Sunday, January 19, 2025

ಕೃಷಿ

ಉಡುಪಿಕೃಷಿಸುದ್ದಿ

ಎಸ್.ವಿ.ಎಸ್ ವಿದ್ಯಾವರ್ಧಕ ಸಂಘ(ರಿ) ಕಟಪಾಡಿ ಮತ್ತು “ಉಸಿರಿಗಾಗಿ ಹಸಿರು” ಸಂಘಟನೆ ಜಂಟಿಯಾಗಿ ಆಯೋಜಿಸಿದ ಹಸಿರು ಅಭಿಯಾನ ಕಾರ್ಯಕ್ರಮ – ಕಹಳೆ ನ್ಯೂಸ್

ಎಸ್.ವಿ.ಎಸ್ ವಿದ್ಯಾವರ್ಧಕ ಸಂಘ(ರಿ) ಕಟಪಾಡಿ ಮತ್ತು “ಉಸಿರಿಗಾಗಿ ಹಸಿರು" ಸಂಘಟನೆ ಜಂಟಿಯಾಗಿ ಆಯೋಜಿಸಿದ ಹಸಿರು ಅಭಿಯಾನ ಕಾರ್ಯಕ್ರಮ ಎಸ್.ವಿ.ಎಸ್ ಆಂಗ್ಲಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಜರಗಿತು. ಕಾಪು ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಹಣ್ಣುಗಳ ಮತ್ತು ಔಷಧೀಯ ಸಸ್ಯಗಳ ವಿತರಣೆ ಮಾಡಿದರು. ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಂಡಾಗ ಮಾತ್ರ ನಾವು ಉತ್ತಮ ಬದುಕು ಸಾಗಿಸಲು ಸಾಧ್ಯ ಎಂದು ತಿಳಿಸುತ್ತಾ ವಿದ್ಯಾರ್ಥಿಗಳು ಬಾಲ್ಯದಿಂದಲೇ ಈ ಬಗ್ಗೆ...
ಉಡುಪಿಕೃಷಿಸುದ್ದಿ

ಹೈನುಗಾರರ ರೂ. 1100 ಕೋಟಿ ಪ್ರೋತ್ಸಾಹ ಧನ ಶೀಘ್ರ ಬಿಡುಗಡೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಪತ್ರ– ಕಹಳೆ ನ್ಯೂಸ್

ಕಳೆದ 8 ತಿಂಗಳಿಂದ ರಾಜ್ಯದ ಹೈನುಗಾರರಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆಗೆ ಬಾಕಿ ಇರುವ ಸುಮಾರು 1100 ಕೋಟಿ ಪ್ರೋತ್ಸಾಹ ಧನವನ್ನು ತಕ್ಷಣ ಏಕ ಕಂತಿನಲ್ಲಿ ಬಿಡುಗಡೆ ಮಾಡುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮುಖ್ಯ ಮಂತಿ ಸಿದ್ದರಾಮಯ್ಯ ರವರಿಗೆ ಪತ್ರ ಬರೆದು ಅಗ್ರಹಿಸಿದ್ದಾರೆ. ರಾಷ್ಟದಲ್ಲಿ ಎರಡನೇ ಅತೀ ದೊಡ್ಡ ಹಾಲು ಮಂಡಳವಾಗಿ ಕರ್ನಾಟಕ ಹಾಲು ಮಹಾ ಮಂಡಳ ಮೂಡಿ ಬಂದಿದ್ದು, ಇದರ ಆಶ್ರಯದಲ್ಲಿ 15 ಒಕ್ಕೂಟಗಳು ಕಾರ್ಯಾಚರಿಸುತ್ತಿದೆ. ಈ...
ಕೃಷಿದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ನಡೆದ ಕೃಷಿ ಸಖಿಯರಿಗೆ ನರೇಗಾ ಯೋಜನೆ ತರಬೇತಿ ಕಾರ್ಯಕ್ರಮ- ಕಹಳೆ ನ್ಯೂಸ್

