Monday, January 27, 2025

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಸರ್ಕಾರದ ನಿಷ್ಕೀಯತೆಯಿಂದಲೇ ಕರ್ನಾಟಕದಲ್ಲಿ ಪದೇ ಪದೇ ಸ್ಫೋಟವಾಗುತ್ತಿದೆ; ಈಶ್ವರ ಖಂಡ್ರೆ-ಕಹಳೆ ನ್ಯೂಸ್

ದಾವಣಗೆರೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಸರ್ಕಾರದ ನಿಷ್ಕೀಯತೆಯಿಂದಲೇ ಕರ್ನಾಟಕದಲ್ಲಿ ಪದೇ ಪದೇ ಸ್ಫೋಟವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಸ್ಫೋಟ ಆದಾಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು, ಆದರೆ ಸರ್ಕಾರ ಎಚ್ಚೆತ್ತುಕೊಳ್ಳದೇ ಇದ್ದಿದ್ದರಿಂದ ಮತ್ತೆ ಸ್ಫೋಟವಾಗಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ರಾಜ್ಯದ ಜನ ಭೀತರಾಗಿದ್ದಾರೆ. ಇದು ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎಂಬುದನ್ನು ತೋರಿಸಿಕೊಡುತ್ತದೆ ಎಂದು ಮಾತಾನಾಡಿದರು. ಇನ್ನು ಲೋಕಸಭೆ, ವಿಧಾನಸಭೆ ಉಪ...
ಹೆಚ್ಚಿನ ಸುದ್ದಿ

ಪಾಕಿಸ್ತಾನ ಜತೆಗಿನ ಸಮಸ್ಯೆಗಳನ್ನು ದ್ವಿಪಕ್ಷೀಯವಾಗಿ ಮತ್ತು ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ಬದ್ಧವಾಗಿದೆ ಎಂದ ಭಾರತ-ಕಹಳೆ ನ್ಯೂಸ್

ನವದೆಹಲಿ : ವಿದೇಶಾಂಗ ಸಚಿವಾಲಯ , ಪಾಕಿಸ್ತಾನದೊಂದಿಗೆ ಸಹಜ ಬಾಂಧವ್ಯವನ್ನು ಭಾರತ ಬಯಸುತ್ತಿದ್ದು, ಎಲ್ಲ ಸಮಸ್ಯೆಗಳನ್ನು ದ್ವಿಪಕ್ಷೀಯವಾಗಿ ಮತ್ತು ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ಭಾರತ ಬದ್ಧವಾಗಿದೆ ಎಂದು ಹೇಳಿದೆ. ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ, ಪ್ರಮುಖ ವಿಷಯಗಳಲ್ಲಿ ನಮ್ಮ ನಿಲುವು ಬದಲಾಗಿಲ್ಲ. ಅದನ್ನು ಪುರುಚ್ಚರಿಸಬೇಕು ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದ್ದಾರೆ. ಎಲ್ಲ ಕದನ ವಿರಾಮ...
ಹೆಚ್ಚಿನ ಸುದ್ದಿ

ಇಂಧನ ಬೆಲೆ ಏರಿಕೆ ಖಂಡಿಸಿ ಎಲೆಕ್ಟ್ರಿಕ್ ಸ್ಕೂಟರ್‍ನಲ್ಲಿ ಸಂಚರಿಸುತ್ತಾ ಪ್ರತಿಭಟನೆ ನಡೆಸಿದ ಮಮತ ಬ್ಯಾನರ್ಜಿ-ಕಹಳೆ ನ್ಯೂಸ್

ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರದ ಇಂಧನ ಬೆಲೆ ಏರಿಕೆ ಖಂಡಿಸಿ, ಸ್ಕೂಟರ್‍ನಲ್ಲಿ ಸಂಚರಿಸುತ್ತಾ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದೆ. ಅವರು ಮೇಯರ್ ಫರೀದ್ ಹಕೀಮ್ ಅವರೊಂದಿಗೆ ಸ್ಕೂಟರ್‍ನಲ್ಲಿ ಸಂಚರಿಸುತ್ತ ಇಂಧನ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಮಮತಾ ಬ್ಯಾನರ್ಜಿ ಅವರು ಹೆಲ್ಮೆಟ್ ಧರಿಸಿ, ಪೆಟ್ರೋಲ್ ಬೆಲೆ ಏರಿಕೆಯ ಖಂಡಿಸಿದರು. ಪ್ರದರ್ಶನ ಫಲಕವನ್ನು...
ಹೆಚ್ಚಿನ ಸುದ್ದಿ

