ಅಯೋಧ್ಯೆ: ಗಣರಾಜ್ಯೋತ್ಸವ ದಿನ ಮಸೀದಿ ನಿರ್ಮಾಣಕ್ಕೆ ಶಂಕುಸ್ಥಾಪನೆ, ಈ ವಾರ ನೀಲನಕ್ಷೆ ಬಿಡುಗಡೆ – ಕಹಳೆ ನ್ಯೂಸ್
ಅಯೋಧ್ಯೆ: ಬಾಬ್ರಿ ಮಸೀದಿಗೆ ಬದಲಿಯಾಗಿ ನಿರ್ಮಾಣಗೊಳ್ಳಲಿರುವ ಮಸೀದಿಗೆ ನೀಲನಕ್ಷೆ ಸಿದ್ಧವಾಗುತ್ತಿದ್ದು ಇದೇ ಶನಿವಾರ ಅನಾವರಣಗೊಳ್ಳಲಿದೆ. ಮಸೀದಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮುಂದಿನ ತಿಂಗಳು ಜನವರಿಯ ಗಣರಾಜ್ಯೋತ್ಸವ ದಿನ ನೆರವೇರಲಿದೆ ಎಂದು ಮಸೀದಿ ನಿರ್ಮಾಣದ ಟ್ರಸ್ಟ್ ತಿಳಿಸಿದೆ. ಬಾಬ್ರಿ ಮಸೀದಿಗೆ ಬದಲಾಗಿ ನಿರ್ಮಿಸಲಿರುವ ಮಸೀದಿಗೆ ಅಯೋಧ್ಯೆಯಲ್ಲಿ 5 ಎಕರೆ ಜಮೀನನ್ನು ಮೀಸಲಿಡಲಾಗಿದ್ದು, 7 ದಶಕಗಳ ಹಿಂದೆ ಜಾರಿಗೆ ಬಂದ ಭಾರತದ ಸಂವಿಧಾನದ ದಿನವೇ ಶಂಕುಸ್ಥಾಪನೆ ನೆರವೇರಲಿದೆ. ನಮ್ಮ ಸಂವಿಧಾನ ಬಹುತ್ವವನ್ನು ಆಧಾರವಾಗಿಟ್ಟುಕೊಂಡಿದೆ, ಹೀಗಾಗಿ...