ಬಂಟ್ವಾಳ: ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ತಾಲೂಕು ಪಂಚಾಯತ್‌ ಬಂಟ್ವಾಳ ಹಾಗೂ ತೋಟಗಾರಿಕೆ ಇಲಾಖೆ ಇದರ ಆಶ್ರಯದಲ್ಲಿ ತಾಲೂಕಿನ ಕೃಷಿ ಸಖಿಗಳಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕುರಿತು ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್‌ ಹೊಳ್ಳ, ಯೋಜನೆಯ ಸವಲತ್ತುಗಳನ್ನು ಗ್ರಾಮದ ಜನರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಕೃಷಿ ಸಖಿಯರ ಮೇಲಿದೆ. ವೈಯಕ್ತಿಕ ಆಸ್ತಿ ಸೃಜನೆಗೆ ಸಹಾಯಧನ ನೀಡುವ ಅತ್ಯುತ್ತಮ ಯೋಜನೆ...
ಕೃಷಿದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶಂಬೂರು ಶೌರ್ಯ ಘಟಕದ ವತಿಯಿಂದ ನರಿಕೊಂಬು ಗ್ರಾಮದ ಕೋದಂಡರಾಮ ದೇವಸ್ಥಾನ ನಾಟಿ ಬೀದಿಯಲ್ಲಿ ಗಿಡನಾಟಿ ಕಾರ್ಯಕ್ರಮ– ಕಹಳೆ ನ್ಯೂಸ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಿ ಸಿ ಟ್ರಸ್ಟ್ (ರಿ.)ಬಂಟ್ವಾಳ ಇದರ ಪಾಣೆ ಮಂಗಳೂರು ವಲಯದ ಶಂಬೂರು ಶೌರ್ಯ ಘಟಕದವತಿಯಿಂದ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಕೋದಂಡರಾಮ ದೇವಸ್ಥಾನ ನಾಟಿ ಬೀದಿ ಇಲ್ಲಿ ಗಿಡ ನಾಟಿ ಕಾರ್ಯಕ್ರಮ ಮಾಡಲಾಯಿತು. ದಕ್ಷಿಣ ಕನ್ನಡ ಸಹಕಾರಿ ಯೂನಿಯನ್ ಸಂಘ ದ ನಿರ್ದೇಶಕ ಪುರುಷೋತ್ತಮ್ ಸಾಲಿಯಾನ್ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶೌರ್ಯ ತಂಡದ ಸದಸ್ಯರು ಸಮಾಜ ಸೇವೆಯ ಜೊತೆಗೆ ತನ್ನ ಗ್ರಾಮ...
ಕೃಷಿದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿ

ಪೆರಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ : ಪರಿಸರ ದಿನಾಚರಣೆಯು ಕೇವಲ ಒಂದು ಕಾರ್ಯಕ್ರಮಕ್ಕೆ ಸಿಮಿತವಾಗದೆ,ಪ್ರತಿದಿನವು ಅದನ್ನು ಪೋಷಿಸುವಂತಾಗಬೇಕು : ಪ್ರಫುಲ್ ಶೆಟ್ಟಿ – ಕಹಳೆ ನ್ಯೂಸ್

ಬಂಟ್ವಾಳ: ಪರಿಸರ ದಿನಾಚರಣೆ ಕಾರ್ಯಕ್ರಮ ಮಾಡುವ ಮೂಲಕ ಪರಿಸರವನ್ನು ಉಳಿಸಿ,ಬೆಳೆಸುವಂತ ಕೆಲಸವಾಗಬೇಕು. ಇಂತಹ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಸಿಮಿತವಾಗದೆ ಪ್ರತಿದಿನವು ಪರಿಸರವನ್ನು ಪೋಷಿಸುವಂತ ಕೆಲಸ ಆಗಬೇಕು.ಜಗದ ಪ್ರತಿಯೊಬ್ಬನಿಗೂ ಪರಿಸರ ಅತ್ಯಮೂಲ್ಯ ಮತ್ತು ಅತ್ಯಗತ್ಯ. ಪ್ರಕೃತಿಯಿಂದ ನಮಗೆ ಉಪಯೋಗವಿದೆ,ಗಾಳಿ,ನೆರಳು, ಹೀಗೆ ವಿವಿಧ ರೀತಿಯಲ್ಲಿ ಪರಿಸರವು ನಮಗೆ ಸಹಕಾರಿಯಾಗಿದೆ ಎಂದು ಬಂಟ್ವಾಳದ ವಲಯ ಅರಣ್ಯಾಧಿಕಾರಿಯಾದ ಪ್ರಫುಲ್ ಶೆಟ್ಟಿ ಹೇಳಿದರು. ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ಪೆರಾಜೆ ಇಲ್ಲಿ ಯುವವಾಹಿನಿ(ರಿ.) ಮಾಣಿ ಘಟಕದ...
ಕೃಷಿದಕ್ಷಿಣ ಕನ್ನಡಬೆಂಗಳೂರುಸುದ್ದಿ

