ಶಿರೂರು ಗುಡ್ಡ ಕುಸಿತ : ನಾಪತ್ತೆಯಾದ ಅರ್ಜುನ್ಗಾಗಿ ತೀವ್ರ ಶೋಧ! ಹುಡುಕಾಟಕ್ಕೆ ಮತ್ತೊಂದು ತಂಡ ಆಗಮನ – ಕಹಳೆ ನ್ಯೂಸ್
ಶಿರೂರು: ಹೆದ್ದಾರಿಯಲ್ಲಿ ಬದಿ ಲಾರಿಯನ್ನು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಗುಡ್ಡ ಕುಸಿದು ಯುವಕ ನಾಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಸಂಭವಿಸಿತ್ತು. ಕೇರಳ ಕೋಝಿಕ್ಕೋಡ್ ಮೂಲದ ಯುವಕ ಅರ್ಜುನ್ (30) ಲಾರಿ ಚಾಲಕನಾಗಿದ್ದು, ಜುಲೈ 16ರಂದು ಬೆಳಗಾವಿಯಿಂದ ಟ್ರಕ್‌ನಲ್ಲಿ ಸುಮಾರು 40 ಟನ್‌ಗಳಷ್ಟು ಮರ ತುಂಬಿಕೊಂಡು ಕೋಝಿಕ್ಕೋಡ್ ಮಾರ್ಗ ತೆರಳುತ್ತಿದ್ದರು. ಈ ದುರ್ಘಟನೆ ಸಂಭವಿಸಿದಾಗ ಆತ ಶಿರೂರು ಬಳಿ ರಾತ್ರಿ ವಿಶ್ರಾಂತಿ ಪಡೆಯುತ್ತಿದ್ದರು ಎಂದು ವರದಿಯಾಗಿದೆ. ಭೂಕುಸಿತವು ಹೆದ್ದಾರಿಯ...