Saturday, February 1, 2025

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹುಲ್ಲೆಗೌಡನಹಳ್ಳಿ ಕಾಲನಿಯಲ್ಲಿ ಮಾರಕಾಸ್ತ್ರಗಳಿಂದ ಹಸುವಿನ ಹೊಟ್ಟೆ ಸೀಳಿ, ಕಿವಿ-ಬಾಲ ಕೊಯ್ದು ವಾಮಾಚಾರ! ಬೆಚ್ಚಿಬಿದ್ದ ಸ್ಥಳೀಯರು-ಕಹಳೆ ನ್ಯೂಸ್

ನೆಲಮಂಗಲ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹುಲ್ಲೆಗೌಡನಹಳ್ಳಿ ಕಾಲನಿಯಲ್ಲಿ ಮಾರಕಾಸ್ತ್ರಗಳಿಂದ ಹಸುವಿನ ಹೊಟ್ಟೆ ಬಗೆದು, ಕಿವಿ ಮತ್ತು ಬಾಲ ಕತ್ತರಿಸಿ, ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ಅಷ್ಟಕ್ಕೂ ಇಂತಹ ಅಮಾನವೀಯ ಘಟನೆ ನಡೆದಿರುವುದು ವಾಮಾಚಾರಕ್ಕಂತೆ! ಈ ಭೀಕರ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಈ ಘಟನೆಯಿಂದ ಗೋಪಾಲಪ್ಪ ಎಂಬುವರಿಗೆ ಸೇರಿದ ಒಂದೂವರೆ ವರ್ಷದ ಹಸು ಬಲಿಯಾಗಿದ್ದು, ಹಸುವನ್ನ ಅಮಾನುಷವಾಗಿ ಕೊಂದು ಗೋಡೆ ಮೇಲೆ ರಕ್ತದಿಂದ ಚಿತ್ತಾರ ಬಿಡಿಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕಳೆದ...
ಹೆಚ್ಚಿನ ಸುದ್ದಿ

ಹುಲಿಯ ಚರ್ಮ ಮತ್ತು ಉಗುರು ಸಾಗಿಸುತ್ತಿದ್ದ ಐವರು ಆರೋಪಿಗಳ ಬಂಧನ-ಕಹಳೆ ನ್ಯೂಸ್

ಹೆಬ್ರಿ : ಪೊಲೀಸರು ಸೋಮೇಶ್ವರ ಚೆಕ್ ಪೋಸ್ಟ್‌ನಲ್ಲಿ ಹುಲಿಯ ಚರ್ಮ ಮತ್ತು ಹುಲಿ ಉಗುರು ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಹುಬ್ಬಳ್ಳಿಯಿಂದ ಮಂಗಳೂರು ಕಡೆಗೆ ಬೈಕ್‍ಗಳಲ್ಲಿ ಹುಲಿಯ ಎರಡು ಚರ್ಮ ಮತ್ತು ಉಗುರುಗಳನ್ನು ಸಾಗಿಸುತ್ತಿದ್ದಾಗ ಚೆಕ್‍ಪೋಸ್ಟ್‌ನಲ್ಲಿ ತಪಾಸಣೆ ನಡೆಸುವ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾರೆ. ಬೈಕ್ ಮತ್ತು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಹುಲಿ ಚರ್ಮ ಮತ್ತು ಉಗುರುಗಳನ್ನು ಫೊರೆನ್ಸಿಕ್ ಪ್ರಯೋಗಾಯಲಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಜಾಲದಲ್ಲಿ ಭಾಗಿಯಾದವರನ್ನು ಬಂಧಿಸಲಾಗುವುದು ಎಂದು...
ಹೆಚ್ಚಿನ ಸುದ್ದಿ

ಉಪ್ಪಿನಂಗಡಿಯಲ್ಲಿ ಪಬ್ ಜೀ ಸದ್ದು, ತಲೆಕೂದಲನ್ನು ವಿಕಾರವಾಗಿ ಕತ್ತರಿಸಿಕೊಂಡ ವಿದ್ಯಾರ್ಥಿ-ಕಹಳೆ ನ್ಯೂಸ್