ಬಿಜೆಪಿ ಸರ್ಕಾರ ಅಧಿಕಾರ ಬಹಿಸಿಕೊಂಡಾಗಿನಿಂದ ಕಲ್ಯಾಣ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದೆ ; ಕುಮಾರಸ್ವಾಮಿ-ಕಹಳೆ ನ್ಯೂಸ್

ಕಲಬುರ್ಗಿ : ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ಬಿಜೆಪಿ ಸರ್ಕಾರ ಅಧಿಕಾರ ಬಹಿಸಿಕೊಂಡಾಗಿನಿಂದ ಕಲ್ಯಾಣ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಅವರು, ರಾಯಚೂರಿನಲ್ಲಿ ಆರಂಭವಾಗಬೇಕಿದ್ದ ಐಐಟಿ ಧಾರವಾಡಕ್ಕೆ ಹೋದರೆ, ಕಲಬುರ್ಗಿಯ ಇಎಸ್ಐಸಿ ಆಸ್ಪತ್ರೆಯಲ್ಲಿ ಆರಂಭವಾಗಬೇಕಿದ್ದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಇದೀಗ ಹುಬ್ಬಳ್ಳಿಗೆ ಮಂಜೂರು ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಹೈದರಾಬಾದ್ ಕರ್ನಾಟಕ ಹೆಸರನ್ನು ಕಲ್ಯಾಣ ಕರ್ನಾಟಕ...
ಹೆಚ್ಚಿನ ಸುದ್ದಿ

ಕೇರಳದಲ್ಲಿ ಮತ್ತೆ ರಕ್ತಪಾತ; ಆರ್‍ಎಸ್‍ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಡಿಪಿಐ ಕಾರ್ಯಕರ್ತರು ಅರೆಸ್ಟ್ –ಕಹಳೆ ನ್ಯೂಸ್

ಆಲಪ್ಪುಳ : ಆರ್‍ಎಸ್‍ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಡಿಪಿಐನ ಎಂಟು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ರಾತ್ರಿ ಆಲಪ್ಪುಳ ಜಿಲ್ಲೆಯ ಚೆರ್ತಲಾ ಬಳಿಯ ನಾಗಮಕುಲಂಗರದಲ್ಲಿ ಎಸ್‍ಡಿಪಿಐ ಮತ್ತು ಆರ್‍ಎಸ್‍ಎಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಈ ವೇಳೆ ಆರ್‍ಎಸ್‍ಎಸ್ ಕಾರ್ಯಕರ್ತ 23 ವರ್ಷದ ನಂದು ಯಾನೆ ರಾಹುಲ್ ಕೃಷ್ಣ ಎಂಬವರು ಮೃತಪಟ್ಟಿದ್ದರು. ಈ ಘಟನೆಯಲ್ಲಿ ಎಸ್‍ಡಿಪಿಐ ಮತ್ತು ಆರ್‍ಎಸ್‍ಎಸ್‍ನ ಆರು ಕಾರ್ಯಕರ್ತರಿಗೆ ಗಾಯಗಳಾಗಿದ್ದು, ಅವರನ್ನು ಎರ್ನಾಕುಲಂನ...
ಹೆಚ್ಚಿನ ಸುದ್ದಿ

ಖಾಸಗಿ ಬ್ಯಾಂಕುಗಳಿಗೆ ಸರ್ಕಾರಿ ವಹಿವಾಟಿನ ವ್ಯವಹಾರಗಳನ್ನು ನೀಡುವ ಮೇಲಿನ ನಿಬರ್ಂಧವನ್ನು ಕೇಂದ್ರ ತೆಗೆದುಹಾಕಿದೆ; ನಿರ್ಮಲಾ ಸೀತಾರಾಮನ್-ಕಹಳೆ ನ್ಯೂಸ್

