Friday, January 24, 2025

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಕರೋಪಾಡಿ ಗ್ರಾಮದಲ್ಲಿ ಸಿಡಿಲಾಘಾತದಿಂದ ಮೃತಪಟ್ಟ ಚಂದಪ್ಪ ಮೂಲ್ಯ, ಇವರ ಪತ್ನಿ ಸುಮಿತ್ರಾ ಮೂಲ್ಯ ಇವರಿಗೆ ಪರಿಹಾರವಾಗಿ ರೂ. 5 ಲಕ್ಷದ ಚೆಕ್‍ನ್ನು ಹಸ್ತಾಂತರಿಸಿದ ಶಾಸಕ ರಾಜೇಶ್ ನಾಯ್ಕ್-ಕಹಳೆ ನ್ಯೂಸ್

ಕರೋಪಾಡಿ ಗ್ರಾಮದ ಸಾರದಕೋಡಿಯಲ್ಲಿ ಸಿಡಿಲಾಘಾತದಿಂದ ಮೃತಪಟ್ಟ ಚಂದಪ್ಪ ಮೂಲ್ಯ ಇವರ ಧರ್ಮಪತ್ನಿ ಸುಮಿತ್ರಾ ಮೂಲ್ಯ ಇವರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಪ್ರಾಕೃತಿಕ ವಿಕೋಪದಡಿ ಪರಿಹಾರವಾಗಿ ರೂ. 5 ಲಕ್ಷದ ಚೆಕ್‍ನ್ನು ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಜಿ.ಪಂ. ಸದಸ್ಯರಾದ ಕಮಲಾಕ್ಷಿ ಪೂಜಾರಿ, ತಾ.ಪಂ.ಸದಸ್ಯರಾದ ರಮೇಶ್ ಕುಡ್ಮೇರು,ಪ್ರಭಾಕರ ಪ್ರಭು, ಗೀತಾ ಚಂದ್ರಶೇಖರ ಪೂಜಾರಿ, ಕರೋಪಾಡಿ ಗ್ರಾ.ಪಂ.ಸದಸ್ಯರಾದ ಅಶ್ವತ್ ಮಂಟಮೆ, ಜಯರಾಮ ಶೆಟ್ಟಿ ಅನೆಯಾಲಗುತ್ತು ಉಪಸ್ಥಿತರಿದ್ದರು....
ಹೆಚ್ಚಿನ ಸುದ್ದಿ

ಸುಲ್ಕೇರಿ ಮೊಗ್ರುವಿನ ಸೂರಜ್ ಮಡಿವಾಳ ಅವರು ಭಾರತೀಯ ವಾಯುಸೇನೆಗೆ ಆಯ್ಕೆ-ಕಹಳೆ ನ್ಯೂಸ್

ಸುಲ್ಕೇರಿಮೊಗ್ರು : ಸುಲ್ಕೇರಿ ಮೊಗ್ರುವಿನ ಸೂರಜ್ ಮಡಿವಾಳ ಅವರು ಭಾರತೀಯ ವಾಯುಸೇನೆಗೆ ಆಯ್ಕೆಯಾಗಿದ್ದಾರೆ. ಇವರು ಭಾರತೀಯ ವಾಯುಸೇನೆ ಶಿವಮೊಗ್ಗದಲ್ಲಿ ನಡೆಸಿದ ರಾಲಿಯಲ್ಲಿ ತೇರ್ಗಡೆ ಹೊಂದಿ, ಬೀದರ್ ನಲ್ಲಿ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಟ್ಟು, ಬೆಂಗಳೂರಿನಲ್ಲಿ ಜಾಯಿನಿಂಗ್ ಮೆಡಿಕಲ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ, ಚೆನ್ನೈನಲ್ಲಿ ನಡೆಯಲಿರುವ ತರಬೇತಿಯಲ್ಲಿ ಭಾಗವಹಿಸಲಿದ್ದಾರೆ. ವಾಯುಸೇನೆಗೆ ಸೇರಬೇಕೆಂದು ಬಾಲ್ಯದಿಂದಲೂ ಕನಸು ಕಾಣುತ್ತಿದ್ದ ಸೂರಜ್ ಕಳೆದ ವರ್ಷ ಸೈನ್ಯ ಸೇರುವ ಅವಕಾಶದಿಂದ ಕೊನೆಯ ಕ್ಷಣದಲ್ಲಿ ವಂಚಿತರಾಗಿದ್ದರು. ಸದಾ ಚಟುವಟಿಕೆಯಿಂದಿರುವ ಸೂರಜ್...
ಹೆಚ್ಚಿನ ಸುದ್ದಿ

ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಆಗುಂಬೆ ಘಾಟಿಯಲ್ಲಿ ಕಾಡು ಪ್ರಾಣಿಗಳಿಗೆ ಆಹಾರ ಎಸೆಯುವವರಿಗೆ ಬಿತ್ತು ದಂಡ-ಕಹಳೆ ನ್ಯೂಸ್

ಹೆಬ್ರಿ : ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಆಗುಂಬೆ ಘಾಟಿ ಯಲ್ಲಿ ಕಾಡು ಪ್ರಾಣಿಗಳಿಗೆ ಆಹಾರ ತಿನಿಸುವವರು ಮತ್ತು ರಸ್ತೆ ಬದಿ ಆಹಾರ ಪೊಟ್ಟಣಗಳನ್ನು ಎಸೆಯುವವರ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವನ್ಯಜೀವಿ ವಿಭಾಗವು ವಾರಾಂತ್ಯದಲ್ಲಿ ಕಾರ್ಯಾಚರಣೆಗೆ ಇಳಿದಿದೆ. ಈ ಕಾರ್ಯಾಚರಣೆಯಲ್ಲಿ ಸಿದ್ಧಾಪುರ ಸಹಾಯಕ ಅರಣ್ಯ ಸಂರಕ್ಷಣಾಧಿ ಕಾರಿ ಭಗವಸ್‍ದಾಸ್ ಕುಡ್ತಲ್‍ಕರ್, ಹೆಬ್ರಿ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್, ಅಮಾಸೆಬೈಲು ವಲಯ ಅರಣ್ಯಾಧಿಕಾರಿ ಸಂದೇಶ್ ಕುಮಾರ್ ಹಾಗೂ ನಾಲ್ಕು ವಲಯಗಳ...
ಹೆಚ್ಚಿನ ಸುದ್ದಿ

ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿ, 4 ವರ್ಷ ಜೈಲುವಾಸದ ನಂತರ ಬಿಡುಗಡೆಯಾದ ವಿ.ಕೆ ಶಶಿಕಲಾ ತಮಿಳುನಾಡಿನತ್ತ ಪ್ರಯಾಣ-ಕಹಳೆ ನ್ಯೂಸ್

ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕಾಗಿ 4 ವರ್ಷಗಳಿಂದ ಜೈಲು ಶಿಕ್ಷೆಗೆ ಗುರಿಯಾಗಿದ್ದ ಎಐಎಡಿಎಂಕೆ ಪಕ್ಷದ ಉಚ್ಚಾಟಿತ ನಾಯಕಿ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತ ಆಪ್ತೆ ವಿ.ಕೆ. ಶಶಿಕಲಾ ಇಂದು ತಮಿಳುನಾಡಿಗೆ ತೆರಳುತ್ತಿದ್ದಾರೆ. ಈ ಕಾರಣದಿಂದಾಗಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ತಮಿಳುನಾಡು-ಕರ್ನಾಟಕ ಗಡಿಯಲ್ಲಿ ಸುಮಾರು 1,500 ಪೊಲೀಸರನ್ನು ನಿಯೋಜಿಸಲಾಗಿದೆ. ಜನವರಿ 27 ರಂದು ಜೈಲಿನಿಂದ ಬಿಡುಗಡೆಗೊಂಡಿದ್ದ ಶಶಿಕಲಾ ಅವರಿಗೆ ಕೊರೊನಾ ಸೋಂಕು ತಗುಲಿದ್ದರಿಂದಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅದರ ನಂತರ...
ಹೆಚ್ಚಿನ ಸುದ್ದಿ

