ಶ್ರೀರಾಮ ಮಂದಿರ ಕಲ್ಲಡ್ಕದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ-ಕಹಳೆ ನ್ಯೂಸ್
ಕಲ್ಲಡ್ಕ : ಶ್ರೀರಾಮ ಮಂದಿರ ಕಲ್ಲಡ್ಕದಲ್ಲಿ 45ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಮಕರ ಸಂಕ್ರಾಂತಿಯಂದು ನಡೆಯಿತು. ಸಂಜೆ ಪ್ರಾರಂಭಗೊಂಡ ಸತ್ಯನಾರಾಯಣ ಪೂಜೆಯಲ್ಲಿ ವಿಶೇಷವಾಗಿ 32 ನವದಂಪತಿಗಳು ವ್ರತಧಾರಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಡಾ. ಪ್ರಭಾಕರಭಟ್ ಕಲ್ಲಡ್ಕ ಇವರು ಪ್ರಸ್ತಾವಿಕ ಮಾತನಾಡಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಶುಭ ಹಾರೈಸಿದರು. ಹಾಗೂ ಒಡಿಯೂರು ಶ್ರೀ ಸಾಧ್ವಿ ಮಾತಾನಂದಮಯಿಯವರು ನವದಂಪತಿಗಳಿಗೆ ಶಾಲು ಹೊದಿಸಿ ಫಲಪುಷ್ಟ ನೀಡಿ ಆಶೀರ್ವದಿಸಿದರು. ಭಗವದ್ಗೀತೆಯ 18 ಅಧ್ಯಾಯಗಳನ್ನು ಕಂಠಪಾಠ...