ಮುಂದಿನ ಬಜೆಟ್ ನಲ್ಲಿ ಭಾರತದ ಅಭಿವೃದ್ಧಿ ದರ ಹೆಚ್ಚಿಸಲು ಗಮನ : ನಿರ್ಮಲಾ ಸೀತಾರಾಮನ್ – ಕಹಳೆ ನ್ಯೂಸ್
ನವದೆಹಲಿ : ಮುಂದಿನ ಕೇಂದ್ರ ಬಜೆಟ್ ಭಾರತದ ಅಭಿವೃದ್ಧಿ ದರವನ್ನು ಹೆಚ್ಚಿಸುವತ್ತ ಗಮನ ಹರಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಭಾರತದ ಅರ್ಥ ವ್ಯವಸ್ಥೆ 2021-22ರಲ್ಲಿ ಪ್ರಗತಿ ಸಾಧಿಸಲಿದ್ದು, ಮುಂದಿನ ಫೆಬ್ರವರಿಯಲ್ಲಿ ಬಜೆಟ್ ನಲ್ಲಿ ಹೆಚ್ಚಿನ ವೆಚ್ಚ ಮಾಡುವ ಮೂಲಕ ಮುಂದಿನ 4-5 ವರ್ಷಗಳಲ್ಲಿ ಇನ್ನಷ್ಟು ಬಲಿಷ್ಠ ಬೆಳವಣಿಗೆಗೆ ಅಡಿಪಾಯ ಹಾಕಲಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ. '2021-22 ಬಹಳ ದೊಡ್ಡ, ಉತ್ತಮ ಟ್ರ್ಯಾಕ್ಷನ್ ವರ್ಷವಾಗಿದ್ದು, ನಿಜವಾಗಿಯೂ...