ಉಪ್ಪಿನಂಗಡಿ : ಮಂಗಳೂರಿನಲ್ಲಿ ಪಬ್ ಜಿ ಮಾದರಿಯ ಗೇಮ್ ಸಂಬಂಧಿಸಿದಂತೆ ಬಾಲಕ ಕೊಲೆ ನಡೆದ ಬಳಿಕ ಇದೀಗ ಪ್ರೌಢ ಶಾಲಾ ವಿದ್ಯಾರ್ಥಿಯೊಬ್ಬ ಅದೇ ಮಾದರಿಯ ಗೇಮ್ ಆಡಿ ತಲೆಗೂದಲನ್ನು ವಿಚಿತ್ರವಾಗಿ ಕತ್ತರಿಸಿಕೊಂಡಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಖಾಸಗಿ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ತಲೆಕೂದಲು ವಿಕಾರವಾಗಿ ಕತ್ತರಿಸಿರುವುದನ್ನು ಹೆತ್ತವರು ಗಮನಿಸಿ ಪ್ರಶ್ನಿಸಿದಾಗ ಮೊದಲಿಗೆ ಬೇರೆ ಹುಡುಗರು ಬಲವಂತದಿಂದ ಮಾಡಿದ್ದಾರೆ ಎಂದು ಹೇಳಿದ್ದ....
ಹೆಚ್ಚಿನ ಸುದ್ದಿ

ಬಿಳ್ಳೂರುನಲ್ಲಿ ಉಚಿತ ಡಿಜಿಟಲ್ ಸೇವಾ ಕೇಂದ್ರ ಆರಂಭ ; ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಯವರಿಂದ ಲೋಕಾರ್ಪಣೆ –ಕಹಳೆ ನ್ಯೂಸ್

ಬಾಗೇಪಲ್ಲಿ : 'ಆಧಾರ್, ಪಡಿತರ ಚೀಟಿಗಳು ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳು ಆನ್‍ಲೈನ್ ಆಗಿರುವುದರಿಂದ, ಜನರಿಗೆ ಅನುಕೂಲ ಕಲ್ಪಿಸಲು ತಮ್ಮ ಟ್ರಸ್ಟ್‍ನಿಂದ ಬಿಳ್ಳೂರು ಗ್ರಾಮದಲ್ಲಿ ಉಚಿತವಾಗಿ ಡಿಜಿಟಲ್ ಸೇವಾಕೇಂದ್ರ ಆರಂಭಿಸಲಾಗಿದೆ' ಎಂದು ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ತಿಳಿಸಿದರು. ಅವರು ತಾಲೂಕಿನ ಬಿಳ್ಳೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ' ಡಿಜಿಟಲ್ ಸೇವಾಕೇಂದ್ರ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು. 'ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಪಡೆಯಲು, ವಿದ್ಯಾರ್ಥಿ ವೇತನ, ಪಹಣಿ, ಆಧಾರ್, ಪಡಿತರ...
ಹೆಚ್ಚಿನ ಸುದ್ದಿ

ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ ವೀರಕಂಬ ಗ್ರಾಮ ಇದರ ಏಪ್ರಿಲ್ ತಿಂಗಳ ಮಾಸಿಕ ಸಭೆ-ಕಹಳೆ ನ್ಯೂಸ್

ಕಲ್ಲಡ್ಕ : ಏಪ್ರಿಲ್ 6ರಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ದಕ್ಷಿಣ ಕನ್ನಡ ಮಂಗಳೂರು, ಸಮುದಾಯ ಆರೋಗ್ಯ ಕೇಂದ್ರ ವಿಟ್ಲ, ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ ವೀರಕಂಬ ಗ್ರಾಮ ಇದರ ಏಪ್ರಿಲ್ ತಿಂಗಳ ಮಾಸಿಕ ಸಭೆಯು ವೀರಕಂಭ ಗ್ರಾಮ ಪಂಚಾಯತಿನ ರಾಜೀವ್ ಗಾಂಧಿ ಸಮುದಾಯ ಭವನದಲ್ಲಿ ಗ್ರಾಮ ಸಮಿತಿ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಸುನಿಲ್ ನಾಯ್ಕ ರವರ ಅಧ್ಯಕ್ಷತೆಯಲ್ಲಿ ಜರಗಿತು. ಸಭೆಯಲ್ಲಿ ಕೋವಿಡ್ ವ್ಯಾಕ್ಸಿನ್ ಲಸಿಕಾ...
ಹೆಚ್ಚಿನ ಸುದ್ದಿ

ಸುಕ್ಮಾ ಛತ್ತೀಸಗಡದಲ್ಲಿ ನಕ್ಸಲರು ನಡೆಸಿದ ದಾಳಿಗೆ ಹುತಾತ್ಮರಾದ ಭಾರತೀಯ ಯೋಧರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಟಾರ್ಚನೆ-ಕಹಳೆ ನ್ಯೂಸ್