ರೈತರಿಗೆ ಗುಡ್ ನ್ಯೂಸ್: ಇಂದಿನಿAದ ಕೊಬ್ಬರಿ ಖರೀದಿ ಪ್ರಕ್ರಿಯೆ ಆರಂಭ! –ಕಹಳೆ ನ್ಯೂಸ್

ಬೆಂಗಳೂರು : ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದಲ್ಲಿ  ಇಂದಿನಿAದ  ಕೊಬ್ಬರಿ ಖರೀದಿ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ನಡೆಸಲಾಗಿದೆರಾಜ್ಯದ 9 ಜಿಲ್ಲೆಗಳಲ್ಲಿ ಉಂಡೆ ಕೊಬ್ಬರಿ ಖರೀದಿ ಪ್ರಕ್ರಿಯೆ ಆರಂಭವಾಗಲಿದ್ದು, ಮಾ. 9 ಕ್ಕೆ ಕೊಬ್ಬರಿ ಮಾರಾಟಕ್ಕೆ ನೋಂದಣಿ ಅಂತ್ಯವಾಗಿದ್ದು9 ಜಿಲ್ಲೆಯಿಂದ 58,893 ರೈತರು ನೋಂದಣಿ ಮಾಡಿಸಿದ್ದಾರೆ. ಕೊಬ್ಬರಿ ಖರೀದಿಸಲು ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು ನೋಡೆಲ್ ಏಜೆನ್ಸಿಯಾಗಿ ನೇಮಿಸಲಾಗಿದೆ. ಮೈಸೂರು, ಚಾಮರಾಜನಗರ ಮತ್ತು ತುಮಕೂರು ಜಿಲ್ಲೆಯಲ್ಲಿ ಮಾರಾಟ ಮಂಡಳಿಯಿAದ...
ಕೃಷಿದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬಂದಾರು : ಕುಂಟಾಲಪಳಿಕೆ ಪ್ರದೇಶದ ನೆಲ್ಲಿಗೇರಿಗೆ ದಾಳಿ ನಡೆಸಿದ ಒಂಟಿ ಸಲಗ : ಭತ್ತದ ಕೃಷಿಗೆ ಹಾನಿ – ಕಹಳೆ ನ್ಯೂಸ್

ಬಂದಾರು : ಬಂದಾರು ಗ್ರಾಮದ ಕುಂಟಾಲಪಳಿಕೆ ಪ್ರದೇಶದ ನೆಲ್ಲಿಗೇರು ಎಂಬಲ್ಲಿ ಮುಂಜಾನೆ ಒಂಟಿ ಸಲಗ ದಾಳಿ ಮಾಡಿದೆ. ನೇತ್ರಾವತಿ ನದಿಯ ಬಿಬಿಮಜಲ್ ಪ್ರದೇಶದಲ್ಲಿ ಘೀಳಿಡುವ ಶಬ್ದ ಕೇಳಿಬಂದ್ದಿದು, ಇಂದು ಮುಂಜಾನೆ ಮೋನಪ್ಪ ಗೌಡ ನೆಲ್ಲಿಗೇರು ಇವರ ಗದ್ದೆಯಲ್ಲಿ ಭತ್ತದ ಕೃಷಿಯನ್ನು ಹಾನಿ ಮಾಡಿದ್ದೂ ಹತ್ತಿರದ ರಾಮಣ್ಣ ನೆಲ್ಲಿಗೇರು ಇವರ ಕೃಷಿ ಪಂಪ್ ಹಾಗೂ ಕೇಬಲ್ ಗೆ ಹಾನಿ ಮಾಡಿದ್ದೂ, ಅಪಾರ ನಷ್ಟ ಊಟಾಗಿದ್ದು ಬೆಳಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ...
ಕೃಷಿದಕ್ಷಿಣ ಕನ್ನಡಪುತ್ತೂರುಸುದ್ದಿ

ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿರುವ ಮಾವು ಹಾಗೂ ಹಲಸಿನ ಮರಗಳನ್ನು ಏಲಂ ಕರೆಯದಂತೆ ಶಾಸಕರ ಸೂಚನೆ – ಕಹಳೆ ನ್ಯೂಸ್

ಪುತ್ತೂರು: ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿರುವ ಮತ್ತು ಸರಕಾರಿ ಜಾಗದಲ್ಲಿರುವ ಮಾವಿನ ಮರ ಹಾಗೂ ಹಲಸಿನ ಮರಗಳನ್ನು ಅದರ ಹಣ್ಣುಗಳಿಗಾಗಿ ಏಲಂ ಮಾಡಬಾರದು ಎಂದು ಪುತ್ತೂರು ನಗರಸಭಾ ಕಮಿಷನರ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕರಾದ ಅಶೋಕ್ ರೈ ಯವರು ಸೂಚನೆಯನ್ನು ನೀಡಿದ್ದಾರೆ. ಮಾವಿನ ಮಿಡಿ ಕೊಯ್ಯವ ಉದ್ದೇಶದಿಂದ ಮಾವಿನ ಮರವನ್ನು ಏಲಂ ಮಾಡಲಾಗುತ್ತಿದೆ. ಅನೇಕ ವರ್ಷಗಳಿಂದ ಮಾವಿನ ಮರಗಳನ್ನು ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಏಲಂ ಕರೆಯಲಾಗುತ್ತದೆ. ಏಲಂ...
1 2 3 4 5
Page 2 of 5