Saturday, January 18, 2025

ಜಿಲ್ಲೆ

ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಬಿಳಿಯೂರಿನ ತಿಪ್ಪಕೋಡಿ ಮನೆಯಂಗಳದಲ್ಲಿ ಜ.22ರಂದು ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ಬಯಲಾಟ – ಕಹಳೆ ನ್ಯೂಸ್

ಉಪ್ಪಿನಂಗಡಿ : ಬಿಳಿಯೂರಿನ ತಿಪ್ಪಕೋಡಿ ಬಾಲಕೃಷ್ಣ ಮಹಾಬಲ ರೈ ಯವರ ಮನೆಯಂಗಳದಲ್ಲಿ ಜ.22ರ ಸಂಜೆ 6 ಗಂಟೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ಶನೀಶ್ವರ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ಅಪರಾಹ್ನ 3.30ರಿಂದ 5.30ರವರೆಗೆ ಶ್ರೀ ದುರ್ಗಾ ಮಹಾಲಕ್ಷ್ಮೀ ಭಜನಾ ಮಂಡಳಿ ಶ್ರೀಧಾಮ ಮಾಣಿಲದವರಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ ಶ್ರೀ ದೇವಿಯ ಪ್ರಸಾದ ರೂಪವಾಗಿ ಅನ್ನಸಂತರ್ಪಣೆ ನಡೆಯಲಿದೆ....
ರಾಜ್ಯವಾಣಿಜ್ಯಸುದ್ದಿಹಾಸನ

ಹಾಸನ ವಿಮಾನ ನಿಲ್ದಾಣ ಕುರಿತು ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಜತೆ ಮಹತ್ವದ ಮಾತುಕತೆ ನಡೆಸಿದ ಹೆಚ್‌ ಡಿ ಕುಮಾರಸ್ವಾಮಿ – ಕಹಳೆ ನ್ಯೂಸ್

ನವದೆಹಲಿ : ಕರ್ನಾಟಕದ ಮೂಲಸೌಕರ್ಯ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರ ಜತೆ ಮಹತ್ವದ ಮಾತುಕತೆ ನಡೆಸಿದರು. ನವದೆಹಲಿಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ನಾಯ್ಡು ಅವರನ್ನು ಭೇಟಿಯಾದ ಕುಮಾರಸ್ವಾಮಿ ಅವರು, ಎರಡು ಪ್ರಮುಖವಾದ ಮನವಿ ಪತ್ರಗಳನ್ನು ಸಲ್ಲಿಸಿದರು. ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿರುವ ಕೃಷ್ಣರಾಜ ಸಾಗರ (ಕೆ ಆರ್ ಎಸ್) ಜಲಾಶಯದಲ್ಲಿ ಸೀಪ್ಲೇನ್...
ಬೆಳಗಾವಿಸುದ್ದಿ

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಬೇಟಿಯಾಗಿ ಆರೋಗ್ಯ ವಿಚಾರಿಸಿದ ಮೈಸೂರು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ – ಕಹಳೆ ನ್ಯೂಸ್

ಬೆಳಗಾವಿ: ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳು ಬೆಳಗಾವಿಯ ವಿಜಯಾ ಆಸ್ಪತ್ರೆಗೆ ಭೇಟಿ ನೀಡಿ, ರಸ್ತೆ ಅಪಘಾತದಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಆರೋಗ್ಯ ಕುರಿತು ಮಾಹಿತಿ ಪಡೆದರು. ಇದೇ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲಾ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಆಸ್ಪತ್ರೆಗೆ ತೆರಳಿ ಲಕ್ಷ್ಮೀ ಹೆಬ್ಬಾಳಕರ್ ಅವರ ಅರೋಗ್ಯ ವಿಚಾರಿಸಿದರು....
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಕೋಟೆಕಾರು ಬ್ಯಾಂಕ್ ದರೋಡೆಯಿಂದ ಸಿಎಂ ಸಿದ್ದರಾಮಯ್ಯನವರಿಗೆ ರಾಜ್ಯದ ಕಾನೂನು-ಸುವ್ಯವಸ್ಥೆಯ ಸತ್ಯ ದರ್ಶನ: ಸಂಸದ ಕ್ಯಾ. ಚೌಟ-ಕಹಳೆ ನ್ಯೂಸ್