ವಿಟ್ಲ ಕಾಶಿಮಠದಲ್ಲಿ ಬೈಕ್ ಮತ್ತು ಬೊಲೆರೊ ಕಾರು ಡಿಕ್ಕಿ ; ಬೈಕ್ ಸವಾರ ಮೃತ್ಯು-ಕಹಳೆ ನ್ಯೂಸ್

ವಿಟ್ಲ : ವಿಟ್ಲ ಕಾಶಿಮಠ ಎಂಬಲ್ಲಿ ಬೈಕ್ ಮತ್ತು ಬೊಲೆರೊ ಕಾರು ಡಿಕ್ಕಿಯಾಗಿ ಸವಾರ ಮೃತ ಪಟ್ಟಿದ್ದಾರೆ. ಮೃತಪಟ್ಟ ಬೈಕ್ ಸವಾರ ಬಾಲಕೃಷ್ಣ ಶೆಟ್ಟಿ ಎಂದು ತಿಳಿದು ಬಂದಿದೆ. ಹಾಗೂ ಹೆಚ್ಚಿನ ಮಾಹಿತಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ....
ಹೆಚ್ಚಿನ ಸುದ್ದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣೆ, ಧರ್ಮಸ್ಥಳದಿಂದ 25 ರೂ.ಲಕ್ಷ ನಿಧಿ ಟ್ರಸ್ಟ್‍ಗೆ ಹಸ್ತಾಂತರ-ಕಹಳೆ ನ್ಯೂಸ್

ಧರ್ಮಸ್ಥಳ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ಶ್ರೀರಾಮ ಮಂದಿರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 25 ಲಕ್ಷ ನಿಧಿಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ಗೆ ಹಸ್ತಾಂತರಿದ್ದಾರೆ. ವಿಶ್ವ ಹಿಂದು ಪರಿಷತ್‍ನ ಪದಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದ್ದು, ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ಶ್ರೀ ಕ್ಷೇತ್ರದಿಂದ ಘೋಷಿಸಿದ್ದ 25 ಲಕ್ಷ ರೂ....
ಹೆಚ್ಚಿನ ಸುದ್ದಿ

ಧಾರವಾಡದ ವೆಂಕಟಾಪುರ ಗ್ರಾಮದಲ್ಲಿ ಜಮೀನಿಗೆ ಬೆಂಕಿ ಹಚ್ಚಿದ ಪರಿಣಾಮವಾಗಿ ಬೆಂಕಿಗೆ ಆಹುತಿಯಾದ 640ಕ್ಕೂ ಹೆಚ್ಚು ಮಾವಿನ ಗಿಡಗಳು-ಕಹಳೆ ನ್ಯೂಸ್

ಧಾರವಾಡ : ಧಾರವಾಡದ ವೆಂಕಟಾಪುರ ಗ್ರಾಮದಲ್ಲಿ ಜಮೀನಿಗೆ ಬೆಂಕಿ ಹಚ್ಚಿದ ಪರಿಣಾಮವಾಗಿ 640ಕ್ಕೂ ಹೆಚ್ಚು ಮಾವಿನ ಗಿಡಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ. ಜಮೀನಿನಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಒಣಗಿದ ಕಸಕ್ಕೆ ಬೆಂಕಿ ಹತ್ತಿಕೊಂಡಿದೆ. ಹಟೇಲಸಾಬ ಹಸನಸಾಬ ಮಮ್ಮಲೆದಿ ಎಂಬುವರ ಜಮೀನಿನಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಇವರ 15 ಎಕರೆ ಜಮೀನಿನಲ್ಲಿರುವ ಕಸಕ್ಕೆ ಹತ್ತಿಕೊಂಡ ಬೆಂಕಿ ನಂತರ ಜಮೀನಿಗೆ ಆವರಿಸಿಕೊಂಡಿದ್ದು, ಜಮೀನಿನಲ್ಲಿ ಬೆಳೆದ 640 ಮಾವಿನ ಗಿಡಗಳು ಬೆಂಕಿಗೆ ಆಹುತಿಯಾಗಿದೆ. ಇನ್ನೂ ವಿಷಯ...
ಹೆಚ್ಚಿನ ಸುದ್ದಿ

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಇದರ ವತಿಯಿಂದ ನಡೆದ ಪುತ್ತೂರು ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನ-ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಇದರ ವತಿಯಿಂದ ನಡೆದ ಪುತ್ತೂರು ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಆವರಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.   ಈ ಕಾರ್ಯಕ್ರಮದಲ್ಲಿ ಮಾನ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಶ್ರೀ ಎಸ್.ಅಂಗಾರ, ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಬೋರ್ಕರ್,...
1 60 61 62 63 64 132
Page 62 of 132