ಉಜಿರೆ : ಸುಕ್ಮಾ ಛತ್ತೀಸಗಡದಲ್ಲಿ ಹೇಡಿ ನಕ್ಸಲರು ನಡೆಸಿದ ದಾಳಿಗೆ ಹುತಾತ್ಮರಾದ ಭಾರತೀಯ ಯೋಧರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಭಾರತಮಾತೆಯ ಭಾವಚಿತ್ರಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಜಿರೆ ಇವರಿಂದ ಪುಷ್ಟಾರ್ಚನೆ ಮಾಡುವುದರ ಮೂಲಕ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬೆಳ್ತಂಗಡಿ ತಾಲೂಕು ಸಂಚಾಲಕರಾದ ರೋಹನ್ ಉಜಿರೆ, ನಗರ ಕಾರ್ಯದರ್ಶಿ ಜಯಂತ್, ರಕ್ಷಿತ್ ಮಿಥುನ್ ಇತರ ಕಾರ್ಯಕರ್ತರು ಭಾಗವಹಿಸಿದ್ದರು....
ಹೆಚ್ಚಿನ ಸುದ್ದಿ

ಏಪ್ರಿಲ್ 6 ರಂದು ದಕ್ಷಿಣ ಭಾರತದ ತಮಿಳುನಾಡು ವಿಧಾನಸಭೆ ಚುನಾವಣೆ -ಕಹಳೆ ನ್ಯೂಸ್

ಬಾಗೇಪಲ್ಲಿ : ದಕ್ಷಿಣ ಭಾರತದ ತಮಿಳುನಾಡು ವಿಧಾನಸಭೆ ಚುನಾವಣೆ ಏಪ್ರಿಲ್ 6 ರಂದು ನಡೆಯಲಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. 16 ವಿಧಾನ ಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣೆ ನಡೆಯುತ್ತಿದ್ದು ಚುನಾವಣೆ ಸುಸೂತ್ರವಾಗಿ ನಡೆಯಲು ಬಾಗೇಪಲ್ಲಿ ತಾಲೂಕಿನಿಂದ ಸುಮಾರು 84 ಹೋಮ್ ಗಾಡ್ಸ್ ಇಂದು ಚೆನ್ನೈ ಗೆ ಪ್ರಯಾಣ ಬೆಳೆಸಿ ಏಪ್ರಿಲ್ 6 ರಂದು ಚುನಾವಣೆಯನ್ನು ಸುಸೂತ್ರವಾಗಿ ನಡೆಸಿ ಎಪ್ರಿಲ್ 9 ರಂದು ಬಾಗೇಪಲ್ಲಿ ಗೆ ವಾಪಸ್ ಬರುತ್ತಾರೆ...
ಹೆಚ್ಚಿನ ಸುದ್ದಿ

ಸಂಸ್ಥಾಪನೋತ್ಸವ – ಹವ್ಯಕ ವಿಶೇಷ ಪ್ರಶಸ್ತಿ ಪ್ರದಾನ ಕಾರ್ಯಕ್ರಮ। ಬೇರೆಯವರನ್ನು ದ್ವೇಷಿಸುವ ಪ್ರವೃತ್ತಿ ನಮ್ಮದಲ್ಲ, ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ; ಎಸ್ ಗುರುಮೂರ್ತಿ-ಕಹಳೆ ನ್ಯೂಸ್

ಬೇರೆಯವರನ್ನು ದ್ವೇಷಿಸುವ ಪ್ರವೃತ್ತಿ ನಮ್ಮದಲ್ಲ, ಬೇರೆಯವರಿಗೆ ಮಾರ್ಗದರ್ಶನ ಮಾಡಿಕೊಂಡು ಬಂದವರು ನಾವು. ನಮ್ಮತನವನ್ನು ಉಳಿಸಿಕೊಳ್ಳಲು ಬ್ರಾಹ್ಮಣರೆಲ್ಲರೂ ಒಗ್ಗಟ್ಟಾಗಿ ನಡೆಯಬೇಕಾಗಿದೆ ಎಂದು ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಸ್ ಗುರುಮೂರ್ತಿ ಹೇಳಿದರು. ಹವ್ಯಕ ಮಹಾಸಭೆಯಲ್ಲಿ ನಡೆದ ಸಂಸ್ಥಾಪನೋತ್ಸವ - ವಿಶೇಷ ಪ್ರಶಸ್ತಿ ಪ್ರದಾನ ಹಾಗೂ ಪಲ್ಲವ ಪುರಸ್ಕಾರ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಕೇ ಹುಟ್ಟಿದ ಹವ್ಯಕ ಮಹಾಸಭೆಯು ಈ ಎತ್ತರಕ್ಕೆ ಬೆಳೆದಿದೆ. ವಿಶ್ವಮಟ್ಟದ ವಿವಿಧ ಕ್ಷೇತ್ರದ ಸಾಧಕರನ್ನು...
1 22 23 24 25 26 132
Page 24 of 132