ಭಾರತೀಯ ವೀರ ಯೋಧರ ಬಲಿದಾನ ಪುಲ್ವಾಮಾ ದಾಳಿಗೆ ಆಗಿ ಇಂದಿಗೆ 2ವರ್ಷ- ಕಹಳೆನ್ಯೂಸ್
ನವದೆಹಲಿ : ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಪುಲ್ವಾಮಾ ಉಗ್ರರ ದಾಳಿಗೆ ಇಂದು ಎರಡು ವರ್ಷವಾಗಿದೆ. 2019ರಲ್ಲಿ ಫೆಬ್ರವರಿ 14ರಂದು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನದ ಮೇಲೆ ಪುಲ್ವಾಮಾದ ಅವಾಂತಿಪೋರಾ ಬಳಿ ಐಇಡಿ ತುಂಬಿದ ಆತ್ಮಹತ್ಯಾ ಬಾಂಬರ್ ದಾಳಿ ನಡೆಸಲಾಯಿತು. ಈ ದಾಳಿಯಿಂದಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) 40 ಯೋಧರು ಹುತ್ಮಾತರಾದರು. ಜಮ್ಮುವಿನಿಂದ ಶ್ರೀನಗರಕ್ಕೆ 2,500ಕ್ಕಿಂತ ಹೆಚ್ಚು ಸಿಆರ್ಪಿಎಫ್ ಯೋಧರು 78 ವಾಹನಗಳಲ್ಲಿ...