ಮೋದಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಈಗ ಬಿಜೆಪಿ ಮಿತ್ರಪಕ್ಷಗಳ ಏಕೈಕ ಪ್ರತಿನಿಧಿ-ಕಹಳೆ ನ್ಯೂಸ್
ಹೊಸದಿಲ್ಲಿ, ಅ.10: ಎಲ್ಜೆಪಿ ಮುಖಂಡ ರಾಮ್ವಿಲಾಸ್ ಪಾಸ್ವಾನ್ ಅವರ ನಿಧನದೊಂದಿಗೆ, ಕೇಂದ್ರದ ಅಧಿಕಾರಾರೂಢ ಎನ್ಡಿಎ ಮೈತ್ರಿಕೂಟ ಸಂಪುಟದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಮದಾಸ್ ಅಠಾವಳೆ ಅವರನ್ನು ಹೊರತುಪಡಿಸಿ, ಎಲ್ಲ ಬಿಜೆಪಿಯೇತರ ಮುಖ ಮಾಯವಾದಂತಾಗಿದೆ. ಬಿಜೆಪಿ ಮಿತ್ರಪಕ್ಷಗಳು ಹಲವು ಸಂಸದರನ್ನು ಹೊಂದಿದ್ದರೂ, ಸಂಪುಟ ಮಾತ್ರ ಇದೀಗ ಬಹುತೇಕ ಬಿಜೆಪಿಗೆ ಸೀಮಿತವಾಗಿದೆ. ಕಳೆದ ವರ್ಷ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಬಳಿಕ ಅಧಿಕಾರ ಹಂಚಿಕೆ ಸಂಘರ್ಷದ ಹಿನ್ನೆಲೆಯಲ್ಲಿ ತನ್ನ ಪ್ರತಿನಿಧಿ ಅರವಿಂದ್ ಸಾವಂತ್...