಹಾಕಿಕೊಳ್ಳುತ್ತಿದ್ದಾರೆ. ಯಾವುದೇ ಸುರಕ್ಷತೆ ಇಲ್ಲದ ಹೆಲ್ಮೆಟ್​ಗಳನ್ನು ಕೇವಲ...
ಹೆಚ್ಚಿನ ಸುದ್ದಿ

ಡ್ರಗ್ಸ್ ಕೇಸ್ : ಜಾಮೀನಿಗಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ನಟಿ ರಾಗಿಣಿ – ಕಹಳೆ ನ್ಯೂಸ್

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿಗಳಾಗಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಜಾಮೀನಿಗಾಗಿ ವಿಧ ವಿಧದಲ್ಲಿ ಪ್ರಯತ್ನ ನಡೆಸಿದ್ದರೂ ಇದುವರೆಗೂ ಯಶ ಕಂಡಿಲ್ಲ, ಇದೇ ಕಾರಣದಿಂದ ನಟಿ ರಾಗಿಣಿ ಇದೀಗ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ. ಕಳೆದ ಮೂರು ತಿಂಗಳಿನಿಂದ ಕಂಬಿಗಳ ಹಿಂದೆ ಸೆರೆಯಾಗಿರುವ ನಟಿ ರಾಗಿಣಿ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಸೆಪ್ಟೆಂಬರ್ ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ...
1 98 99 100 101 102 132
Page 100 of 132