ರಾಷ್ಟ್ರೀಯ ವಿಚಾರಧಾರೆ ಸೆಲೆಯಾಗಿ ವಿದ್ಯಾರ್ಥಿಗಳನ್ನು ಜ್ಞಾನ ದೀವಿಗೆಗಳನ್ನಾಗಿಸುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಪುತ್ತೂರಿನ ಪ್ರತಿಷ್ಠಿತ ವಿವೇಕಾನಂದ ವಿದ್ಯಾರ್ವಧಕ ಸಂಘದ ನರೇಂದ್ರ ಪದವಿಪೂರ್ವ ಕಾಲೇಜು – ಕಹಳೆ ನ್ಯೂಸ್
ರಾಷ್ಟ್ರೀಯ ಚಿಂತನೆಗಳಿಂದೊಳಗೊಂಡು ಮೌಲ್ಯಯುತ ಶಿಕ್ಷಣದ ಮೂಲಕವಾಗಿ ಶತಮಾನದ ಇತಿಹಾಸವುಳ್ಳ ವಿವೇಕಾನಂದ ವಿದ್ಯಾವರ್ಧಕ ಸಂಘದ ೫೭ ನೇ ವಿದ್ಯಾ ಸಂಸ್ಥೆಯಾಗಿ ಪುತ್ತೂರಿನ ಹೃದಯ ಭಾಗದಲ್ಲಿರುವ ತೆಂಕಿಲದಲ್ಲಿ ನರೇಂದ್ರ ಪದವಿ ಪೂರ್ವ ಕಾಲೇಜು ಪ್ರವರ್ಧಮಾನಕ್ಕೆ ಬಂದಿರುತ್ತದೆ. ಒಬ್ಬ ಸಾಮಾನ್ಯ ವಿದ್ಯಾರ್ಥಿಯನ್ನು ಮಾನಸಿಕವಾಗಿ ಸದೃಢನನ್ನಾಗಿಸಿ , ಬೌದ್ಧಿಕ ಸಾಮರ್ಥ್ಯವನ್ನು ವೃದ್ಧಿಸಿ , ವಿದ್ಯಾರ್ಥಿಗೆ ಕಲಿಕೆಯ ಅನುಭವವನ್ನು ಮೂರ್ತರೂಪದಲ್ಲಿ ನೀಡಲು , ಕ್ರೀಡಾಸ್ಫೂರ್ತಿಯನ್ನು ವೃದ್ಧಿಸಿ ಸಂಸ್ಕಾರಯುತವಾದ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗೆ ಸತ್ಕಾರ್ಯವನ್ನು ಮಾಡಲು ಮತ್ತು ಸಮಾಜಮುಖಿ...