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಖಾಸಗಿ ಬ್ಯಾಂಕುಗಳಿಗೆ ಸರ್ಕಾರಿ ವಹಿವಾಟಿನ ವ್ಯವಹಾರಗಳನ್ನು ನೀಡುವ ಮೇಲಿನ ನಿಬರ್ಂಧವನ್ನು ಕೇಂದ್ರ ತೆಗೆದುಹಾಕಿದೆ ಎಂದು ಹೇಳಿದ್ದಾರೆ. ಈ ಕುರಿತು ಅವರು, ಖಾಸಗಿ ಬ್ಯಾಂಕುಗಳಿಗೆ ಸರ್ಕಾರಿ ವ್ಯವಹಾರವನ್ನು ನೀಡುವುದರ ಮೇಲಿದ್ದ ನಿಬರ್ಂಧವನ್ನು ತೆಗೆದುಹಾಕಲಾಗಿದ್ದು, ಎಲ್ಲಾ ಬ್ಯಾಂಕುಗಳು ಈಗ ಭಾಗವಹಿಸಬಹುದು ಎನ್ನುವುದು ಖಚಿತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಈ ನಿರ್ಧಾರವು ಖಾಸಗಿ ಬ್ಯಾಂಕುಗಳನ್ನು ಭಾರತೀಯ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಸಮಾನ ಪಾಲುದಾರರನ್ನಾಗಿ...
ಹೆಚ್ಚಿನ ಸುದ್ದಿ

ಕೇರಳದಲ್ಲಿ ಮೀನುಗಾರರೊಂದಿಗೆ ಸಮುದ್ರದಲ್ಲಿ ಈಜುತ್ತಾ ಮೋಜು ಮಾಡಿ ಗಮನ ಸೆಳೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ-ಕಹಳೆ ನ್ಯೂಸ್

ನವದೆಹಲಿ : ಕೇರಳ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇರಳದ ಕೊಲ್ಲಮ್ ಜಿಲ್ಲೆಗೆ ಭೇಟಿ ನೀಡಿದ್ದ ಸಂಧರ್ಭದಲ್ಲಿ ಸಮುದ್ರಕ್ಕೆ ಹಾರಿ ಮೀನುಗಾರರೊಂದಿಗೆ ಈಜುತ್ತಾ ಮೋಜು ಮಾಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಹುಲ್, ಬುಧವಾರದಂದು ಕೊಲ್ಲಂ ಜಿಲ್ಲೆಗೆ ಕಾಂಗ್ರೆಸ್ ನಾಯಕರೊಂದಿಗೆ ಭೇಟಿ ನೀಡಿದ್ದು, ಅಲ್ಲಿ ತಂಗಸ್ಸೆರಿ ಸಮುದ್ರದಲ್ಲಿ ತಮ್ಮ ಸ್ನೇಹಿತರು ಹಾಗೂ ಮೀನುಗಾರರೊಂದಿಗೆ ಈಜಾಡಿದ್ದಾರೆ ಎನ್ನಲಾಗಿದೆ. ಕೆಲವು ಮೀನುಗಾರರು ಮೀನು ಹಿಡಿಯಲು ಬಲೆ ಬೀಸಿ ಸಮುದ್ರಕ್ಕೆ...
ಹೆಚ್ಚಿನ ಸುದ್ದಿ

ಚಿಕ್ಕಬಳ್ಳಾಪುರದ ಹಿರೇನಾಗವಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಂಧನ-ಕಹಳೆ ನ್ಯೂಸ್

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದ ಹಿರೇನಾಗವಲ್ಲಿ ಜಿಲೆಟಿನ್ ಸ್ಫೋಟದ ಪ್ರಮುಖ ಆರೋಪಿ ಸೇರಿ ಇಬ್ಬರನ್ನು ಪೊಲೀಸರು ತಮಿಳುನಾಡಿನ ಬಳಿ ಬಂಧಿಸಿದ್ದಾರೆ. ಗುಡಿಬಂಡೆ ಮೂಲದ ಬಿಜೆಪಿ ನಾಯಕ ಮತ್ತು ದಕ್ಷಿಣ ರೈಲ್ವೆ ಸಲಹಾ ಸಮಿತಿ ಸದಸ್ಯ ಮೊದಲ ಆರೋಪಿ ಗುಡಿಬಂಡೆ ನಾಗರಾಜ್ ಮತ್ತು ಬಾಂಬ್ ಸ್ಫೋಟಿಸುವ ತಮಿಳುನಾಡು ಮೂಲದ ಗಣೇಶ್ ಎಂಬುವರನ್ನು ಹೊಸೂರು ಬಳಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಈವರೆಗೆ ಒಟ್ಟು ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ....
1 48 49 50 51 52 132
Page 50 of 132