ಮಂಗಳೂರು: ಸಿಎಂ ಸಿದ್ದರಾಮಯ್ಯನವರು ಮಂಗಳೂರಿನಲ್ಲಿರುವಾಗಲೇ ಹಾಡಹಗಲೇ ದುಷ್ಕರ್ಮಿಗಳು ಬ್ಯಾಂಕ್ ದರೋಡೆ ನಡೆಸುವ ಮೂಲಕ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಎಷ್ಟಮಟ್ಟಿಗೆ ಹದಗೆಟ್ಟು ಹೋಗಿದೆ ಎಂಬುದರ ಸತ್ಯ ದರ್ಶನದ ಅರಿವು ಕಾಂಗ್ರೆಸ್ ಸರ್ಕಾರಕ್ಕೆ ಆಗಿದ್ದು, ಇದೊಂದು ಅತ್ಯಂತ ಆತಂಕ ಹಾಗೂ ನಾಚಿಕೆ ಗೇಡಿನ ವಿಚಾರ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ. ಉಳ್ಳಾಲದ ಕೋಟೆಕಾರು ಸಹಕಾರಿ ಬ್ಯಾಂಕ್ ಗೆ ದುಷ್ಕರ್ಮಿಗಳ ಗ್ಯಾಂಗ್ ಹಾಡಹಗಲೇ ನುಗ್ಗಿ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ, ಹಣ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಫೆ.09ರಿಂದ ಫೆ.11ರವರೆಗೆ ಕುಂಜೂರುಪಂಜದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ನೇಮೋತ್ಸವ – ಕಹಳೆ ನ್ಯೂಸ್

ಶ್ರೀ ದುರ್ಗಾ ಭಜನಾ ಮಂದಿರ (ರಿ.) ಕುಂಜೂರುಪಂಜ ಇದರ 22ನೇ ವರ್ಷದ ವಾರ್ಷಿಕೋತ್ಸವ ಮತ್ತು ನೂತನವಾಗಿ ನಿರ್ಮಿಸಿರುವ ಗ್ರಾಮದೈವಗಳಾದ ಇರುವೆರ್ ಉಳ್ಳಾಕುಲು ಇದರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವವು ಫೆ.09ರಿಂದ ಫೆ.11ರವರೆಗೆ ನಡೆಯಲಿದೆ. ಫೆ.09ರಂದು ಹೊರಕಾಣಿಕೆ ನಡೆದು, ಫೆ.10ರಂದು ಬೆಳಿಗ್ಗೆ ಗಂಟೆ 8-48ರ ಮೀನ ಲಗ್ನದ ಶುಭ ಮುಹೂರ್ತದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ಶ್ರೀ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ವೇದಮೂರ್ತಿ ಶ್ರೀ ಉದಯ ನಾರಾಯಣ ಕಲ್ಲೂರಾಯರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ...
ಕ್ರೈಮ್ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಕೋಟೆಕಾರ್ ಬ್ಯಾಂಕ್ ದರೋಡೆ: ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಸಭೆ-ಕಹಳೆ ನ್ಯೂಸ್

ಮಂಗಳೂರು: ಕೋಟೆಕಾರ್ ಉಳ್ಳಾಲದ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿಗಳು ಶೀಘ್ರ ಆರೋಪಿಗಳ ಪತ್ತೆಗೆ ಖಡಕ್ ಸೂಚನೆ ನೀಡಿದರು. ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಪಶ್ಚಿಮ ರೇಂಜ್ ನ ಐಜಿ ಅಮಿತ್, ಪೊಲೀಸ್ ಆಯುಕ್ತ ಸಿಂಗ್, ಅನುಪಮ್ ಅಗರವಾಲ್, ಎಸ್.ಪಿ ಯತೀಶ್, ಡಿವೈಎಸ್ಪಿ ಸೇರಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಘಟನೆಯ ಕುರಿತಂತೆ ಸಮಗ್ರ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿ

ಶ್ರೀರಾಮ ಆಂಗ್ಲಮಾಧ್ಯಮ ಶಾಲಾ ಕಛೇರಿ ವಿಕ್ರಮಾದಿತ್ಯದ ಉದ್ಘಾಟನಾ ಸಮಾರಂಭ: ಕಹಳೆ ನ್ಯೂಸ್

ಬಂಟ್ವಾಳ: ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯ ಕಛೇರಿ ವಿಕ್ರಮಾದಿತ್ಯದ ಉದ್ಘಾಟನಾ ಸಮಾರಂಭವು ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ  ಎಡನೀರು ಮಠ, ಕಾಸರಗೋಡು ಇವರ ದಿವ್ಯ ಹಸ್ತದಿಂದ ನೆರವೇರಿತು. ಮೊದಲಿಗೆ ಗಣಪತಿ ಹೋಮವು ಶ್ರೀ ಸೂರ್ಯ ನಾರಾಯಣ ಭಟ್ ಕಶೆಕೋಡಿ ಇವರ ನೇತೃತ್ವದಲ್ಲಿ ನಡೆಯಿತು. ಕುಮಾರಿ ಪದ್ಮಶ್ರೀ ಪ್ರಾರ್ಥಿಸಿದರು. ಉದ್ಘಾಟನಾ ಸಮಾರಂಭದ ಆಶೀರ್ವಚನದಲ್ಲಿ ಸ್ವಾಮೀಜಿಯವರು ಯಾವುದೇ ಸಂಸ್ಕಾರ ವಿಲ್ಲದ ವಿದ್ಯೆ ಪರಿಮಳವಿಲ್ಲದ ಪುಷ್ಪದಂತೆ ಹಾಗೂ ರುಚಿ ಇಲ್ಲದ ಹಣ್ಣಿನಂತೆ ಎನ್ನುತ್ತಾ...
ಉಡುಪಿಜಿಲ್ಲೆಸುದ್ದಿ

ಹಿಂದೂ ಜನಜಾಗೃತಿ ಸಮಿತಿಯಿಂದ ಉಡುಪಿ ಮತ್ತು ಮಣಿಪಾಲದಲ್ಲಿ ಮೌನ ಪ್ರತಿಭಟನೆ -ಕಹಲೆ ನ್ಯೂಸ್

ಉಡುಪಿ : ಕಳೆದ ಅನೇಕ ವರ್ಷಗಳಿಂದ ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಅತ್ಯಂತ ಅಮಾನವೀಯವಾಗಿ ಆಕ್ರಮಣಗಳಾಗುತ್ತಿದ್ದು ಹಿಂದೂಗಳನ್ನು ಅತ್ಯಂತ ಬರ್ಬರವಾಗಿ ಹತ್ಯೆ ಮಾಡುವುದು ಹಿಂದೂ ಸ್ತ್ರೀಯರನ್ನು ಅತ್ಯಾಚಾರ ಮಾಡುವುದು, ಹಿಂದೂಗಳ ಆಸ್ತಿಯನ್ನು ವಶಪಡಿಸಿಕೊಳ್ಳುವುದು ನಿರಂತರ ನಡೆಯುತ್ತಿದೆ. ಅನೇಕ ದೇಶಗಳಲ್ಲಿ ಬಾಂಗ್ಲಾದೇಶದಲ್ಲಿ ಅಧ್ಯಾತ್ಮ ಪ್ರಸಾರ ಮಾಡುವ ಇಸ್ಕಾನ್ ಸಂಸ್ಥೆಯ ಮೇಲೆ ಅಕ್ರಮಣವನ್ನು ನಡೆಸಿ ಅದರ ಪ್ರಮುಖರ ಮೇಲೆ ದಾಳಿ ಮಾಡುವುದು, ಅವರನ್ನು ಅಕ್ರಮವಾಗಿ ಬಂಧಿಸುವAತಹ ಅಮಾನವೀಯ ಕೃತ್ಯಗಳು ನಡೆಯುತ್ತಿದ್ದು ಇದರ ಬಗ್ಗೆ...
1 2 3 627
Page 1 of 627