ಬಂದಾರು ಪಂಚಾಯತ್‍ನ ನಿವಾಸಿ ಬಾಡ ಮೊಗೇರರ ಮನೆ ದುರಸ್ತಿ ಕಾರ್ಯ ; ಕಷ್ಟಕ್ಕೆ ಸ್ಪಂಧಿಸಿ ಒಗ್ಗಟ್ಟು ಪ್ರದರ್ಶಿಸಿದ ಸಹೃದಯಿಗಳು – ಕಹಳೆ ನ್ಯೂಸ್
ಬಂದಾರು : ಬಂದಾರು ಗ್ರಾಮದ ಮೈರೋಳ್ತಡ್ಕ ಮುಂಡೂರು ನಿವಾಸಿಯಾಗಿರುವ ಬಾಡ ಮುಗೇರರವರು ಅನಾರೋಗ್ಯ ಪೀಡಿತರಾಗಿದ್ದು ತಂಗಿ ಲೀಲಾರವರ ದುಡಿಮೆಯಿಂದ ಜೀವನ ನಡೆಸುತ್ತಿದ್ದಾರೆ. ಇವರ ಮನೆಯ ಮಾಡು ಸಂಪೂರ್ಣ ಹಾಳಾಗಿದ್ದು ಗಾಳಿ ಮಳೆಗೆ ಬಿದ್ದು ಹೋಗುವ ಅಪಾಯದಲ್ಲಿತ್ತು. ಇದೀಗ ಈ ಮನೆಗೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಕಣಿಯೂರು ಒಟ್ಟಾಗಿ ಹೊಸ ರೂಪವನ್ನ ನೀಡಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯ ಹಾಗೂ ಶ್ರೀ ಧರ್ಮಸ್ಥಳ ವಿಪತ್ತು...