ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ ಶ್ರೀಕೃಷ್ಣನ್ ಹರಿಹರ ಶರ್ಮ ಅಧಿಕಾರ ಸ್ವೀಕಾರ – ಕಹಳೆ ನ್ಯೂಸ್
ಮಂಗಳೂರು: ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಶ್ರೀಕೃಷ್ಣನ್ ಹರಿಹರ ಶರ್ಮ ಅವರು ಬೆಂಗಳೂರಿನ ಬುಲ್‌ಟೆಂಪಲ್ ರಸ್ತೆಯ ಬ್ಯಾಂಕಿನ ಕಚೇರಿಯಲ್ಲಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಇವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ. ಅಧಿಕಾರ ಸ್ವೀಕರಿಸಿ ಮಾತನಾಡಿದ ಶ್ರೀಕೃಷ್ಣನ್, 'ಕರ್ಣಾಟಕ ಬ್ಯಾಂಕ್ ಕುಟುಂಬಕ್ಕೆ ಸೇರಲು ಬಹಳ ಹೆಮ್ಮೆಯಾಗುತ್ತಿದೆ. ನಂಬಿಕೆ ಮತ್ತು ಒಳ್ಳೆಯ ಹೆಸರನ್ನು ತಳಪಾಯವಾಗಿ ಬೆಳೆಸಿಕೊಂಡು ಸತತ ನೂರು ವರ್ಷಗಳ ಕಾಲವೂ ಲಾಭವನ್ನು ಘೋಷಿಸುತ್ತಾ ಬಂದಿರುವ...